ಅಡಿಕೆ ಬೆಳೆಗಾರರನ್ನು ಬೀದಿಗೆ ತಳ್ಳಲು ಯತ್ನಿಸುತ್ತಿರುವ ಸರಕಾರ:ಎಸ್ಡಿಪಿಐ

ಮಂಗಳೂರು: ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೆಳಗಾವಿ ಅದಿವೇಶನದಲ್ಲಿ ಮಾತನಾಡುತ್ತಾ ‘ಅಡಿಕೆ ಬೆಳೆಗೆ ಭವಿಷ್ಯವಿಲ್ಲ, ಆ ಬೆಳೆಗೆ ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ಅಡಿಕೆ ಬೆಳೆಗಾರರು ಬೀದಿಗೆ ಬರಲಿದ್ದಾರೆ ಎಂದು ಹೇಳಿಕೆ ನೀಡಿ ಅಡಿಕೆ ಬೆಳೆಗಾರರ ಭವಿಷ್ಯದಲ್ಲಿ ಚೆಲ್ಲಾಟವಾಡಲು ಮುಂದಾಗಿದ್ದಾರೆ. ಬಿಜೆಪಿ ಸರಕಾರದ ಈ ನಡೆಯು ಖಂಡನೀಯ ಎಂದು ಎಸ್ಡಿಪಿಐ ದ.ಕ. ಜಿಲ್ಲಾ ಉಪಾಧ್ಯಕ್ಷ ಮತ್ತು ರೈತ ಪರ ಹೋರಾಟಗಾರ ವಿಕ್ಟರ್ ಮಾರ್ಟಿಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಡಿಕೆ ಬೆಳೆಯು ಕರಾವಳಿ ಹಾಗೂ ಮಲೆನಾಡಿನ ಕೃಷಿಕರ ಜೀವನಾಡಿ ಹಾಗೂ ಆರ್ಥಿಕತೆಯ ಮೂಲವಾಗಿದೆ. ಈ ಬೆಳೆಯನ್ನು ಬೆಂಬಲಿಸಬಾರದು. ಅದಕ್ಕೆ ಭವಿಷ್ಯವಿಲ್ಲ ಎಂದು ಗೃಹ ಸಚಿವರು ಹೇಳಿಕೆ ನೀಡುವಾಗ ಅಡಿಕೆ ಬೆಳೆಯುವ ಭಾಗದ ಬಿಜೆಪಿ ಶಾಸಕರು ಮೌನ ವಹಿಸಿದ್ದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.
Next Story