'ದಿ ಲಿಜೆಂಡ್ ಆಫ್ ಮೌಲಾ ಜಟ್ಟ್’ ಬಿಡುಗಡೆ ಮುಂದೂಡಿಕೆ

ಅಹ್ಮದಾಬಾದ್, ಡಿ. 30: ಫವಾದ್ ಖಾನ್ ಹಾಗೂ ಮಹಿರಾ ಖಾನ್ ನಟನೆಯ ಪಾಕಿಸ್ತಾನಿ ಚಲನಚಿತ್ರ ‘ದಿ ಲಿಜೆಂಡ್ ಆಫ್ ಮೌಲಾ ಜಟ್ಟ್’ (The Legend of Maula Jatt) ಪಾಕಿಸ್ತಾನದಲ್ಲಿ ಅಕ್ಟೋಬರ್ 13ರಂದು ಬಿಡುಗಡೆಯಾಗಿತ್ತು. ಭಾರತದ ಸಿನೆಮಾ ಮಂದಿರಗಳಲ್ಲಿ ಶುಕ್ರವಾರ ಬಿಡುಗಡೆಯಾಗಬೇಕಿತ್ತು.
ಆದರೆ, ಹಠಾತ್ ಆಗಿ ಬಿಡುಗಡೆಯನ್ನು ಮುಂದೂಡಲಾಗಿದೆ. ‘‘ಚಲನಚಿತ್ರ ಬಿಡುಗಡೆ ಮುಂದೂಡಲಾಗಿದೆ ಎಂದು ವಿತರಕರು ನಮಗೆ ಮಾಹಿತಿ ನೀಡಿದರು. ಎರಡು ಮೂರು ದಿನಗಳ ಹಿಂದೆ ಅವರು ಈ ಮಾಹಿತಿ ನೀಡಿದ್ದರು. ಮುಂದಿನ ದಿನಾಂಕವನ್ನು ಅವರು ತಿಳಿಸಿಲ್ಲ’’ ಎಂದು ಐನಾಕ್ಸ್ನ ಅಧಿಕಾರಿಗಳು ತಿಳಿಸಿದ್ದಾರೆ.
ಬಿಲಾಲ್ ಲಶರಿ ನಿರ್ದೇನದ ‘ದಿ ಲಿಜೆಂಡ್ ಆಫ್ ಮೌಲಾ ಜಟ್ಟ್’ ಚಲನಚಿತ್ರ 1979ರ ಜನಪ್ರಿಯ ಹಳೆಯ ಚಲನಚಿತ್ರದ ಹೊಸ ರೂಪ. ಇದು ಪಾಕಿಸ್ತಾನದಲ್ಲಿ ಸಾರ್ವಕಾಲಿಕವಾಗಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ.
Next Story





