ಮಂಗಳೂರು: ಜ.1ರಂದು ಕಲಾಂಗಣದಲ್ಲಿ ಸಂಗೀತ ಸಂಜೆ
ಮಂಗಳೂರು: ಅರುವತ್ತರ ಅರಳು ಮರಳು ಎಂಬುದು ಸಾಮಾನ್ಯ ಹೇಳಿಕೆ. ಆದರೆ ಕಲೆಗಳು ಮನಸ್ಸನ್ನು ಅರಳಿಸುವ ಶಕ್ತಿ ಹೊಂದಿವೆ ಮತ್ತು ಪ್ರತಿಭೆಗಳಿಗೆ ಪ್ರಾಯದ ಬಂಧವಿಲ್ಲ. ಈ ಹಿನ್ನಲೆಯಲ್ಲಿ ಅರುವತ್ತು ಮೀರಿದ ಹಿರಿಯ ಕಲಾವಿದರನ್ನು ಒಗ್ಗೂಡಿಸಿ 253ನೇ ತಿಂಗಳ ವೇದಿಕೆಯಲ್ಲಿ ‘ಸಾಟ್ ಸತ್ತರ್ ಪದಾಂ ಮಧುರ್’ ಎಂಬ ವಿಶಿಷ್ಟ ಸಂಗೀತ ರಸಮಂಜರಿಯನ್ನು ಮಾಂಡ್ ಸೋಭಾಣ್ ಜ.1ರಂದು ಸಂಜೆ 6ಕ್ಕೆ ಶಕ್ತಿನಗರದ ಕಲಾಂಗಣದಲ್ಲಿ ಆಯೋಜಿಸಿದೆ.
ಚರಣ್ ಮಲ್ಯ ನಿರ್ದೇಶನದಲ್ಲಿ, ಕಿಂಗ್ಸ್ ಸ್ಲೀ ನಜ್ರೆತ್ ಸಹಕಾರದಲ್ಲಿ, ಎರಿಕ್ ಒಝೇರಿಯೊ, ಜೊಯ್ಸ್ ಒಝೇರಿಯೊ, ಜೆರಿ ಡಿಮೆಲ್ಲೊ ಬಿಜೈ, ರೊನಾಲ್ಡ್ ಲಸ್ರಾದೊ ಬೊಂದೆಲ್, ರೊನಿ ಡಿಸೋಜ ಬಿಜೈ, ಹ್ಯೂಬರ್ಟ್ ಡಿಸಿಲ್ವಾ, ಜೊಸ್ಸಿ ಮಸ್ಕರೇನ್ಹಸ್ ಬಜ್ಪೆ, ಅನ್ನಾ ಡಿಸೋಜ ಬೆಂದುರ್, ಜೊಸೆಫ್ ಪಿಂಟೊ ಆಂಜೆಲೊರ್ ಕೊಂಕಣಿಯ ಪ್ರಖ್ಯಾತ ಹಾಡುಗಳನ್ನು ಪ್ರಸ್ತುತ ಪಡಿಸಲಿರುವರು.
ಜೆರೊಮ್ ಡಿಸೋಜ, ವಿಲ್ಫಿ ರೆಬಿಂಬಸ್, ಮಿಕ್ ಮ್ಯಾಕ್ಸ್, ರೊನಿ ಬೊಂದೆಲ್, ಜೆರಿ ಡಿಮೆಲ್ಲೊ, ವಲ್ಲಿ ವಾಸ್, ಆಸ್ಟಿನ್ ಪ್ರಭು, ರೊನಿ ಕ್ರಾಸ್ತಾ ಕೆಲರಾಯ್ ಮತ್ತಿತರರ ಸಾಹಿತ್ಯ ಮತ್ತು ಸ್ವರ ಸಂಯೋಜನೆಯ ಹಾಡುಗಳಿವೆ ಎಂದು ಪ್ರಕಟನೆ ತಿಳಿಸಿದೆ.





