Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್...

ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ವಿಲೀನಕ್ಕೆ ಸರಕಾರ, ಸಂಸದರು, ಶಾಸಕರು ನೇರ ಹೊಣೆ: ಮುನೀರ್ ಕಾಟಿಪಳ್ಳ ಆರೋಪ

ಉಡುಪಿ: ಸಾಮೂಹಿಕ ಜನಾಗ್ರಹ ಧರಣಿ

29 Dec 2022 4:24 PM IST
share
ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ವಿಲೀನಕ್ಕೆ ಸರಕಾರ, ಸಂಸದರು, ಶಾಸಕರು ನೇರ ಹೊಣೆ: ಮುನೀರ್ ಕಾಟಿಪಳ್ಳ ಆರೋಪ
ಉಡುಪಿ: ಸಾಮೂಹಿಕ ಜನಾಗ್ರಹ ಧರಣಿ

ಉಡುಪಿ: ಸುರತ್ಕಲ್ ಟೋಲ್‌ನಿಂದ ತಮಗೆ ಬರಬೇಕಿದ್ದ ಸುಂಕ ಬರಲೇಬೇಕೆಂಬ ಉದ್ದೇಶದಿಂದಲೇ ಅದನ್ನು ಹೆಜಮಾಡಿ ಟೋಲ್‌ನಲ್ಲಿ ವಿಲೀನಗೊಳಿಸಲು ರಾಜ್ಯ ಸರಕಾರ, ಕರಾವಳಿಯ ಸಂಸದರು ಹಾಗೂ ಶಾಸಕರು ನೇರ ಹೊಣೆ ಎಂದು ಜನಪರ ಹೋರಾಟಗಾರ ಮುನೀರ್ ಕಾಟಿಪಳ್ಳ ವಾಗ್ದಾಳಿ ನಡೆಸಿದ್ದಾರೆ.

ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ಸಂಗ್ರಹದ ವಿಲೀನ ಆದೇಶದ ಶಾಶ್ವತ ವಾಪಾಸಾತಿಗೆ ಆಗ್ರಹಿಸಿ, ಆದೇಶದ ವಿಚಾರದಲ್ಲಿ ಜನಪ್ರತಿನಿಧಿಗಳ ಬೇಜವಾಬ್ದಾರಿತನವನ್ನು ಖಂಡಿಸಿ ಗುರುವಾರ ಇಲ್ಲಿನ ಬನ್ನಂಜೆಯಲ್ಲಿರುವ  ಉಡುಪಿ ತಾಲೂಕು ಕಚೇರಿ ಮುಂಭಾಗ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ದ.ಕ ಮತ್ತು ಉಡುಪಿ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡ ‘ಸಾಮೂಹಿಕ ಜನಾಗ್ರಹ ಧರಣಿ’ಯನ್ನುದ್ದೇಶಿಸಿ ಅವರು ಮಾತನಾಡಿದರು.

ದ.ಕ-ಉಡುಪಿ ಜಿಲ್ಲೆಯ ಜನತೆ ನಡೆಸಿದ ಒಗ್ಗಟ್ಟಿನ ಪಕ್ಷಾತೀತ ಹೋರಾಟಕ್ಕೆ ಮಣಿದ ಸರಕಾರ ಅಕ್ರಮ ಟೋಲ್ ಸಂಗ್ರಹದ ಸುರತ್ಕಲ್ ಫ್ಲಾಜಾ  ಮುಚ್ಚಿದ್ದು, ಇದು ಜನರ ಗೆಲುವೇ ಹೊರತು ಸರಕಾರದ ಜನಪ್ರತಿನಿಧಿ ಗಳದ್ದಲ್ಲ. ಜನಸಾಮಾನ್ಯರಿಂದ ತೆರಿಗೆ, ಸುಂಕದ ಹೆಸರಿನಲ್ಲಿ ಸುಲಿಗೆ ಮಾಡುವದನ್ನೇ ಅಭ್ಯಾಸ ಮಾಡಿಕೊಂಡಿರುವ ಬಿಜೆಪಿ ಸರಕಾರ ಮುಚ್ಚಲ್ಪಟ್ಟ ಸುರತ್ಕಲ್ ಟೋಲ್ ಗೇಟ್‌ನ ಸುಂಕವನ್ನು ಹೆಜಮಾಡಿಯ ನವಯುಗ ಟೋಲ್ ಗೇಟ್‌ನಲ್ಲಿ ಸಂಗ್ರಹಿಸುವ ವಿಲೀನ ಯೋಜನೆಯನ್ನು ಆದೇಶ ದಲ್ಲಿ ಪ್ರಕಟಿಸಿರುವುದು ಕಾನೂನು ಬಾಹಿರ ವ್ಯವಸ್ಥೆ ಎಂದರು.

ದ.ಕ., ಉಡುಪಿ ಜಿಲ್ಲೆಯಲ್ಲಿ ಜನಾಭಿಪ್ರಾಯದ ಒತ್ತಡಕ್ಕೆ ಮಣಿದು ಎಚ್ಚೆತ್ತ ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಜಿಲ್ಲಾಡಳಿತದ ಸಭೆ ನಡೆಸಿ ಹೆಜಮಾಡಿಯಲ್ಲಿ ತಕ್ಷಣಕ್ಕೆ ಹೆಚ್ಚುವರಿ ಟೋಲ್ ಸಂಗ್ರಹಿಸದಂತೆ ಹೆದ್ದಾರಿಪ್ರಾಧಿಕಾರಕ್ಕೆ ವಿನಂತಿಸಿ ತಾತ್ಕಾಲಿಕ ತಡೆಯನ್ನು ಹಾಕಿದ್ದು, ಇದೊಂದು ತಾತ್ಕಾಲಿಕ ವ್ಯವಸ್ಥೆ. ಹೀಗಾಗಿ ರಾಜ್ಯ ಸರಕಾರದ ಅಧಿಕೃತ ಒಪ್ಪಿಗೆಯೊಂದಿಗೆ ಹೆದ್ದಾರಿ ಪ್ರಾಧಿಕಾರ ಹೊರಡಿಸಿರುವ ವಿಲೀನ ಆದೇಶ ಯಾವುದೇ ಸಂದರ್ಭ ದಲ್ಲಿ ಜಾರಿಗೊಳ್ಳಬಹುದು. ಉಭಯ ಜಿಲ್ಲೆಗಳ ಜನಪ್ರತಿನಿಧಿಗಳು ತಮ್ಮ ಕರ್ತವ್ಯ ಲೋಪವನ್ನು ಮರೆಮಾಚಲು ಹಾಗೂ ಮುಂಬರುವ ಚುನಾವಣೆಯ ಭಯದಿಂದ ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಸಂಗ್ರಹವನ್ನು ತಾತ್ಕಾಲಿಕವಾಗಿ ಮುಂದೂಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾರೆ ಎಂದವರು ಜಿಲ್ಲೆಯ ಜನತೆಯನ್ನು ಎಚ್ಚರಿಸಿದರು.

ಸುರತ್ಕಲ್ ಟೋಲ್ ಅನ್ನು ವಿಲೀನಗೊಳಿಸಿ ಹೆಜಮಾಡಿ ಟೋಲ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ  ಸುಂಕ ಸಂಗ್ರಹಿಸಲು ಹೋದರೆ ಸಮಸ್ಯೆ ಆಗುತ್ತದೆ. ಹೀಗಾಗಿ ಉಳಿಕೆಯಾಗಿರುವ 60 ಕೋಟಿಯನ್ನು ರಾಜ್ಯ ಸರಕಾರ ಭರಿಸುತ್ತದೆ. ಅಲ್ಲದೆ, ಸರಕಾರ, ಬಂದರು ಹಾಗೂ ಪ್ರಾಧಿಕಾರಿಗಳು ಹಂಚಿಕೊಂಡು ಹಣ ಭರಿಸುತ್ತೇವೆ ಎಂಬ ಪ್ರಸ್ತಾಪವನ್ನು ಮುಂದಿಡಬಹುದಿತ್ತು.ಆದರೆ ಇದ್ಯಾವುದೇ ಪ್ರಸ್ತಾಪವನ್ನು ಅವರು ಮುಂದಿಟ್ಟಿಲ್ಲ ಎಂದ ಮುನೀರ್ ಕಾಟಿಪಳ್ಳ, ತಕ್ಷಣವೇ ಹೆಜಮಾಡಿಯಲ್ಲಿ ಸುರತ್ಕಲ್ ಟೋಲ್ ಸುಂಕ ಸಂಗ್ರಹಿಸುವ ಆದ್ಯಾದೇಶ ವಾಪಾಸ್ ಪಡೆಯಬೇಕು ಹಾಗೂ ಖಾಯಂ ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದರು.

ಮಾನವ ಹಕ್ಕುಗಳ ಹೋರಾಟಗಾರ ಫಾ.ವಿಲಿಯಂ ಮಾರ್ಟಿಸ್ ತಮ್ಮ ಉದ್ಘಾಟನಾ ಭಾಷಣದಲ್ಲಿ, ಸುರತ್ಕಲ್ ಹಾಗೂ ಹೆಜಮಾಡಿ ಟೋಲ್ ಸಮಸ್ಯೆ ಕೇವಲ ಉಭಯ ಜಿಲ್ಲೆಗೆ ಸೀಮಿತವಲ್ಲ. ರಾಜ್ಯಕ್ಕೆ ಬರುವ ಪ್ರತಿಯೊಬ್ಬರು ಈ ಟೋಲ್‌ಗೇಟ್ ಮೂಲಕವೇ ಹಾದುಹೋಗುವಾಗ ಸುಂಕ ನೀಡಬೇಕು. ಡಬ್ಬಲ್ ಇಂಜಿನ್ ಎಂದು ಹೇಳುವ ಸರ್ಕಾರ ಡಬ್ಬ ಹಿಡಿದು ಜನರ ಬಳಿ ಹೋಗಿ ಸುಲಿಗೆ ಮಾಡುತ್ತಿದ್ದು, ಇದೊಂದು ’ಡಬ್ಬಾ’ ಸರ್ಕಾರ ಎಂದು ಟೀಕಿಸಿದರು.

ಎರಡೂ ಜಿಲ್ಲೆಗಳ ಸಂಸದರು, ಶಾಸಕರ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಹಾಗೂ ಘೋಷಣೆಗಳನ್ನು ಕೂಗಿ ಅಸಮಾಧಾನ ಹೊರಹಾಕಿದರು.

ಪ್ರತಿಭಟನೆಯಲ್ಲಿ ಹಿರಿಯ ಸಾಮಾಜಿಕ ಹೋರಾಟಗಾರ ಪ್ರೊ.ಫಣಿರಾಜ್, ಉದ್ಯಾವರ ನಾಗೇಶ್‌ಕುಮಾರ್, ದಲಿತ ಮುಖಂಡರಾದಸುಂದರ ಮಾಸ್ತರ್, ಶೇಖರ ಹೆಜಮಾಡಿ, ಮಂಜುನಾಥ ಗಿಳಿಯಾರು, ಕಾಂಗ್ರೆಸ್ ಮುಖಂಡರಾದ ಶ್ಯಾಮಲಾ ಭಂಡಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಕುಂದರ್ ಕೋಟ, ವಾಮನ್ ಬಂಗೇರ ಕಡೆಕಾರು, ಕೇಶವ ಕೋಟ್ಯಾನ್, ಹಿರಿಯಡ್ಕ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಲಾಲ್, ರೋಶನಿ ಒಲಿವೇರಾ, ಸಿಪಿಐಎಂ ಮುಖಂಡರಾದ ಕೆ. ಶಂಕರ್, ಬಾಲಕೃಷ್ಣ ಶೆಟ್ಟಿ,  ಶಿವಾನಂದ ಸಿಐಟಿಯು ಮುಖಂಡರಾದ ಸುರೇಶ್ ಕಲ್ಲಾಗರ, ಎಚ್. ನರಸಿಂಹ, ರಾಮ ಕಾರ್ಕಡ, ಚಂದ್ರಶೇಖರ, ಬೈಂದೂರು ಸಿಐಟಿಯು ಮುಖಂಡ ಲೊನಾಲ್ಡ್, ನಗರಸಭೆ ಮಾಜಿ ಅಧ್ಯಕ್ಷೆ ಆನಂದಿ, ರೋಶನ್ ಶೆಟ್ಟಿ, ಹೋರಾಟದ ಪ್ರಮುಖರಾದ ಇದ್ರಿಸ್ ಕೋಡಿಬೆಂಗ್ರೆ, ಅನಂತ ನಾಯ್ಕ್, ಮನ್ನಾ ಸಾಬ್, ಚಿಕ್ಕ ಮೊಗವೀರ, ಶಶಿಧರ ಗೊಲ್ಲ, ಸತೀಶ್ ಮಂಚಿ, ಗಣೇಶ್ ದೊಡ್ಡನಗುಡ್ಡೆ, ಅಣ್ಣಪ್ಪ, ಅಲ್ವಿನ್ ಅಂದ್ರಾದೆ, ಯಾಸಿನ್ ಕೋಡಿಬೆಂಗ್ರೆ, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೆರಾ, ಲೂಯಿಸ್ ಲೊಬೋ, ಸುರೇಶ್ ಶೆಟ್ಟಿ ಬನ್ನಂಜೆ, ಸುರತ್ಕಲ್ ಟೋಲ್‌ಗೇಟ್ ಹೋರಾಟ ಸಮಿತಿಯ ರಾಘವೇಂದ್ರ ರಾವ್, ಬಿ.ಕೆ.ಇಮ್ತಿಯಾಜ್, ಶ್ರೀನಾಥ್ ಕುಲಾಲ್, ಮೂಸಬ್ಬ ಪಕ್ಷಿಕೆರೆ, ರಮೇಶ್ ಟಿ.ಎನ್, ಅಯಾಝ್ ಕೃಷ್ಣಾಪುರ, ರಘು ಎಕ್ಕಾರು, ಬಿ. ಶೇಖರ,ರಮೇಶ ಸುವರ್ಣ ಮೂಲ್ಕಿ, ಕರುಣಾಕರ ಮುಂತಾದವರಿದ್ದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಹಾಗೂ ದಲಿತ ಮುಖಂಡ ಶೇಖರ ಹೆಜಮಾಡಿ ನಿರೂಪಿಸಿ, ಸ್ವಾಗತಿಸಿದರು.

ಪೊಲೀಸರೊಂದಿಗೆ ವಾಗ್ವಾದ

ಪ್ರತಿಭಟನೆ ನಡೆಸಲು ಇಲಾಖೆ ಅನುಮತಿ, ಧ್ವನಿವರ್ಧಕ ಪರವಾನಿಗೆ ವಿಚಾರದಲ್ಲಿ ಸ್ಥಳಕ್ಕಾಗಮಿಸಿದ ಉಡುಪಿನಗರ ಠಾಣೆ ನಿರೀಕ್ಷಕ ಮಂಜಪ್ಪ ಡಿ.ಆರ್ ಪ್ರಶ್ನಿಸಿದಾಗ ಪ್ರತಿಭಟನಾ ನಿರತರು ಅವರೊಂದಿಗೆ ವಾಗ್ವಾದಕ್ಕೆ ಮುಂದಾದರು.

ಅನುಮತಿ ಪಡೆಯದೆ ಹಲವರು ಇಲ್ಲಿ ಪ್ರತಿಭಟನೆ ನಡೆಸುತ್ತಾರೆ. ನಾವು ಪರವಾನಿಗೆ ಕೇಳಲು ಬಂದರೆ ಇಲಾಖೆ ನೀಡುವುದಿಲ್ಲ ಎಂದು ರಮೇಶ್ ಕಾಂಚನ್ ಅಸಮಧಾನ ವ್ಯಕ್ತಪಡಿಸಿದರು. ಸುಂದರ್ ಮಾಸ್ತರ್ ಹಾಗೂ ಇತರರು ಅವರೊಂದಿಗೆ ಧ್ವನಿಗೂಡಿಸಿದರು.

ಕೊನೆಗೆ ಧ್ವನಿವರ್ಧಕದ ಶಬ್ದ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಇನ್‌ಸ್ಪೆಕ್ಟರ್ ಪ್ರತಿಭಟನ ನಿರತರಿಗೆ ಸೂಚಿಸಿದರು.

ನಮ್ಮ ಹೋರಾಟ ಬಿಜೆಪಿ ಸರಕಾರಕ್ಕೆ ಸ್ಪಷ್ಟ ಎಚ್ಚರಿಕೆ. ಸುರತ್ಕಲ್ ಮುಕ್ಕಾದಿಂದ ನಂತೂರುವರೆಗಿನ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆ ಯೆಂದು ಘೋಷಣೆ ಮಾಡಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಮುಂದಾಗಬೇಕು. ಈ ಕೆಲಸವನ್ನು ಮಾಡದೆ ಬೇರೆ ಬೇರೆ ವಿಧಾನದಲ್ಲಿ ಟೋಲ್ ಸಂಗ್ರಹಕ್ಕೆ ಪ್ರಯತ್ನಿಸಿದರೆ, ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಟೋಲ್ ರೀತಿಯಲ್ಲಿ ಸರಕಾರ ಕೂಡ ಅರಬ್ಬಿ ಸಮುದ್ರ ಪಾಲಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂಬ ಎಚ್ಚರಿಕೆ ಯನ್ನು ರಘುಪತಿ ಭಟ್ ಹಾಗೂ ಅವರ ಗ್ಯಾಂಗ್‌ಗೆ ಕೊಡುತ್ತೇನೆ.

-ಮುನೀರ್ ಕಾಟಿಪಳ್ಳ, ಜನಪರ ಹೋರಾಟಗಾರ

ಸುರತ್ಕಲ್‌ನ ಮುಕ್ಕಾದಿಂದ ಬಿ.ಸಿ.ರೋಡ್‌ವರೆಗಿನ ರಸ್ತೆಗೆ ಬ್ರಹ್ಮರಕೂಟ್ಲು ನಲ್ಲಿ ಮತ್ತೊಂದು ಟೋಲ್ ಗೇಟ್ ಇದೆ. ಆ ಟೋಲ್‌ನಲ್ಲಿ ಗುತ್ತಿಗೆದಾರರು ಪ್ರತಿದಿನ ೫ ಲಕ್ಷ ರೂ. ಸಂಗ್ರಹ ಮಾಡಿ ಹೆದ್ದಾರಿ ಪ್ರಾಧಿಕಾರಕ್ಕೆ ನೀಡುತ್ತಿದ್ದಾರೆ. ಒಂದು ವರ್ಷಕ್ಕೆ ೧೮ ಕೋಟಿ ರೂ. ಹಣ ಸಂಗ್ರಹ ಮಾಡಲಾಗುತ್ತದೆ. ಆ ೧೮ ಕೋಟಿ ರೂ. ಅದೇ ರಸ್ತೆಯ ಬಾಕಿ ಉಳಿಕೆಯನ್ನು ಭರ್ತಿ ಮಾಡಲು ಅವಕಾಶವಿದೆ. ಆ ಪ್ರಸ್ತಾಪವನ್ನು ಚರ್ಚೆ ಮಾಡಲು ನಮ್ಮ ಜನಪ್ರತಿನಿಧಿಗಳು ಮುಂದೆ ಬರಲಿಲ್ಲ. ಅದೆಲ್ಲದೆ ನವಮಂಗಳೂರು ಬಂದರಿಗೆ ಸಂಪರ್ಕಿಸುವ ರಸ್ತೆಗೆ ಶೇ.25ರಷ್ಟು ಹಣವನ್ನು ನವಮಂಗಳೂರು ಬಂದರು ಹಾಕಿದೆ. ಎಂಆರ್‌ಪಿಎಲ್‌ನಂತಹ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸೇರಿಸಿಕೊಂಡು 60ರಿಂದ 70 ಕೋಟಿ ಸಂಗ್ರಹಿಸಿ ಆ ರಸ್ತೆಯನ್ನು ಟೋಲ್ ಮುಕ್ತ ರಸ್ತೆಯನ್ನಾಗಿ ಮಾಡುವುದು ಅಸಾಧ್ಯವಾಗಿರಲಿಲ್ಲ. ಆದರೆ ಆ ಸಭೆಯಲ್ಲಿ ಉಭಯ ಜಿಲ್ಲೆಗಳ ಸಂಸದರು, ಸಚಿವರು, ಶಾಸಕರು ಹಾಜರಾಗದಿರುವುದು ದುರಂತ.

-ಮುನೀರ್ ಕಾಟಿಪಳ್ಳ

ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದ್ಯಾದೇಶ ರಾಜ್ಯ ಸರಕಾರದ ಅಧಿಕೃತ ಒಪ್ಪಿಗೆಯೊಂದಿಗೆ ಪ್ರಕಟಗೊಂಡಿದೆ. ಹೆಜಮಾಡಿ ಟೋಲ್ ಪ್ಲಾಜಾದ ಮಾಲಕತ್ವ ಹೊಂದಿರುವ  ನವಯುಗ ಕಂಪೆನಿಯು ಸಂಗ್ರಹಕ್ಕೆ ಹಿಂದೇಟು ಹಾಕಿರುವುದರಿಂದ ತಾತ್ಕಾಲಿಕವಾಗಿಯಷ್ಟೆ ಹೆಜಮಾಡಿಯಲ್ಲಿ ಸಂಗ್ರಹಕ್ಕೆ ತಡೆ ಬಿದ್ದಿದೆ. ಜಿಲ್ಲಾಡಳಿತ ಸಮಾಯಾವಕಾಶ ಕೇಳಿದ್ದರೂ ರಾಜ್ಯ ಸರಕಾರದ ಒಪ್ಪಿಗೆ ಸಿಕ್ಕಿರು ವುದರಿಂದ ಯಾವುದೇ ಕ್ಷಣದಲ್ಲಿ ಸಂಗ್ರಹ ಆರಂಭಗೊಳ್ಳಬಹುದು. ಈ ಹಿನ್ನೆಲೆಯಲ್ಲಿ ಸಮಾನಮನಸ್ಕರು ಸೇರಿ ಧರಣಿ ಹಮ್ಮಿಕೊಂಡಿದ್ದು ಅಗತ್ಯ ಬಿದ್ದರೆ ಉಡುಪಿಯಲ್ಲೂ ಅನಿರ್ದಿಷ್ಟಾವಧಿ ಧರಣಿಗೆ ಸಿದ್ದ. ಇವತ್ತಿನ ಧರಣಿ ಸರಕಾರಕ್ಕೆ ಒಂದು ಎಚ್ಚರಿಕೆ ಸಂದೇಶ. ಹೆಜಮಾಡಿಯಲ್ಲಿ ಹೆಚ್ಚಳ ಮಾಡಿದ ಟೋಲ್ ಶುಲ್ಕಕ್ಕೆ ಶಾಶ್ವತವಾಗಿ ತಡೆ ನೀಡಬೇಕು ಎಂಬುದು ಧರಣಿ ನಿರತರ ಮುಖ್ಯ ಬೇಡಿಕೆ.

-ರಮೇಶ್ ಕಾಂಚನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ.

share
Next Story
X