ಹಿರಿಯ ಪತ್ರಕರ್ತ, ಲೇಖಕ ಎಂ.ಎಸ್ ಪ್ರಭಾಕರ (ಕಾಮರೂಪಿ) ನಿಧನ

ಕೋಲಾರ, ಡಿ. 29 : ಪತ್ರಿಕೋದ್ಯಮದ ಹಿರಿಯ ಜೀವಿ ನಾಡಿನ ಹೆಸರಾಂತ ಪತ್ರಕರ್ತ ಕಾಮರೂಪಿ ಕಾವ್ಯ ನಾಮದ ಎಂ.ಎಸ್. ಪ್ರಭಾಕರ (87) ಗುರುವಾರ ಬೆಳಿಗ್ಗೆ 11-30ಕ್ಕೆ ವಯೋಸಹಜ ನಿಧನರಾಗಿದ್ದಾರೆ.
ಕೋಲಾರ ತಾಲ್ಲೂಕು ಮಟ್ನಹಳ್ಳಿ ಗ್ರಾಮದ ಸೂರಪ್ಪ -ಸುಬ್ಬಮ್ಮ ದಂಪತಿಯ 11ನೇ ಕೊನೆಯ ಮಗ ಎಂ. ಎಸ್. ಪ್ರಭಾಕರ್ ಕೋಲಾರದ ಕಟಾರಿಪಾಳ್ಯದಲ್ಲಿ ವಾಸವಾಗಿದ್ದರು.
ಪ್ರಭಾಕರ್ ರವರು ತಮ್ಮ ಸ್ನಾತಕೋತ್ತರ ಶಿಕ್ಷಣ ಮುಕ್ತಾಯವಾದ ನಂತರ ಮೊದಲಿಗೆ ರಾಜ್ಯದ ದಾರವಾಡ, ಬೆಂಗಳೂರು ಮುಂತಾದ ಕಡೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಬದಲಾದ ಸನ್ನಿವೇಶದಲ್ಲಿ ಅವರು ಪೂರ್ಣವದಿ ಪತ್ರಕರ್ತರಾಗಿ ಪತ್ರಿಕೋದ್ಯಮ ಪ್ರವೇಶ ಮಾಡಿದರು.
ದೇಶದ ವಿವಿಧ ರಾಜ್ಯಗಳಲ್ಲಿ 'ದಿ. ಹಿಂದೂ' ಪತ್ರಿಕೆಯಲ್ಲಿ ಕೆಲಸ ಮಾಡಿರುವ ಇವರು ದಕ್ಷಿಣ ಆಫ್ರಿಕದಲ್ಲೂ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದವರಾಗಿದ್ದು, ಅಲ್ಲಿನ ಸ್ವಾತಂತ್ರ್ಯ ಹೋರಾಟಗಾರ ನೆಲ್ಸನ್ ಮಂಡೇಲಾ ಅವರ ಸಂದರ್ಶನ ನಡೆಸಿದ ಭಾರತದ ಮೊದಲ ಪತ್ರಕರ್ತರಾಗಿದ್ದರು.
ವೃತ್ತಿ ಜೀವನದ ನಂತರ ಕೋಲಾರ ಕಟಾರಿಪಾಳ್ಯದ ಸ್ವಗೃಹದಲ್ಲಿ ನೆಲೆಸಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ಇವರ ವೃತ್ತಿ ಜೀವನದ ಅನುಭವ ಹಾಗೂ ಭಾವಗಳನ್ನ ಧಾರೆ ಎಳೆದಿದ್ದಾರೆ.
87 ವರ್ಷದ ತಮ್ಮ ಜೀವನದಲ್ಲಿ ಅಪಾರ ಅಭಿಮಾನಿಗಳನ್ನು ಅಗಲಿದ ಇವರು ತಮ್ಮ ದೇಹವನ್ನು ಬೆಂಗಳೂರಿನ ಎಂ. ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿಗೆ ದಾನ ಧನ್ಯತೆಯನ್ನು ಪಡೆದಿದ್ದಾರೆ.
ಇವರ ಪಾರ್ಥೀವ ಶರೀರವನ್ನು ಗುರುವಾರ ಮಧ್ಯಾಹ್ನ ಬೆಂಗಳೂರಿನ ರಾಮಯ್ಯ ವೈದ್ಯಕೀಯ ಕಾಲೇಜಿಗೆ ನೀಡಲಾಗಿದೆ.
ಅವರ ಕೃತಿಗಳು: ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಎಂಬ ಕಥಾ ಸಂಕಲನ ಮತ್ತು `ಕುದುರೆ ಮೊಟ್ಟೆ’ ಮತ್ತು ಅಂಜಿಕಿನ್ಯಾತಕಯ್ಯ ‘ ಎಂಬ ಕಿರು ಕಾದಂಬರಿಗಳಾದ ಬರೆದಿದ್ದಾರೆ. ಕಾಮರೂಪಿಯವರ ಕಥೆ, ಕಾದಂಬರಿ, ಕವನ, ಬರಹ, ಬ್ಲಾಗ್ ಬರಹಗಳನ್ನೊಳಗೊಂಡ ಕಾಮರೂಪಿ ಸಮಗ್ರ ಕೃತಿಯನ್ನು ಸಂಚಯ ಪುಸ್ತಕ ಪ್ರಕಾಶನ ಪ್ರಕಟಿಸಿದೆ.
ಇದನ್ನೂ ಓದಿ: 'ಕುದುರೆ ಮೊಟ್ಟೆ'ಯ ಕಾಮ ರೂಪಿ








