ಕರಾವಳಿ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ: ಲಾಲಾಜಿ ಮೆಂಡನ್ ಅಲ್ ಅಝ್‍ಹರ್ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿಹಬ್ಬ ಸಂಭ್ರಮ

ಪಡುಬಿದ್ರಿ: ರಾಜ್ಯದ ಕರಾವಳಿ ಜಿಲ್ಲೆಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ರಾಜ್ಯದಲ್ಲೇ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಜಿಲ್ಲೆಗಳಾಗಿದೆ ಎಂದು ಶಾಸಕ ಲಾಲಾಜಿ ಆರ್.ಮೆಂಡನ್ ಹೇಳಿದರು.
ಶನಿವಾರ ಹೆಜಮಾಡಿಯ ಅಲ್ ಅಝ್‍ಹರ್ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿಹಬ್ಬ ಸಮಾರಂಭದಲ್ಲಿ ಮಾತನಾಡಿದ ಅವರು, ಇಲ್ಲಿನ ಅಲ್‍ಅಝ್‍ಹರ್ ಶಾಲೆಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಉಚ್ಛ್ರಾಯ ಸ್ಥಿತಿಯನ್ನು ತಲುಪಿದೆ. ಉತ್ತಮ ಶಿಕ್ಷಕರೂ ಇಲ್ಲಿರುವುದಾಗಿ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಮಾತನಾಡಿ, ಸರಕಾರದ ಸಾಚಾರ್ ಸಮಿತಿಯ ವರದಿಯ ಬಳಿಕ ಮುಸ್ಲಿಂ ಸಮದಾಯದ ಶೈಕ್ಷಣಿಕ ಅಭಿವೃದ್ಧಿಗಾಗಿ ಅನೇಕ ಮುಸಲ್ಮಾನ್ ಧುರೀಣರು ಜಿಲ್ಲೆಯ ವಿವಿದೆಡೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಉಭಯ ಜಿಲ್ಲೆಗಳಲ್ಲಿ ಶಿಕ್ಷಣ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.
ಸಮಾರಂಭದಲ್ಲಿ ಶಾಲೆಯಲ್ಲಿ ಉತ್ತಮ ಶಿಕ್ಷಕಿಯಾಗಿ ವಿಶ್ರಾಂತರಾಗಿರುವ ವಿಜಯಾ ಶೆಣೈ, ವಿಕಲಾಂಗ ಉದ್ಯಮಿ ಆಸೀಫ್ ಫಕ್ರುದ್ದೀನ್ ಹಾಗೂ ಮುದ್ರಣಾಲಯವನ್ನು ನಡೆಸುತ್ತಿರುವ ಅಂಧ ಉದ್ಯಮಿ ಮಂಜುನಾಥ ಗಡಿಯಾರ್ ಅವರನ್ನು ಸಮ್ಮಾನಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಮುಖ್ಯೋಪಾಧ್ಯಾಯಿನಿ, ಶಿಕ್ಷಕೇತರ ಸಿಬಂದಿಗಳನ್ನು ಗೌರವಿಸಲಾಯಿತು. ಕನ್ನಂಗಾರ್ ಶೈಕ್ಷಣಿಕ ಟ್ರಸ್ಟ್‍ನ ಅಧ್ಯಕ್ಷ ಎಚ್. ಬಿ. ಮೊಹಮ್ಮದ್ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಸಂಚಾಲಕ ಕೆ. ಎಸ್. ಶೇಖಬ್ಬ, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷ ಪಾಂಡುರಂಗ ಕರ್ಕೇರ, ಮಂಗಳೂರು ವಿವಿಯ ಎಸೋಸಿಯೇಟ್ ಪ್ರೊ. ಡಾ| ಅಬೂಬಕರ್ ಸಿದ್ದೀಕ್, ಕಾಂಗ್ರೆಸ್ ಕೋ ಆರ್ಡಿನೇಟರ್ ಅಬ್ದುಲ್ ಅಝೀಝ್ ಹೆಜಮಾಡಿ, ಖಾಲೀದ್ ತಣ್ಣೀರುಬಾವಿ, ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯ ರಮೀಝ್ ಹುಸೈನ್, ಅಬ್ದುಲ್ ರಝಾಕ್ ಕೋಟೆ, ಸಯ್ಯದ್ ಅಲಿ ಕೋಟೆ, ಹಂಝ ಅಹಮ್ಮದ್, ವಿದ್ಯಾರ್ಥಿ ನಾಯಕ ಮೊಹಮ್ಮದ್ ಶಿಹಾಬ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಣಯ್ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲೆ ಶಾಹೀನ್ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಸುಚಿತ್ರಾ ವಂದಿಸಿದರು.
ನಾಲ್ಕು ದಿನಗಳ ವಿವಿಧ ಕಾರ್ಯಕ್ರಮಗಳಲ್ಲಿ ಅಂಧ ಕಲಾವಿದರಿಂದ ಸಂಗೀತ ರಸಮಂಜರಿ, ರಕ್ಷಕರಿಂದ ಆಹಾರೋತ್ಸವ, ಹಳೆವಿದ್ಯಾರ್ಥಿಗಳಿಂದ 'ನಾ ಕಲಿತ ಶಾಲೆಯಲ್ಲಿಒಂದು ದಿನ' ಶಿಕ್ಷಕಿಯರಿಂದ ಮನೋರಂಜನಾ ಕಾರ್ಯಕ್ರಮ, ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಮಂಗಳೂರು ಡಾನ್ಸ್ ಅಕಾಡೆಮಿಯಿಂದ ನೃತ್ಯ ವೈಭವ, ವಿಜ್ಞಾನ, ಗಣಿತ, ಸಮಾಜ, ಕಲಾ ವಿಭಾಗದ ಪ್ರಯೋಗಗಳ ಪ್ರದರ್ಶನ, ನಾಲೆಡ್ಜ್‍ಎಕ್ಸ್‍ಪೆÇೀ ಮತ್ತು ಊರಿನ ಇಬ್ಬರು ಹಿರಿಯ ಸಾಧಕರಿಗೆ ಹಾಗೂ ಹಿರಿಯ ಶಿಕ್ಷಕರಿಗೆ ಸನ್ಮಾನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು.