ಕುದ್ರೋಳಿ: ಯುನಿವೆಫ್ ಸೀರತ್ ಸಮಾವೇಶ

ಮಂಗಳೂರು, ಡಿ.29: ಯುನಿವೆಫ್ ಕರ್ನಾಟಕ ಇದರ ‘ಮಾನವ ಸಮಾಜ, ಸಂಸ್ಕೃತಿ ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ವಿಷಯದಲ್ಲಿ ನಡೆಯುತ್ತಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಪ್ರಯುಕ್ತ ಕುದ್ರೋಳಿ ಶಾಖೆಯ ವತಿಯಿಂದ ಕುದ್ರೋಳಿ ಎ1 ಭಾಗ್ ನಲ್ಲಿ ಸೀರತ್ ಸಮಾವೇಶ ನಡೆಯಿತು.
‘ನಮ್ಮ ಜೀವನ ಮತ್ತು ಪ್ರವಾದಿ (ಸ) ರ ಬೋಧನೆಗಳು’ ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಖ್ಯ ಭಾಷಣ ಮಾಡಿದರು.
ವೇದಿಕೆಯಲ್ಲಿ ಅಭಿಯಾನ ಸಂಚಾಲಕ ಯು.ಕೆ. ಖಾಲಿದ್, ಝುಬೈರ್ ಮತ್ತು ಹಿರಿಯ ಸದಸ್ಯ ಅಬ್ದುರ್ರಶೀದ್ ಉಪಸ್ಥಿತರಿದ್ದರು.
ಶಕೀಲ್ ಮಸೂದ್ ಕಿರಾಅತ್ ಪಠಿಸಿದರು. ಹುದೈಫ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುದ್ರೋಳಿ ಶಾಖಾದ್ಯಕ್ಷ ವಕಾಝ್ ಅರ್ಶಲನ್ ಕಾರ್ಯಕ್ರಮ ನಿರೂಪಿಸಿದರು.
Next Story





