ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ಮೂಡುಬಿದಿರೆಯ ಶೋರಿನ್ ರಿಯೂ ಕರಾಟೆ ತಂಡ ಸೆಕೆಂಡ್ ರನ್ನರ್ಸ್

ಮೂಡುಬಿದಿರೆ, ಡಿ.31: ಮಹಾರಾಷ್ಟ್ರದ ಪುಣೆಯಲ್ಲಿರುವ ನೇತಾಜಿ ಸುಭಾಸ್ ಚಂದ್ರ ಬೋಸ್ ಮಿಲಿಟರಿ ಸ್ಕೂಲ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ನ್ಯಾಶನಲ್ ಕರಾಟೆ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮೂಡುಬಿದಿರೆಯ ಶೋರಿನ್ ರಿಯೂ ಕರಾಟೆ ತಂಡ ಸೆಕೆಂಡ್ ರನ್ನರ್ಸ್ ಚಾಂಪಿಯನ್ ಶಿಪ್ ಪ್ರಶಸ್ತಿ ಗಳಿಸಿದೆ.
ತಂಡವು 16 ಚಿನ್ನದ ಪದಕ, 9 ಬೆಳ್ಳಿಯ ಪದಕ ಹಾಗೂ 14 ಕಂಚಿನ ಪದಕಗಳನ್ನು ಜಯಿಸಿದೆ. ಈ ಚಾಂಪಿಯನ್ ಶಿಪ್ ನಲ್ಲಿ ನೇಪಾಳ, ಭೂತನ್, ಶ್ರೀಲಂಕಾ, ಬಾಂಗ್ಲಾದೇಶದ ತಂಡಗಳು ಭಾಗವಹಿಸಿದ್ದವು.
ತಂಡವು ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ ಮುಖ್ಯ ಶಿಕ್ಷಕ ನದೀಮ್ ಹಾಗೂ ಸಹಾಯಕ ಮುಖ್ಯ ಶಿಕ್ಷಕ ಸರ್ಫ್ರಾಝ್ ಅಬ್ದುಲ್ ಖಾದ್ರಿಯವರಿಂದ ತರಬೇತಿ ಪಡೆದಿದೆ.
Next Story