ಮಂಗಳೂರು: ಚರ್ಮಗಂಟು ರೋಗ ಹಿನ್ನೆಲೆ- ಜಾನುವಾರುಗಳ ಸಾಗಾಟಕ್ಕೆ ನಿಷೇಧ
ಮಂಗಳೂರು: ಕ್ಯಾಪ್ರಿಪಾಕ್ಸ್ ಎಂಬ ವೈರಾಣವಿನಿಂದ ಹರಡುವ ಚರ್ಮಗಂಟು (ಲುಂಪಿ ಸ್ಕಿನ್ ಡಿಸೀಸ್) ರೋಗ ದನ ಮತ್ತು ಎಮ್ಮೆಗಳಲ್ಲಿ ಕಂಡುಬರುವ ವೈರಸ್ ಖಾಯಿಲೆಯಾಗಿದ್ದು, ರೋಗಗ್ರಸ್ಥ ಜಾನುವಾರುವಿನಿಂದ ಆರೋಗ್ಯವಂತ ಜಾನುವಾರುಗಳಿಗೆ ಹರಡುತ್ತಿದೆ.
ಈಗಾಗಲೆ ಜಿಲ್ಲೆಯಲ್ಲಿ 289 ಗ್ರಾಮಗಳ 3,414 ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಂಡು ಬಂದಿದ್ದು, 64 ಜಾನುವಾರುಗಳು ಸಾವಿಗೀಡಾಗಿವೆ. ಜಾನುವಾರುಗಳನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಾಣಿಕೆ ಮಾಡುವುದರಿಂದ ರೋಗ ಹರಡುವ ಸಾಧ್ಯತೆ ಇರುವುದರಿಂದ ಈ ರೋಗದ ನಿಯಂತ್ರಣಕ್ಕಾಗಿ ಜಿಲ್ಲೆಯೊಳಗೆ ಮತ್ತು ಹೊರ ಜಿಲ್ಲೆ ಅಥವಾ ನೆರೆ ರಾಜ್ಯದಿಂದ ಜಿಲ್ಲೆಗೆ ಜಾನುವಾರುಗಳ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಆದೇಶಿಸಿದ್ದಾರೆ.
ಗ್ರಾಪಂ ವ್ಯಾಪ್ತಿಯಲ್ಲಿ ನೊಣ, ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಂಗಿಗ್ ಮಾಡುವಂತೆ ಸಂಬಂಧಿಸಿದವರಿಗೆ ಸೂಚಿಸಿರುತ್ತಾರೆ.
Next Story