ಉಡುಪಿ: ಸಾಹಿತಿ ಅನಿತಾ ಸಿಕ್ವೇರಾಗೆ ಕಾವ್ಯ ಪ್ರಭಾಂಜಲಿ ಪ್ರಶಸ್ತಿ

ಉಡುಪಿ: ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಉಡುಪಿಯ ಅನಿತಾ ಸಿಕ್ವೇರಾ ಅವರಿಗೆ ಮಂದಾರ ಕಲಾವಿದರ ವೇದಿಕೆ ವತಿಯಿಂದ ರಾಜ್ಯ ಮಟ್ಟದ ಕಾವ್ಯ ಪ್ರಭಾಂಜಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೀದರನ ಮಂದಾರ ಕಲಾವಿದರ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಇವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಬೀದರನಲ್ಲಿ ನಡೆದ 2022-23ನೇ ಸಾಲಿನ ಸಾಮಾನ್ಯ ಸಂಘ ಸಂಸ್ಥೆಗಳ ಸಾಂಸ್ತೃತಿಕ ಚಟುವಟಿಕೆಗಳಿಗೆ ಧನಸಹಾಯ ನೀಡುವ ಯೋಜನೆಯಡಿ ನಡೆದ ವಿಚಾರ ಸಂಕಿರಣ, ಪ್ರಶಸ್ತಿ ಪ್ರದಾನ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ ಅನಿತಾ ಸಿಕ್ವೇರಾ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಉಡುಪಿಯ ಅನಿತಾ ಸಿಕ್ವೇರಾ ಅವರು ಕಾವ್ಯ ಮತ್ತು ಸಾಹಿತ್ಯದಲ್ಲಿ ಸುಮಾರು 25 ವರ್ಷಗಳಿಂದಲೂ ಸಾಧನೆ ಮಾಡುತ್ತಿದ್ದಾರೆ. ಇವರ ‘ಅಕ್ಕ ನೀನ್ಯಾಕೆ ನನ್ನ ಪ್ರೀತಿಸುತ್ತಿ’, ‘ಸ್ಫೂರ್ತಿ ದೇವತೆ’ ಎಂಬ ಕೃತಿಗಳು ಪ್ರಕಟ ಗೊಂಡಿದ್ದು, ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಇವರ ಕಾವ್ಯ ಮತ್ತು ಬರಹಗಳು ಮಂಗಳ, ತರಂಗ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಮುಂತಾದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.