ಉಕ್ರೇನ್ ನ ಶಾಂತಿ ಯೋಜನೆ ತಿರಸ್ಕರಿಸಿದ ರಶ್ಯ

ಕೀವ್, ಡಿ.29: ಉಕ್ರೇನ್ ಸಂಘರ್ಷ ಅಂತ್ಯಗೊಳಿಸುವ ನಿಟ್ಟಿನಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಮುಂದಿರಿಸಿದ 10 ಅಂಶಗಳ ಶಾಂತಿ ಯೋಜನೆಯನ್ನು ರಶ್ಯ ತಿರಸ್ಕರಿಸಿದೆ.
ಉಕ್ರೇನ್ ನ ನಾಲ್ಕು ಪ್ರದೇಶಗಳ ಸ್ವಾಧೀನವನ್ನು ಆ ದೇಶ ಒಪ್ಪಿಕೊಂಡರೆ ಮಾತ್ರ ಶಾಂತಿ ಮಾತುಕತೆ ಸಾಧ್ಯ ಎಂದು ರಶ್ಯ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ ಈ ವರ್ಷಾಂತ್ಯದೊಳಗೆ ಸಂಧಾನ ಮಾತುಕತೆ ಆರಂಭವಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಝೆಲೆನ್ಸ್ಕಿ ಮುಂದಿರಿಸಿದ ಶಾಂತಿ ಯೋಜನೆಯಲ್ಲಿ `ಉಕ್ರೇನ್ನ ಪ್ರಾದೇಶಿಕ ಸಮಗ್ರತೆಯನ್ನು ರಶ್ಯ ಗೌರವಿಸಬೇಕು ಮತ್ತು ತನ್ನ ಎಲ್ಲಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂಬ ಅಂಶ ಪ್ರಮುಖವಾಗಿದೆ. ಆದರೆ ಇದನ್ನು ತಿರಸ್ಕರಿಸಿರುವ ರಶ್ಯ `ಪೂರ್ವ ಉಕ್ರೇನ್ನ ಲುಹಾಂಸ್ಕ್ ಮತ್ತು ಡೊನೆಟ್ಸ್, ದಕ್ಷಿಣದ ಖೆರ್ಸಾನ್ ಮತ್ತು ಝಪೋರಿಝಿಯಾದ ಸ್ವಾಧೀನತೆಯನ್ನು ಉಕ್ರೇನ್ ಒಪ್ಪಿಕೊಳ್ಳಬೇಕು. ರಶ್ಯಕ್ಕೆ ನಾಲ್ಕು ಪ್ರದೇಶಗಳ ಪ್ರವೇಶದೊಂದಿಗೆ ರಶ್ಯಾದ ಭೂಪ್ರದೇಶದ ಬಗ್ಗೆ ಇಂದಿನ ವಾಸ್ತವವನ್ನು ಗಣನೆಗೆ ತೆಗೆದುಕೊಳ್ಳದ ಯಾವುದೇ ಶಾಂತಿ ಯೋಜನೆ ಸಾಧ್ಯವಿಲ್ಲ' ಎಂದು ಸ್ಪಷ್ಟಪಡಿಸಿದೆ.
ಪಶ್ಚಿಮದ ನೆರವಿನಿಂದ ರಶ್ಯವನ್ನು ಪೂರ್ವ ಉಕ್ರೇನ್ನಿಂದ ಮತ್ತು ಕ್ರಿಮಿಯಾ ಪ್ರಾಂತದಿAದ ಹೊರಗಟ್ಟುವ ಝೆಲೆನ್ಸ್ಕಿ ಅವರ ಯೋಜನೆ ಹಾಗೂ ಉಕ್ರೇನ್ಗೆ ಆಗಿರುವ ನಷ್ಟಕ್ಕೆ ರಶ್ಯ ಪರಿಹಾರ ನೀಡಬೇಕೆಂಬ ಆಶಯ ಕೇವಲ ಭ್ರಮೆ ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಹೇಳಿರುವುದಾಗಿ ಆರ್ಐಎ ಸುದ್ಧಿಸಂಸ್ಥೆ ವರದಿ ಮಾಡಿದೆ. ಉಕ್ರೇನ್ನಲ್ಲಿ ಹೋರಾಡುವ ಶಕ್ತಿ ಮತ್ತು ತಾಂತ್ರಿಕ ಸಾಮರ್ಥ್ಯದ ಬಲವರ್ಧನೆಯನ್ನು ರಶ್ಯ ಮುಂದುವರಿಸಲಿದೆ. ಮೀಸಲು ಯೋಧರ ತುಕಡಿಗೆ `ಗಂಭೀರ ತರಬೇತಿ' ನೀಡಲಾಗುತ್ತಿದ್ದು ಕೆಲವರನ್ನು ಈಗಾಗಲೇ ಮುಂಚೂಣಿಯಲ್ಲಿ ನಿಯೋಜಿಸಲಾಗಿದೆ ಎಂದು ಲಾವ್ರೋವ್ ಹೇಳಿದ್ದಾರೆ.
ಈ ಮಧ್ಯೆ, ಖೆರ್ಸಾನ್ ಮತ್ತು ಝಪೋರಿಝಿಯಾ ಪ್ರದೇಶದ ಸುತ್ತಲಿನ 25ಕ್ಕೂ ಹೆಚ್ಚು ವಸಾಹತುಗಳ ಮೇಲೆ ರಶ್ಯ ಭೀಕರ ವಾಯುದಾಳಿ ಮುಂದುವರಿಸಿದೆ. ಉಕ್ರೇನ್ ಪಡೆಯ ನಿಯಂತ್ರಣದಲ್ಲಿರುವ ಬಕ್ಮೂಟ್ ನಗರದಲ್ಲಿ ರಶ್ಯದ ದಾಳಿಯನ್ನು ಉಕ್ರೇನ್ ಪಡೆ ಹಿಮ್ಮೆಟ್ಟಿಸಿದೆ ಉಕ್ರೇನ್ ಅಧಿಕಾರಿಗಳು ಹೇಳಿದ್ದಾ