ಮಂಗಳೂರು| ಹೊಸ ವರ್ಷಾಚರಣೆ ಹಿನ್ನಲೆ; ಪೊಲೀಸ್ ಇಲಾಖೆಯಿಂದ ತೀವ್ರ ತಪಾಸಣೆ
32 ಸ್ಥಳಗಳಲ್ಲಿ ಚೆಕ್‌ಪೋಸ್ಟ್ ನಿರ್ಮಾಣ

32 ಸ್ಥಳಗಳಲ್ಲಿ ಚೆಕ್‌ಪೋಸ್ಟ್ ನಿರ್ಮಾಣ
ಮಂಗಳೂರು: ಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ ಮುಸ್ಸಂಜೆಯಿಂದಲೇ ಪೊಲೀಸರು ತೀವ್ರ ತಪಾಸಣೆ ನಡೆಸಿದರು.
ಕಮಿಷನರೇಟ್ ವ್ಯಾಪ್ತಿಯ 32 ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದ್ದು, ಎಲ್ಲಾ ಕಡೆಯೂ ಪೊಲೀಸರು ದ್ವಿಚಕ್ರ ವಾಹನಗಳು, ರಿಕ್ಷಾ, ಕಾರು, ಲಾರಿ ಮತ್ತಿತರ ವಾಹನಗಳನ್ನು ತಪಾಸಣೆಗೊಳಪಡಿಸಿದ್ದಾರೆ.
ಸಂಭ್ರಮ ಇರಲಿ, ಆದರೆ ಇತರರಿಗೆ ತೊಂದರೆಯಾಗಬಾರದು ಎಂದು ಕಮಿಷನರ್ ಶಶಿಕುಮಾರ್ ಸೂಚನೆ ನೀಡಿದ್ದಾರೆ. ಅಲ್ಲದೆ ರಾತ್ರಿ 12:30ರವರೆಗೆ ಹೋಟೆಲ್, ಕೆಫೆ, ಮಾಲ್‌ಗಳನ್ನು ತೆರೆದಿಡಲು ಅವಕಾಶ ಕಲ್ಪಿಸಲಾಗಿದೆ.

Next Story





