ಉಡುಪಿ: ಗಾಂಜಾ, ಎಂಡಿಎಂಎ, ನಿಷೇಧಿತ ಮಾದಕ ವಸ್ತು ಸಹಿತ ಆರೋಪಿ ವಶಕ್ಕೆ

ಉಡುಪಿ: ಗಾಂಜಾ ಸಹಿತ ನಿಷೇಧಿತ ಮಾದಕ ವಸ್ತುಗಳ ಸಹಿತ ಓರ್ವ ಆರೋಪಿಯನ್ನು ಮಣಿಪಾಲದ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಣಿಪಾಲ ಸರಳೆಬೆಟ್ಟಿನ ವಸತಿ ಸಂಕೀರ್ಣವೊಂದರಲ್ಲಿ ವಾಸವಿದ್ದ ಇಕ್ಬಾಲ್(32) ಬಂಧಿತ ಯುವಕ. ಖಚಿತ ಮಾಹಿತಿ ಮೇರೆಗೆ ಪೊಲೀಸರು ನಡೆಸಿದ ದಾಳಿಯಲ್ಲಿ ಆರೋಪಿಯಿಂದ 41 ಗ್ರಾಂ ಗಾಂಜಾ, 1.3 ಎಂಡಿಎಂಎ ಮಾತ್ರೆಗಳು, 2 ಮೊಬೈಲ್ ಮತ್ತು ಸ್ಕೂಟರೊಂದನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ನಿಷೇದಿತ ಮಾದಕ ವಸ್ತು ಮತ್ತು ಸ್ಕೂಟರ್ ನ ಒಟ್ಟು ಮೌಲ್ಯ 38,810ರೂ. ಎಂದು ಅಂದಾಜಿಸಲಾಗಿದೆ.
(ಬಂಧಿತ ಆರೋಪಿ ಇಕ್ಬಾಲ್)
ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಉಡುಪಿ ಡಿವೈಎಸ್ಪಿ ದಿನಕರ ಕೆ.ಪಿ, ಮಣಿಪಾಲ ಠಾಣೆ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ, ಠಾಣೆಯ ಉಪನಿರೀಕ್ಷಕ ಅಬ್ದುಲ್ ಖಾದರ್, ಪ್ರೊಬೇಶನರಿ ಪಿಎಸ್ಐ ನಿಧಿ, ಉಡುಪಿ ಸಹಾಯಕ ಡ್ರಗ್ಸ್ ಕಂಟ್ರೋಲರ್ ಶಂಕರ ನಾಯ್ಕ್, ಗ್ರಾಮ ಲೆಕ್ಕಾಧಿಕಾರಿಗಳಾದ ಪ್ರಮೋದ ಕುಮಾರ್ ಮತ್ತು ಗುರುಪ್ರಸಾದ್, ಮಣಿಪಾಲ ಠಾಣೆಯ ಎ.ಎಸ್.ಐ ಶೈಲೇಶ್ ಕುರ್ಮಾ, ಸಿಬ್ಬಂದಿಗಳಾದ ಇಮ್ರಾನ್, ಸಂತೋಷ್, ಸುರೇಶ ಕುರ್ಮಾ, ಅರುಣ್ ಕುರ್ಮಾ, ಆನಂದಯ್ಯ, ಚನ್ನೇಶ್, ಮಂನಜುನಾಥ, ಸುದೀಪ್ ತಂಡ ಕಾರ್ಯಾಚರಣೆಯಲ್ಲಿದ್ದರು.