ಮಂಗಳೂರು | ಅಡ್ಡೂರು ಸಹಾರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ

ಗುರುಪುರ: ಅಡ್ಡೂರಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಸಂಚಾಲಿತ ಸಹಾರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವು ಶನಿವಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಬಂಟ್ವಾಳ ಕಾವಳಮುಡೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಶೇಖ್ ಆದಂ ಸಾಹೇಬ್, ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮಕ್ಕಳು ಎಷ್ಟರ ಮಟ್ಟಿಗೆ ಕಲಾವಿದರಾಗಿ ಉಳಿದುಕೊಳ್ಳುತ್ತಾರೆ ಎಂಬುದು ಪ್ರಶ್ನೆಯಾಗಿ ಕಾಡುತ್ತಿವೆ. ಮಕ್ಕಳಲ್ಲಿ ಸಾಧನೆಯ ಕೊರತೆ, ಉದಾಸೀನತೆ, ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಇದಕ್ಕೆ ಕಾರಣ ಹುಡುಕಿ ಕೊಂಡು ಶಿಕ್ಷಕರು ಮತ್ತು ಪೋಷಕರು ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶೇಖ್ ಆದಂ ಸಾಹೇಬ್, ಉದ್ಯಮಿಗಳಾದ ಲತೀಫ್, ಅಬ್ದುರ‌್ರಝಾಕ್ ಅವರನ್ನು ಶಾಲು ಹಾಕಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಜಿಪಂ ಮಾಜಿ ಸದಸ್ಯ ಯು.ಪಿ. ಇಬ್ರಾಹಿಂ, ಅಡ್ಡೂರು ಜುಮ್ಮಾ ಮಸೀದಿಯ ಅಧ್ಯಕ್ಷ ಅಹ್ಮದ್ ಬಾವಾ, ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಎನ್.ಇ. ಮುಹಮ್ಮದ್, ಕರೆಸ್ಪಾಂಡೆಂಟ್ ಎ. ಕೆ. ಇಸ್ಮಾಯಿಲ್, ಪ್ರಾಂಶುಪಾಲ ಕೇಶವ, ಪಿಟಿಎ ಅಧ್ಯಕ್ಷ ವಿಶ್ವಂಭರ, ಮಂಡಳಿಯ ಕಾರ್ಯದರ್ಶಿ ಎನ್. ಇಸ್ಮಾಯಿಲ್, ಖಜಾಂಚಿ ಎ.ಕೆ. ಅಶ್ರಫ್, ಹಾಜಿ ಎಂ.ಎಚ್. ಮೈಯದ್ದಿ, ಡಾ. ಸಿದ್ದೀಕ್, ಅಬ್ದುಲ್ ಖಾದರ್ ಇಡ್ಮ, ನೂರುಲ್ ಅಮೀನ್, ಪಿಟಿಎ ಉಪಾಧ್ಯಕ್ಷೆ ಪೂಜಾ ಕೆ., ಬಿ.ಎಸ್. ಮುಹಮ್ಮದ್, ಎ. ಎಸ್. ಅಬ್ದುಲ್ (ಮಾಜಿ ಕರೆಸ್ಪಾಂಡೆಂಟ್), ಅಝೀಝ್, ಎ. ಕೆ. ಮುಹಮ್ಮದ್, ಜಬ್ಬಾರ್, ಎ.ಜಿ. ಅಬ್ದುಲ್ ಖಾದರ್, ಜಿ.ಪಿ. ಅಬ್ದುಲ್ ರಹೀಂ, ಎ.ಜಿ. ಮುಹಮ್ಮದ್ ನಡುಗುಡ್ಡೆ, ಹಸನ್ ಬಾವಾ, ಬಿ.ಎಸ್. ರಫೀಕ್, ಖಾಸಿಂ, ಝುಬೇರ್ ಸಲ್ಲಾಜೆ, ಇದಿನಬ್ಬ, ಸುಲೈಮಾನ್, ಎ.ಕೆ. ಹನೀಫ್, ವಿದ್ಯಾರ್ಥಿ ನಾಯಕರಾದ ರಿಶಾನ್ ಮತ್ತು ಫಾತಿಮಾ ಅಫಿಸಾ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ದೇವಿಪ್ರಸಾದ್ ಸ್ವಾಗತಿಸಿ, ಶಿಕ್ಷಕಿ ಪ್ರಜ್ಞಾ ವಂದಿಸಿದರು.