ಮಡಿಕೇರಿ | ಮನೆ ಮುಂದೆ ನಿಲ್ಲಿಸಿದ್ದ ಆಟೋರಿಕ್ಷಾಕ್ಕೆ ಕಿಡಿಗೇಡಿಯಿಂದ ಬೆಂಕಿ: ದೂರು ದಾಖಲು
ಮಡಿಕೇರಿ ಡಿ.30 : ಮನೆಯ ಹೊರ ಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾಗೆ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿದ ಘಟನೆ ಗುರುವಾರ ತಡರಾತ್ರಿ ನಗರದ ರಾಣಿಪೇಟೆಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಅಬುತಾಹೀರ್ ಎಂಬುವವರಿಗೆ ಸೇರಿದ ಆಟೋರಿಕ್ಷಾ ಸಂಪೂರ್ಣ ಸುಟ್ಟು ಕರಕಲಾಗಿದೆ.
ಆಟೋ ರಿಕ್ಷಾ ಒಂದರಲ್ಲಿ ಬಂದ ಕಿಡಿಗಡಿಯೊಬ್ಬ ಅಬುತಾಹೀರ್ ಅವರ ಆಟೋಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗುತ್ತಿರುವ ದೃಶ್ಯ ಅಲ್ಲಿದ್ದ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಕುರಿತು ಅಬುತಾಹೀರ್ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಗರ ಪೊಲೀಸರು, ಸಿ.ಸಿ. ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ, ಆರೋಪಿಯ ಬಂಧನಕ್ಕಾಗಿ ತನಿಖೆ ಚುರುಕುಗೊಳಿಸಿದ್ದಾರೆ.
Next Story