ಅಮೆರಿಕದಲ್ಲು ಚಳಿ-ಚಂಡಮಾರುತ: ಮೃತರ ಸಂಖ್ಯೆ 50ಕ್ಕೆ ಏರಿಕೆ
![ಅಮೆರಿಕದಲ್ಲು ಚಳಿ-ಚಂಡಮಾರುತ: ಮೃತರ ಸಂಖ್ಯೆ 50ಕ್ಕೆ ಏರಿಕೆ ಅಮೆರಿಕದಲ್ಲು ಚಳಿ-ಚಂಡಮಾರುತ: ಮೃತರ ಸಂಖ್ಯೆ 50ಕ್ಕೆ ಏರಿಕೆ](https://www.varthabharati.in/sites/default/files/images/articles/2022/12/28/361676-1672251088.jpeg)
ವಾಷಿಂಗ್ಟನ್, ಡಿ.28: ಅಮೆರಿಕಕ್ಕೆ ಅಪ್ಪಳಿಸಿರುವ ಚಳಿ ಚಂಡಮಾರುತದಿಂದ ಹಲವು ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು ಮೃತರ ಸಂಖ್ಯೆ 50ರ ಗಡಿದಾಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಶ್ಚಿಮ ನ್ಯೂಯಾರ್ಕ್ನ ಎರೀ ಕೌಂಟಿಯಲ್ಲಿ ಮಂಗಳವಾರ ಮತ್ತೆ 3 ಮೃತದೇಹಗಳು ಪತ್ತೆಯಾಗಿದೆ. ಬಫೆಲೊ ನಗರದಲ್ಲೆಡೆ ಎದೆಮಟ್ಟಕ್ಕೆ ಮಂಜು ಆವೃತಗೊಂಡಿದ್ದು ರಸ್ತೆಗಳು ಮಂಜಿನಿಂದ ಮುಚ್ಚಿಹೋಗಿವೆ ಎಂದು ನಗರದ ಮೇಯರ್ ಬೈರನ್ ಬ್ರೌನ್ ಹೇಳಿದ್ದಾರೆ.
Next Story