ಮಂಗಳೂರು: ಜ.1 ರಿಂದ ಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನ

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ಇದರ ಸದಸ್ಯತ್ವ ಅಭಿಯಾನ 2023 ಜ. 1 ರಿಂದ 10 ರ ತನಕ ರಾಜ್ಯಾದ್ಯಂತ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ತಿಳಿಸಿದ್ದಾರೆ.
ಎಸ್ಸೆಸ್ಸೆಫ್ ಕರ್ನಾಟಕದ ಮಣ್ಣಿನಲ್ಲಿ ಸುಮಾರು ನಾಲ್ಕು ದಶಕಗಳಿಂದ ಯಶಸ್ವಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದು, ಧಾರ್ಮಿಕ , ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಚುರುಕಿನ ಕಾರ್ಯಾಚರಣೆ ಮಾಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳನ್ನು ಈ ನಾಡಿಗೆ ಸಮರ್ಪಿಸಿದೆ ಅವರು ತಿಳಿಸಿದರು.
12 ವಯಸ್ಸಿನಿಂದ 32 ವಯಸ್ಸಿನವರೆಗೆ ಇರುವ ಸಂಘಟನೆಯ ತತ್ವ ಸಿದ್ಧಾಂತಗಳಲ್ಲಿ ಬದ್ದರಾದ ವಿದ್ಯಾರ್ಥಿಗಳು , ಯುವಕರು ಸಂಘಟನೆಯ ಸದಸ್ಯತ್ವ ಅಭಿಯಾನದಲ್ಲಿ ಕೈಜೋಡಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಮುನೀರ್ ಅಹ್ಮದ್ ಸಖಾಫಿ ಹಾಗೂ ಇಕ್ಬಾಲ್ ಮಧ್ಯನಡ್ಕ ಉಪಸ್ಥಿತರಿದ್ದರು.
Next Story