ಅಮಿತ್ ಶಾ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಿಂದ ಹಣ ಹಂಚಿಕೆ: ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್

ಬೆಂಗಳೂರು, ಡಿ.30: ಮಂಡ್ಯ ಜಿಲ್ಲೆಯಲ್ಲಿ ಇಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ 'ಜನ ಸಂಕಲ್ಪ ಸಮಾವೇಶ' ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಬಿಜೆಪಿ ಮುಖಂಡರು ಹಣ ಹಂಚಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತ ವಿಡಿಯೋ ಒಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ''ಹಿಂದಿನ ಜನಸಂಕಟಯಾತ್ರೆ ಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ ಬಿಜೆಪಿ ಈಗ ಅಮಿತ್ ಶಾ ಎದುರು ಮಾನ ಉಳಿಸಿಕೊಳ್ಳಲು ಕುರ್ಚಿಗಳಿಗಷ್ಟೇ ಅಲ್ಲ ಕುರ್ಚಿ ಮೇಲೆ ಕೂರುವವರಿಗೂ ಹಣ ಕೊಟ್ಟು ಕರೆಸಿದೆ.ಈ ಹಣ ಯಾವುದು? 40% ಕಮಿಷನ್ ಲೂಟಿಯದ್ದೇ? ಹುದ್ದೆಗಳ ಮಾರಾಟದ ಸಂಪಾದನೆಯೇ? ಮಂತ್ರಿಗಿರಿ ಮಾರಾಟದಿಂದ ಬಂದ ಹಣವೇ?'' ಎಂದು ಪ್ರಶ್ನೆ ಮಾಡಿದೆ.
ಇನ್ನು ಕಾಂಗ್ರೆಸ್ ಮುಖಂಡ ಸೂರ್ಯ ಮುಕುಂದರಾಜ್ ಟ್ವೀಟ್ ಮಾಡಿ, 'ದುಮ್ಮೇನಹಳ್ಳಿ ರಮೇಶ್ ಬಿಜೆಪಿ ಅರಸೀಕೆರೆ ತಾಲೂಕು ಅಧ್ಯಕ್ಷ, ಕಟ್ಟಿಕೆರೆ ಪ್ರಸನ್ನ ಕುಮಾರ್ ಅರಸೀಕೆರೆ ಟೌನ್ ಪ್ಲಾನಿಂಗ್ ಅಧ್ಯಕ್ಷ, ಜಿ ವಿ ಟಿ ಬಸವರಾಜು ಕೆಆರ್‌ಐಡಿಎಲ್, ಕಾಟಿಕೆರೆ ಪ್ರಸನ್ನಕುಮಾರ,ಮಟ್ಕಾ ವಿಜಿ ಅಲಿಯಾಸ್ ಅನ್ನಾಯಕನಹಳ್ಳಿ, ವಿಜಯಕುಮಾರ್ ಅಮಿತ್ ಶಾ ಕಾರ್ಯಕ್ರಮದಲ್ಲಿ ಹಣ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಂದಿನ #ಜನಸಂಕಟಯಾತ್ರೆ ಯಲ್ಲಿ ಖಾಲಿ ಕುರ್ಚಿ ದರ್ಶನ ಪಡೆದ ಬಿಜೆಪಿ ಈಗ ಅಮಿತ್ ಶಾ ಎದುರು ಮಾನ ಉಳಿಸಿಕೊಳ್ಳಲು ಕುರ್ಚಿಗಳಿಗಷ್ಟೇ ಅಲ್ಲ ಕುರ್ಚಿ ಮೇಲೆ ಕೂರುವವರಿಗೂ ಹಣ ಕೊಟ್ಟು ಕರೆಸಿದೆ.
— Karnataka Congress (@INCKarnataka) December 30, 2022
ಈ ಹಣ ಯಾವುದು @BJP4Karnataka?
40% ಕಮಿಷನ್ ಲೂಟಿಯದ್ದೇ? ಹುದ್ದೆಗಳ ಮಾರಾಟದ ಸಂಪಾದನೆಯೇ?
ಮಂತ್ರಿಗಿರಿ ಮಾರಾಟದಿಂದ ಬಂದ ಹಣವೇ? pic.twitter.com/6epSFJyyb4
ದುಮ್ಮೇನಹಳ್ಳಿ ರಮೇಶ್ ಬಿಜೆಪಿ ಅರಸೀಕೆರೆ ತಾಲ್ಲೂಕು ಅಧ್ಯಕ್ಷ, ಕಟ್ಟಿಕೆರೆ ಪ್ರಸನ್ನ ಕುಮಾರ್ ಅರಸೀಕೆರೆ ಟೌನ್ ಪ್ಲಾನಿಂಗ್ ಅಧ್ಯಕ್ಷ, ಜಿ ವಿ ಟಿ ಬಸವರಾಜು ಕೆಆರ್‌ಐಡಿಎಲ್
— ಸೂರ್ಯ ಮುಕುಂದರಾಜ್/Surya Mukundaraj (@suryamukundaraj) December 30, 2022
ಕಾಟಿಕೆರೆ ಪ್ರಸನ್ನಕುಮಾರ
ಮಟ್ಕಾ ವಿಜಿ ಅಲಿಯಾಸ್ ಅನ್ನಾಯಕನಹಳ್ಳಿ ವಿಜಯಕುಮಾರ್ @AmitShah ಕಾರ್ಯಕ್ರಮದಲ್ಲಿ ಹಣ ಹಂಚಿಕೆ ಸಂಘಿಗಳು ಕಲಿಸಿದ ದೇಶಭಕ್ತಿಯ ಪಾಠ. pic.twitter.com/3S2qlxKTmg







