ಉತ್ತರ ಪ್ರದೇಶ : ಖಾಸಗಿ ಆಸ್ಪತ್ರೆಯ ಹೊರಗೆ ಆಕ್ಸಿಜನ್ ಸಿಲಿಂಡರ್ ಸ್ಫೋಟ, ಇಬ್ಬರು ಮೃತ್ಯು
![ಉತ್ತರ ಪ್ರದೇಶ : ಖಾಸಗಿ ಆಸ್ಪತ್ರೆಯ ಹೊರಗೆ ಆಕ್ಸಿಜನ್ ಸಿಲಿಂಡರ್ ಸ್ಫೋಟ, ಇಬ್ಬರು ಮೃತ್ಯು ಉತ್ತರ ಪ್ರದೇಶ : ಖಾಸಗಿ ಆಸ್ಪತ್ರೆಯ ಹೊರಗೆ ಆಕ್ಸಿಜನ್ ಸಿಲಿಂಡರ್ ಸ್ಫೋಟ, ಇಬ್ಬರು ಮೃತ್ಯು](https://www.varthabharati.in/sites/default/files/images/articles/2022/12/30/361851-1672392907.jpeg)
ಚಂದೌಲಿ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯ ಹೊರಗೆ ಇಂದು ಸಂಭವಿಸಿದ ಭೀಕರ ಸಿಲಿಂಡರ್ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಸ್ಫೋಟದ ರಭಸಕ್ಕೆ ಆಸ್ಪತ್ರೆ ಹಾಗೂ ಆಸ್ಪತ್ರೆಯ ಸಮೀಪದ ಮನೆಗಳ ಗಾಜುಗಳು ಒಡೆದಿದ್ದು, ಎರಡು ದೇಹಗಳು ಸಂಪೂರ್ಣ ಛಿದ್ರವಾಗಿವೆ. ಪ್ರದೇಶದಲ್ಲಿನ ಅವ್ಯವಸ್ಥೆಯ ನಡುವೆ ಹಲವಾರು ಆಮ್ಲಜನಕ ಸಿಲಿಂಡರ್ಗಳನ್ನು ಸಾಗಿಸುವ ಟ್ರಕ್ ಕೂಡ ರಸ್ತೆಯ ಮಧ್ಯದಲ್ಲಿ ನಿಂತಿರುವುದು ಕಂಡುಬಂದಿದೆ.
ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮುಘಲ್ಸರಾಯ್ ಶಾಸಕರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಭದ್ರತಾ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
Next Story