ಬಯಲು ಪ್ರದೇಶಗಳಲ್ಲಿ ಅಡಿಕೆ ಬೆಳೆಯುವುದನ್ನು ತಡೆ ಹಿಡಿಯಲಿ: ರೈತಸಂಘ

ವಿಟ್ಲ: ಬಯಲು ಪ್ರದೇಶ ಹಾಗೂ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಅಡಿಕೆ ಬೆಳೆಯುವುದನ್ನು ತಡೆ ಒಡ್ಡದೆ, ಅಲ್ಲಿ ಅಡಿಕೆಗೆ ಅವಕಾಶ ನೀಡಿರುವ ಕ್ರಮವನ್ನು ತಕ್ಷಣ ಸರಿ ಪಡಿಸಬೇಕು. ಕರಾವಳಿ ಸೇರಿ ಪಾರಂಪರಿಕವಾಗಿ ಅಡಿಕೆ ಬೆಳೆಯುತ್ತಿರುವಲ್ಲಿಗೆ ಮಾತ್ರ ಸರ್ಕಾರ ಸವಲತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಆಗ್ರಹಿಸಿದ್ದಾರೆ.
ಅಧಿವೇಶನದಲ್ಲಿ ಅಡಿಕೆ ಬೆಳೆ ಬಗ್ಗೆ ಗೃಹಸಚಿವ ಅರಗ ಜ್ಙಾನೇಂದ್ರ ಅವರು ನೀಡಿರುವ ಹೇಳಿಕೆ ಬಗ್ಗೆ ವಿಟ್ಲದಲ್ಲಿ ಪ್ರತಿಕ್ರಿಯೆ ನೀಡಿದರು.
ತೆರಿಗೆ ಇಲ್ಲದೆ ಅಡಿಕೆ ಆಮದು ಮಾಡುವುದನ್ನು ಪ್ರಶ್ನಿಸದ ಅರಗ ಜ್ಞಾನೇಂದ್ರ ಅವರಿಗೆ ರಾತ್ರಿ ನಿದ್ದೆ ಬಿಟ್ಟಿಲ್ಲದ ಹಾಗೆ ಕಾಣಿಸುತ್ತಿದೆ. ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು ಅಡಿಕೆ ಬೆಳೆಗಾರರನ್ನು ಹೆದರಿಸುವ ಕಾರ್ಯ ಮಾಡುತ್ತಿದ್ದಾರೆ. ವರ್ತಕರ ಜತೆಗೆ ಸೇರಿ ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡುವ ರೀತಿಯಲ್ಲಿ ಕಾಣುತ್ತಿದೆ. ಹೇಳಿಕೆಯಿಂದ ಅಡಿಕೆ ಧಾರಣೆಯಲ್ಲಿ ವ್ಯತ್ಯಾಸಗಳಾಗಿ ರೈತರಿಗೆ ಸಮಸ್ಯೆಯಾದರೆ ಅದಕ್ಕೆ ಅರಗ ಜ್ಞಾನೇಂದ್ರ ಅವರೇ ಹೊಣೆ ಹೊರಬೇಕೆಂದು ಅವರು ತಿಳಿಸಿದ್ದಾರೆ.







