ಉಜಿರೆ: ಆಟೋ ರಿಕ್ಷಾಕ್ಕೆ ಬೊಲೋರೊ ಢಿಕ್ಕಿ; ನಾಲ್ಕು ಮಂದಿಗೆ ಗಂಭೀರ ಗಾಯ

ಉಜಿರೆ: ಆಟೋಗೆ ಬೊಲೋರೊವೊಂದು ಢಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ನಾಲ್ಕು ಮಂದಿ ಗಂಭೀರ ಗಾಯಗೊಂಡ ಘಟನೆ ಉಜಿರೆಯ ಓಡಲ ಕ್ರಾಸ್ ನಲ್ಲಿ ಬುಧವಾರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಓಡಲ ಕ್ರಾಸ್ ನಲ್ಲಿ ಬೆಳಾಲು ಕಡೆಯಿಂದ ಉಜಿರೆ ಕಡೆಗೆ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಉಜಿರೆ ಕಡೆಯಿಂದ ಬರುತ್ತಿದ್ದ ಬೊಲೋರೊ ವಾಹನ ಢಿಕ್ಕಿಯಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಭೀರವಾಗಿ ಗಾಯಗೊಂಡವರನ್ನು ರಿಕ್ಷಾ ಚಾಲಕ ಗುರಿಪಳ್ಳ ನಿವಾಸಿ ಪ್ರವೀಣ್(42) , ಕುಪ್ಪೆಟ್ಟಿ ನಿವಾಸಿ ರಫೀಕ್(55) ಕೊಟ್ಟಿಗೆಹಾರ ನಿವಾಸಿಗಳಾದ ಸುಹೈಲ್ (30) ಹಾಗೂ ಚೇತನ್(27) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Next Story





