ಉಡುಪಿ: ಪೆಟ್ರೋಲ್ ಪಂಪ್ ಸಿಬ್ಬಂದಿ ನಾಪತ್ತೆ

ಉಡುಪಿ: ಬಡಾ ಎರ್ಮಾಳು ಗ್ರಾಮದ ಪೆಟ್ರೋಲ್ ಬಂಕ್‌ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಬಜೆಗುಂಡಿ ಗ್ರಾಮದ ನಿವಾಸಿ ದಿನೇಶ ಎಸ್ (56) ಎಂಬವರು ಜುಲೈ 13ರಂದು ಆಸ್ಪತ್ರೆಗೆಂದು ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5 ಅಡಿ 7 ಇಂಚು ಎತ್ತರ, ಸಾಮಾನ್ಯ ಶರೀರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ ಉಪನಿರೀಕ್ಷಕರು ದೂ.ಸಂಖ್ಯೆ: 0820-2555452, ಮೊ.ನಂ: 9480805450, ಕಾಪು ಪೊಲೀಸ್ ವೃತ್ತ ನಿರೀಕ್ಷಕರು ದೂ.ಸಂಖ್ಯೆ:0820-2552133, ಮೊ.ನಂ: 9480805431, ಪೊಲೀಸ್ ಕಂಟ್ರೋಲ್ ರೂಂ ನಂ: 0820-2525444ನ್ನು ಸಂಪರ್ಕಿ ಸಬಹುದು ಎಂದು ಪಡುಬಿದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





