ನಕಲಿ ಮದ್ಯ, ಕಳ್ಳಭಟ್ಟಿ ತಡೆಗಟ್ಟಲು ಗ್ರಾಮ ಸಭೆ

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.29: ನಕಲಿ ಮದ್ಯ, ಕಳ್ಳಭಟ್ಟಿ ಸೇರಿದಂತೆ ಇನ್ನಿತರೆ ಸೇವನೆಯಿಂದ ಉಂಟಾಗುವ ಅನಾಹುತ ಕುರಿತು ಅಬಕಾರಿ ಇಲಾಖೆಯಿಂದಲೇ ಗ್ರಾಮ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಸಚಿವ ಬಿ.ಎ.ಬಸವರಾಜ ತಿಳಿಸಿದ್ದಾರೆ.
ಗುರುವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಗೆ ಅಬಕಾರಿ ಸಚಿವ ಗೋಪಾಲಯ್ಯ ಪರವಾಗಿ ಉತ್ತರಿಸಿದ ಅವರು, ಅಬಕಾರಿ ಅಕ್ರಮಗಳ ಕುರಿತು ಮಾಹಿತಿ ನೀಡಲು ತಿಳುವಳಿಕೆ ಪತ್ರ ಜಾರಿಗೊಳಿಸಲಾಗಿದೆ.ಇದರ ಜೊತೆಗೆ ಸಾರ್ವಜನಿಕವಾಗಿ ಅರಿವು ಮೂಡಿಸಲು ಇಲಾಖೆಯಿಂದ ಗ್ರಾಮ ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.
Next Story





