ಮಾಣಿ: ಸರಣಿ ಅಪಘಾತ; ಮೂವರಿಗೆ ಗಾಯ

ವಿಟ್ಲ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾಣಿಯ ಪಳಿಕೆ ಎಂಬಲ್ಲಿ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಮೂವರು ಗಾಯಗೊಂಡ ಘಟನೆ ನಡೆದಿದೆ.
ಮಾಣಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕಾರು, ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದು ಬಳಿಕ ಅದರ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಎರಡು ಕಾರು ಮತ್ತು ಆಟೋ ರಿಕ್ಷಾದಲ್ಲಿದ್ದವರು ಬೆಂಗಳೂರು, ಬಿಸಿ.ರೋಡ್ ಮೂಲದ ಪ್ರಯಾಣಿಕರಾಗಿದ್ದು, ಆಟೋ ಚಾಲಕ ಬುಡೋಳಿ ನಿವಾಸಿ ಎಂದು ತಿಳಿದು ಬಂದಿದೆ.
Next Story