ಭಟ್ಕಳ: ಇಂಡಿಯನ್ ನವಾಯತ್ ಫೋರಂನಿಂದ 3 ದಿನಗಳ ವ್ಯಾಪಾರ ಮೇಳ

ಭಟ್ಕಳ: ನಗರದ ತಾಲೂಕಾ ಕ್ರೀಡಾಂಗಣದಲ್ಲಿ ಮೂರು ದಿನಗಳ ವ್ಯಾಪಾರ ಮೇಳ (ಟ್ರೇಡ್ ಎಕ್ಸ್‌ಪೋ)ವನ್ನು ಇಂಡಿಯನ್ ನವಾಯತ್ ಫೋರಂ (ಐಎನ್‌ಎಫ್) ಉದ್ಘಾಟಿಸಿದೆ.
ಶುಕ್ರವಾರ ಸಂಜೆ ಎಕ್ಸ್‌ಪೋ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ರಿಫಾಹ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಮುಂಬೈನ ಪ್ರಧಾನ ಕಾರ್ಯದರ್ಶಿ ಮಿರ್ಝಾ ಅಫ್ಝಲ್ ಬೇಗ್ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಎಕ್ಸಪೋದಲ್ಲಿ 25 ಕ್ಕೂ ಹೆಚ್ಚು ವಿಭಾಗಗಳ 170 ಕ್ಕೂ ಹೆಚ್ಚು ವ್ಯಾಪಾರ ಮಳಿಗೆಗಳಿಗೆ ಸ್ಥಳಾವಕಾಶವನ್ನು ಒದಗಿಸಲಾಗಿದ್ದು, ಇದು ಸ್ಥಳೀಯರಿಗೆ ವ್ಯಾಪಾರ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಿದೆ.
ರವಿವಾರ (ಜ.1) ವರೆಗೆ ಈ ಎಕ್ಸ್‌ಪೋ ನಡೆಯಲಿದೆ.
ಐಎನ್‌ಎಫ್ ಅಧ್ಯಕ್ಷ ಜುಕಾಕು ಅಬ್ದುಲ್ ಮಜೀದ್, ಎಕ್ಸ್‌ಪೋದ ಉಪಾಧ್ಯಕ್ಷ ಮತ್ತು ಸಂಚಾಲಕ ಎಸ್‌ಎಂ ಅರ್ಷದ್, ಅಂಜುಮನ್ ಹಮೀ-ಎ-ಮುಸ್ಲಿಮೀನ್ ಅಧ್ಯಕ್ಷ ಮುಝಮ್ಮಿಲ್ ಕಾಝಿಯಾ, ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್ ಭಟ್ಕಳ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಖಲೀಫಾ ಜಮಾಅತ್-ಉಲ್-ಮುಸ್ಲಿಮೀನ್ ಖಾಝಿ ಮೌಲಾನಾ ಖಾಜ ಮದನಿ, ಜಮಾಅತ್ ಉಲ್ ಮುಸ್ಲಿಮೀನ್ ಭಟ್ಕಳ ಖಾಝಿ ಮೌಲಾನಾ ಅಬ್ದುಲ್ ರಬ್ ನದ್ವಿ, ಭಟ್ಕಳ ಮುಸ್ಲಿಂ ಖಲೀಜ್ ಕೌನ್ಸಿಲ್ ಅಧ್ಯಕ್ಷ ಫಾರೂಕ್ ಮುಸ್ಬಾ, ಬಿಎಂಕೆಸಿ ಪ್ರಧಾನ ಕಾರ್ಯದರ್ಶಿ ಅತೀಕುರ್ ರಹಮಾನ್ ಮುನೀರಿ ಮತ್ತಿತರರು ವೇದಿಕೆಯಲ್ಲಿದ್ದರು.
ಐಎನ್‌ಎಫ್ ಕಾರ್ಯಕಾರಿ ಸಮಿತಿ ಸದಸ್ಯ ಅಫ್ತಾಬ್ ಕೋಲಾ ಕಾರ್ಯಕ್ರಮ ನಿರೂಪಿಸಿದರು. ಮತ್ತೋರ್ವ ಕಾರ್ಯಕಾರಿ ಸದಸ್ಯ ಫೈಝಾನ್ ಬರ್ಮಾವರ್ ಧನ್ಯವಾದಗೈದರು.
ಉದ್ಘಾಟನಾ ಸಮಾರಂಭದ ನಂತರ ಟ್ರೇಡ್ ಎಕ್ಸ್‌ಪೋದ ಮಳಿಗೆಗಳ ವಿಭಾಗದ ಔಪಚಾರಿಕ ಉದ್ಘಾಟನೆ ನಡೆಯಿತು.










