ಚೀನಾ: ದಟ್ಟ ಮಂಜಿನಿಂದ ವಾಹನಗಳ ಸರಣಿ ಅಪಘಾತ

ಬೀಜಿಂಗ್, ಡಿ.28: ಮಧ್ಯಚೀನಾದ ಹೆನಾನ್ ಪ್ರಾಂತದಲ್ಲಿ ದಟ್ಟವಾದ ಮಂಜು ಮುಸುಕಿದ್ದರಿಂದ ಬುಧವಾರ ಬೆಳಿಗ್ಗೆ ಝೆಂಗ್ಝಾವೊ ನಗರದಲ್ಲಿನ ಸೇತುವೆಯಲ್ಲಿ 200ಕ್ಕೂ ಅಧಿಕ ವಾಹನಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ ಎಂದು ಸರಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ.
ಝೆಂಗ್ಕ್ಸಿನ್ ಹ್ವಾಂಗ್ ಸೇತುವೆಯಲ್ಲಿ ಕಾರುಗಳು ಡಿಕ್ಕಿಯಾಗಿ ಒಂದರ ಮೇಲೊಂದು ಏರಿನಿಂತಿರುವ ವೀಡಿಯೊಗಳನ್ನು ಸಿಸಿಟಿವಿ ಪ್ರಸಾರ ಮಾಡಿದೆ.
ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು ಸೇತುವೆಯಲ್ಲಿ ಟ್ರಾಫಿಕ್ ಜಾಂ ಆಗಿದ್ದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಗೋಚರತೆ 200 ಮೀಟರ್ಗೂ ಕಡಿಮೆಯಿತ್ತು ಎಂದು ವರದಿಯಾಗಿದೆ.
Next Story