ಕಣ್ಣೂರು ಬೀಡು ತರ್ಬಿಯತುಲ್ ಅನಾಮ್ ಮದ್ರಸದಲ್ಲಿ ಸ್ಥಾಪನಾ ದಿನಾಚರಣೆ

ಮಂಗಳೂರು: ಎಸ್‌ಕೆಎಸ್‌ಬಿವಿ ಇದರ ಸ್ಥಾಪನೆ ದಿನದ ಪ್ರಯುಕ್ತ ಕಣ್ಣೂರು ಬೀಡು ತರ್ಬಿಯತುಲ್ ಅನಾಮ್ ಮದ್ರಸದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮತ್ತು ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ, ಎಸ್‌ಕೆಎಸ್‌ಬಿವಿ ರಾಜ್ಯ ಸಮಿತಿ ಆಯೋಜಿಸಿರುವ ಜ್ಞಾನ ತೀರಂ ಪರೀಕ್ಷೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ, ಎಸ್‌ಕೆಎಸ್‌ಬಿವಿ ಸ್ಥಾಪನೆ ದಿನದ ಪ್ರಯುಕ್ತ ನಡೆದ ಸ್ಪರ್ಧೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿರಾಜುದ್ದೀನ್ ಅನ್ಸಾರಿ ದುಆಗೈದರು. ಎಸ್‌ಕೆಎಸ್‌ಬಿವಿ ಸ್ಥಾಪನೆ ದಿನದ ಕುರಿತು ಝಮೀರ್ ಅನ್ಸಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮದ್ರಸ ಅಧ್ಯಕ್ಷ ಮುಹಮ್ಮದ್ ರಿಯಾಝ್ ಧ್ವಜಾರೋಹಣಗೈದರು.
ಮದ್ರಸ ಕಾರ್ಯದರ್ಶಿ ಮುಹಮ್ಮದ್ ರಿಯಾಝ್, ಎಸ್‌ಕೆಎಸ್‌ಎಸ್‌ಎಫ್ ಅಡ್ಯಾರ್ ಕಣ್ಣೂರು ಕ್ಲಸ್ಟರ್ ಅಧ್ಯಕ್ಷ ಮುನೀರ್ ಅಬ್ದುಲ್ ಖಾದರ್, ಮದ್ರಸದ ಸದಸ್ಯ ಮುಹಮ್ಮದ್ ಆಸೀಫ್, ಎಸ್‌ಕೆಎಸ್‌ಬಿವಿ ಬೀಡು ಶಾಖೆಯ ಸದಸ್ಯ ಸೈಯ್ಯದ್ ಫೈಝಾನ್ ತಂಳ್, ಎಸ್‌ಕೆಎಸ್‌ಬಿವಿ ಅಡ್ಯಾರ್ ಕಣ್ಣೂರು ರೇಂಜ್ ಅಧ್ಯಕ್ಷ ಝೈನುಲ್ ಆಬಿದ್, ಎಸ್‌ಕೆಎಸ್‌ಬಿವಿ ಬೀಡು ಶಾಖೆಯ ಅಧ್ಯಕ್ಷ ಇಬ್ರಾಹಿಂ ಶಾಝಿಲ್, ಕೋಶಾಧಿಕಾರಿ ಮುಹಮ್ಮದ್ ನಹೀಂ ಭಾಗವಹಿಸಿದರು.
