ಸುರತ್ಕಲ್ | ವಿವಿಧ ಕಾಮಗಾರಿ ವೀಕ್ಷಿಸಿದ ಶಾಸಕ ಭರತ್ ಶೆಟ್ಟಿ

ಮಂಗಳೂರು: 5ಕೋಟಿ ರೂ.ವೆಚ್ಚದಲ್ಲಿ ಆಗುತ್ತಿರುವ ಕೊಟ್ಟಾರ ಚೌಕಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಶನಿವಾರ ವೀಕ್ಷಿಸಿದರು.
ಬಳಿಕ ಮಾತನಾಡಿದ ಅವರು, ಹೆದ್ದಾರಿ ಹಾಗೂ ನಗರ ಸಂಪರ್ಕಿಸುವ ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಸ್ಮಾರಕ ಹಾಗೂ ವೃತ್ತ ನಿರ್ಮಾಣ ನಡೆಯಲಿದೆ. ವೀರಯೋಧರ ಸ್ಮರಣೆ ಹಾಗೂ ಗೌರವ ಸಲ್ಲಿಸಲು ಈ ಯೋಜನೆ ರೂಪಿಸಲಾಗಿದೆ. ಇದರ ಜೊತೆಗೆ ಮಾಲೇಮಾರ್ ನಿಂದ ಬರುವ ವಾಹನಗಳಿಗೆ ಸೂಕ್ತ ಸರ್ವಿಸ್ ರಸ್ತೆ , ಕೊಟ್ಟಾರಚೌಕಿಯಲ್ಲಿ ಶೌಚಾಲಯ ಹಾಗೂ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಇದೀಗ ಭೂಗತ ಕೇಬಲ್ ಪೈಪ್ ಲೈನ್ ಸ್ಥಳಾಂತರ, ಕುಡಿಯುವ ನೀರಿನ ಪೈಪ್ಲೈನ್ ಹೊಸದಾಗಿ ಈ ಭಾಗದಲ್ಲಿ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ಮೂರು ತಿಂಗಳ ಒಳಗಾಗಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ನುಡಿದರು.
ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಕಿರಣ್ ಕುಮಾರ್ ಕೊಡಿಕಲ್, ಪಾಲಿಕೆ ಇಂಜಿನಿಯರ್ ಖಾದರ್ ಜೊತೆಗಿದ್ದು, ಶಾಸಕರಿಗೆ ಮಾಹಿತಿ ನೀಡಿದರು.
ಉಮೇಶ್ ಮಲರಾಯ ಸಾನ, ಜಯಪ್ರಕಾಶ್ ಕುಲಾಲ್, ಅಶೋಕ್ ಕುಲಾಲ್, ರಾಜೇಶ್ , ಸುರೇಶ್ ಭಂಡಾರಿ, ಕಿರಣ್ ಕೋಟ್ಯಾನ್, ಗೋಪಾಲ್ ಶೆಟ್ಟಿ ಸ್ಥಳೀಯರು, ಪಕ್ಷದ ಪ್ರಮುಖರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.