ರಸ್ತೆ ಅಪಘಾತ: ರಿಷಬ್ ಪಂತ್, ಸೈರಸ್ ಮಿಸ್ತ್ರಿಯನ್ನು ದೂಷಿಸಿದ ಸುಧೀರ್ ಚೌಧರಿ.!

ಹೊಸದಿಲ್ಲಿ: ರಸ್ತೆ ಅಪಘಾತಕ್ಕೀಡಾದ ರಿಷಬ್ ಪಂತ್ ಮತ್ತು ಈ ವರ್ಷದ ಆರಂಭದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಸೈರಸ್ ಮಿಸ್ತ್ರಿ ಇಬ್ಬರೂ ತಪ್ಪಿತಸ್ಥರು ಎಂದು ಟಿವಿ ಪತ್ರಕರ್ತ ಸುಧೀರ್ ಚೌಧರಿ ಶುಕ್ರವಾರ ಹೇಳಿದ್ದಾರೆ.
ರಸ್ತೆ ಅಪಘಾತದ ನಂತರ ಹೊಸ ಮಾಡೆಲ್ ವಾಹನಕ್ಕೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬ ಪ್ರಶ್ನೆಯನ್ನು ಎತ್ತಿದ ಚೌಧರಿ, ರಿಷಬ್ ಪಂತ್ ಅವರು ತಮ್ಮ ಕಾರನ್ನು ಹೇಗೆ ಓಡಿಸಬೇಕು ಎಂಬ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ..
ತನ್ನ ವಾಹನವನ್ನು ಅತಿ ವೇಗದಲ್ಲಿ ಚಲಾಯಿಸಿದ್ದಕ್ಕಾಗಿ ಪಂತ್ ರನ್ನು ದೂಷಿಸಿದ ಚೌಧರಿ, ವೇಗದ ಚಾಲನೆಯೇ ರಸ್ತೆ ಅಪಘಾತಕ್ಕೆ ಕಾರಣವಾಯಿತು ಎಂದಿದ್ದಾರೆ.
"*ಕಾರು ಅತಿವೇಗದಲ್ಲಿತ್ತು. ರಿಷಭ್ ಸ್ವತಃ ಚಾಲನೆ ಮಾಡುತ್ತಿದ್ದರು. ಇದು ಇತ್ತೀಚಿನ ಕಾರು, ಅದು ಹೇಗೆ ಬೆಂಕಿ ಹೊತ್ತಿಕೊಂಡಿತು?" ಎಂದು ಚೌಧರಿ ಟ್ವೀಟ್ ಮಾಡಿದ್ದಾರೆ.
"ಸೈರಸ್ ಮಿಸ್ತ್ರಿ ನಂತರ, ದುಬಾರಿ ಕಾರನ್ನು ಅತಿ ವೇಗದಲ್ಲಿ ಚಲಾಯಿಸಿದ ಮತ್ತು ಸ್ವಂತ ತಪ್ಪನ್ನು ಒಳಗೊಂಡಿರುವ ಎರಡನೇ ರಸ್ತೆ ಅಪಘಾತವಾಗಿದೆ." ಎಂದು ಸುಧೀರ್ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
क्रिकेटर #RishabhPant की सड़क दुर्घटना के बाद का पहला वीडियो।
— Sudhir Chaudhary (@sudhirchaudhary) December 30, 2022
*गाड़ी बहुत तेज़ स्पीड में थी
*ऋषभ ख़ुद ड्राइव कर रहे थे।(ड्राइवर होना चाहिए था)
*लेटेस्ट गाड़ी थी इसमें आग कैसे लगी ? #CyrusMistry के बाद ये दूसरा हादसा है जिसमें हाइवे है,तेज़ स्पीड है,मेंहगी कार है,अपनी गलती है। pic.twitter.com/N87gwPfA5n







