ಸ್ಫೋಟ ಪ್ರಕರಣದ ಗಾಯಾಳುಗೆ ಸಹಾಯಧನ ಹಸ್ತಾಂತರ

ಮಂಗಳೂರು: ನಗರದ ನಾಗುರಿ ಬಳಿ ಸಂಭವಿಸಿದ್ದ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರು ಮಹಾನಗರ ರಿಕ್ಷಾ ಚಾಲಕ ಸಂಘಟನೆಯ ಸದಸ್ಯ ಪುರುಷೋತ್ತಮ ಪೂಜಾರಿಗೆ ಮಂಗಳೂರು ಆಟೊ ರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘದ ವತಿಯಿಂದ ಸಹಾಯಧನ ಹಸ್ತಾಂತರಿಸಲಾಯಿತು.
ಸಂಘದ ಅಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಪುರುಷೋತ್ತಮ ಪೂಜಾರಿಯ ಪತ್ನಿ ಚಿತ್ರಾ ಅವರಿಗೆ 10,000 ರೂ. ಧನಸಹಾಯ ನೀಡಿದರು. ಅಲ್ಲದೆ ಚಿಕಿತ್ಸೆಯ ವೆಚ್ಚದಲ್ಲಿ ರಿಯಾಯಿತಿ ನೀಡಬೇಕೆಂದು ಆಸ್ಪತ್ರೆಯ ಮುಖ್ಯಸ್ಥರಲ್ಲಿ ಮನವಿ ಮಾಡಿದರು.
ಈ ಸಂದರ್ಭ ಸಂಘಟನೆಯ ಉಪಾಧ್ಯಕ್ಷ ಶೇಖರ್ ದೇರಳಕಟ್ಟೆ, ನಿರ್ದೇಶಕ ವಸಂತ್ ಶೆಟ್ಟಿ, ಸಿದ್ದು, ಲೆಗೊರಿ ಡಿಸೋಜ, ರಾಜೇಶ್ ವೀರನಗರ, ವಿದ್ಯಾ ತೋರಸ್, ಬಬಿತಾ ಡಿಸೋಜ, ಪಿಯುಸ್ ಮೊಂತೆರೊ ಉಪಸ್ಥಿತರಿದ್ದರು.
Next Story