ಮಂಗಳೂರು: ಡಿ.31ರಿಂದ ಕೈಮಗ್ಗ ಸಚಿವರ ಜಿಲ್ಲಾ ಪ್ರವಾಸ
ಮಂಗಳೂರು: ಕೈಮಗ್ಗ, ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಇಲಾಖಾ ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ ಡಿ.31ರಿಂದ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.
ಡಿ.31ರ ಮಧ್ಯಾಹ್ನ 2:30ಕ್ಕೆ ಉಡುಪಿಯಿಂದ ಧರ್ಮಸ್ಥಳ ಆಗಮಿಸುವರು. ಸಂಜೆ 5ಕ್ಕೆ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ತಲುಪುವರು. ರಾತ್ರಿ 7ಕ್ಕೆ ಕುಕ್ಕೆ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಮರಳಿ ಅಲ್ಲಿ ವಾಸ್ತವ್ಯ ಹೂಡುವರು.
2023ರ ಜನವರಿ 1ರಂದು ಬೆಳಗ್ಗೆ 10:15ಕ್ಕೆ ಉಜಿರೆಯ ಡಾ.ದಯಾಕರ್ ಗೋಶಾಲೆಗೆ ಭೇಟಿ ನೀಡಲಿದ್ದಾರೆ.11ಕ್ಕೆ ಉಜಿರೆಯಿದ ಕೊಲ್ಲೂರು ತೆರಳುವರು ಎಂದು ಸಚಿವರ ವಿಶೇಷಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story