ಡಿಡಿಯ 24*7 ಮನರಂಜನೆ ಚಾನೆಲ್ ಆರಂಭಿಸಲು ಪ್ರಸಾರ ಭಾರತಿ ಸಿದ್ಧತೆ

ಹೊಸದಿಲ್ಲಿ, ಡಿ. 30: ವ್ಯಾಪಕ ವೀಕ್ಷಕರನ್ನು ಗುರಿಯಾಗಿರಿಸಿಕೊಂಡು ಹಾಗೂ ದಿನದ 24 ಗಂಟೆಯೂ ಆರೋಗ್ಯಕರ ಮನರಂಜನೆಯನ್ನು ಒದಗಿಸಲು ದೂರದರ್ಶನದ 24 ಗಂಟೆಗಳ ಮನರಂಜನೆ-ಚಲನಚಿತ್ರ ಚಾನೆಲ್ ಅನ್ನು ಆರಂಭಿಸಲು ಪ್ರಸಾರ ಭಾರತಿ ಸಿದ್ಧತೆ ನಡೆಸುತ್ತಿದೆ.
ಡಿಡಿಯ 24 ಗಂಟೆಗಳ ಚಾನೆಲ್ ಅನ್ನು ತರುವ ಹಿನ್ನೆಲೆಯಲ್ಲಿ ಸರಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ತಿಳಿಸಿದ್ದಾರೆ. ಡಿಡಿಯು 24 ಗಂಟೆಗಳ ಮನರಂಜನೆ ಚಾನೆಲ್ ಅನ್ನು ಹೊಂದಿತ್ತು.
ಅದನ್ನು ಮುಚ್ಚಲಾಯಿತು. ನಾವು ಅದನ್ನು ಪುನರಾರಂಭಿಸಲು ಬಯಸಿದ್ದೇವೆ ಎಂದು ಠಾಕೂರ್ ಹೇಳಿದ್ದಾರೆ.
Next Story





