ಮಂಗಳೂರು: ಎಂಸಿಸಿ ಬ್ಯಾಂಕಿನ ಎನ್‌ಆರ್‌ಐ ಸಮಾವೇಶ

ಮಂಗಳೂರು, ಜ.1: ಎಂಸಿಸಿ ಬ್ಯಾಂಕಿನ ಶತಮಾನೋತ್ತರ ದಶಮಾನೋತ್ಸವದ ಅಂಗವಾಗಿ ಅನಿವಾಸಿ ಭಾರತೀಯ ಗ್ರಾಹಕರ ಸಮಾವೇಶ (ಎನ್‌ಆರ್‌ಐ ಮೀಟ್)ವು ಶುಕ್ರವಾರ ಮಂಗಳೂರಿನ ಓಶಿಯನ್ ಪರ್ಲ್ ಹೊಟೇಲಿನಲ್ಲಿ ಜರುಗಿತು.
ಮಂಗಳೂರು ಸೈಂಟ್ ಆನ್ಸ್ ಫ್ರಾಯರಿಯ ಸುಪೀರಿಯರ್ ವಂ.ಡಾ.ರೊಕಿ ಡಿಕುನ್ಹಾ ದೀಪ ಬೆಳಗಿಸಿ ಸಮಾವೇಶವನ್ನು ಉದ್ಘಾಟಿಸಿದರು.
ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕುಲಾಸೊ, ಸ್ಥಾಪಕ, ಮಂಗಳೂರು ದಾಯ್ಜಿವರ್ಲ್ಡ್ ಮಿಡಿಯಾ ಪ್ರೈವೆಟ್ ಲಿಮಿಟೆಡ್‌ನ ಮ್ಯಾನೆಜಿಂಗ್ ಡೈರಕ್ಟರ್, ವಾಲ್ಟರ್ ನಂದಳಿಕೆ, ಚಾರ್ಟರ್ಡ್ ಅಕೌಂಟೆಂಟ್ ರುಡಾಲ್ಫ್ ರೊಡ್ರಿಗಸ್ ಮುಖ್ಯ ಅತಿಥಿಗಳಾಗಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ಎಂಸಿಸಿ ಬ್ಯಾಂಕ್ ನಮ್ಮ ಸಮುದಾಯದ ಹೆಮ್ಮೆಯ ಬ್ಯಾಂಕ್ ಆಗಿದೆ. ಇದಕ್ಕೆ 110 ವರ್ಷಗಳ ಇತಿಹಾಸವಿದೆ. ಗ್ರಾಹಕರ ಅಗತ್ಯಗಳಿಗೆ ಸಕರಾತ್ಮಕವಾಗಿ ಸ್ಪಂದಿಸಲು ಮತ್ತು ಅತ್ತ್ಯುತ್ತಮ ಗ್ರಾಹಕ ಸೇವೆಯನ್ನು ನೀಡಲು ಬ್ಯಾಂಕ್ ಬದ್ದವಾಗಿದೆ ಎಂದರು.
ಈ ಬಗ್ಗೆ ಬ್ಯಾಂಕಿನ ಸಿಬ್ಬಂದಿಗೆ ನಿರಂತರವಾಗಿ ತರಬೇತಿಯನ್ನು ನೀಡಲಾಗುತ್ತಿದೆ ಎಂದ ಅವರು, ಎಲ್ಲಾ ಶಾಖೆಗಳಲ್ಲಿ ಗ್ರಾಹಕರ ಸಮವೇಶಗಳನ್ನು ನಡೆಸಿದ್ದು, ಗ್ರಾಹಕರ ಸೇವೆ ಹಾಗೂ ಸೌಲಭ್ಯಗಳ ಬಗ್ಗೆ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದ ಬಗ್ಗೆ ಸಮಾವೇಶದಲ್ಲಿ ಸಂತೋಷವಿದೆ. ಅನಿವಾಸಿ ಭಾರತಿಯರು ಉದ್ಯೋಗದಲ್ಲಿರುವ ಅಥವಾ ವ್ಯವಹಾರವನ್ನು ನಡೆಸುತ್ತಿರುವ ಆಯಾ ದೇಶಗಳಲ್ಲಿ ಪ್ರಚಾರ ಮಾಡಿ ಬ್ಯಾಂಕನ್ನು ಬೆಂಬಲಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿ ಡಾ.ರೋನಾಲ್ಡ್ ಕುಲಾಸೊ ಮಾತನಾಡಿ, ಶಿಕ್ಷಣ, ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ಉದಾತ್ತ ಕೆಲಸ ಮಾಡುವ ಮೂಲಕ ಕ್ರೈಸ್ತ ಸಮುದಾಯವು ಜಗತ್ತಿನಾದ್ಯಂತ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತೆಯೇ ಕಳೆದ ನಾಲ್ಕು ವರ್ಷಗಳಲ್ಲಿ ಅನಿಲ್ ಲೋಬೊ ನೇತ್ರೃತ್ವದಲ್ಲಿನ ಎಂಸಿಸಿ ಬ್ಯಾಂಕ್ ಮಾಡಿದ ಅಭೂತಪೂರ್ವ ಸಾಧನೆಗಾಗಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಇಡೀ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು.
ಸಮುದಾಯದ ಸದಸ್ಯರು ವಿಶೇಷವಾಗಿ ಅನಿವಾಸಿ ಭಾರತೀಯರು ಬ್ಯಾಂಕಿನ ಬಂಡವಾಳ ಮತ್ತು ಎನ್‌ಆರ್‌ಐ ಠೇವಣಿಗಳನ್ನು ಹೆಚ್ಚಿಸುವಲ್ಲಿ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡಿ, ಬ್ಯಾಂಕಿನ ಸರ್ವತೋಮುಖ ಅಭಿವೃದ್ದಿಗೆ ಕಾರಣಕರ್ತರಾಗಬೇಕು ಎಂದರು. ಈ ನಿಟ್ಟಿನಲ್ಲಿ ವೈಯುಕ್ತಿಕವಾಗಿ ತಮ್ಮ ಸಂಪೂರ್ಣ ಸಹಕಾರದ ಆಶ್ವಾಸನೆಯನ್ನು ನೀಡಿದರು.
ಉದ್ಘಾಟಿಸಿದ ವಂ.ಡಾ.ರೊಕಿ ಡಿಕುನ್ಹಾ ಮಾತನಾಡಿ, ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಶ್ಲಾಘಿಸಿದರು. ಹಂಚಿಕೊಳ್ಳುವುದು ಯಾವಾಗಲೂ ಸಂತೋಷವನ್ನು ದ್ವಿಗುಣಗೊಳಿಸುತ್ತದೆ. ನಾವು ಗಳಿಸುವುದು ನಮಗೆ ಬದುಕನ್ನು ನೀಡುತ್ತದೆ ಮತ್ತು ನಾವು ಏನು ಕೋಡುತ್ತೇವೆಯೊ ಅದು ಜೀವನವನ್ನು ರೂಪಿಸುತ್ತದೆ. ಮಹಾತ್ಮಗಾಂಧಿಯವರ ಮಾತುಗಳನ್ನು ಉಲ್ಲೇಖಿಸಿದ ಅವರು ಮಾನವೀಯತೆಯ ಮೌಲ್ಯಗಳ ಮಹತ್ವದ ಬಗ್ಗೆ ವಿವರಿಸಿದರು.
ಮುಖ್ಯ ಅತಿಥಿ ವಾಲ್ಟರ್ ನಂದಳಿಕೆ ಮಾತನಾಡಿ, ಟೀಕೆಗಳ ನಡುವೆಯೂ ನಾಲ್ಕು ವರ್ಷಗಳಲ್ಲಿನ ಬ್ಯಾಂಕಿನ ಅಧ್ಬುತ ಪ್ರಗತಿಗಾಗಿ ಬಗ್ಗೆ ಎಂಸಿಸಿ ಬ್ಯಾಂಕಿನ ಅಧ್ಯಕ್ಷರ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಕಠಿಣ ಪರಿಶ್ರಮ ಮತ್ತು ನಿಸ್ವಾರ್ಥ ಸೇವೆ ಶ್ಲಾಘನೀಯ. ಸಾಧನೆ ಮಾಡುವುದಕ್ಕಿಂತ ಟೀಕೆ ಮಾಡುವುದು ಸುಲಭ. ಆದರೆ ಯಾವುದೇ ಟೀಕೆಗಳನ್ನು ಲೆಕ್ಕಿಸದೆ ಬ್ಯಾಂಕಿನ ಅಭಿವೃದ್ದಿಯ ಬಗ್ಗೆ ಗಮನ ಹರಿಸಿ ಬ್ಯಾಂಕನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಲು ಅವರು ಕರೆ ನೀಡಿದರು.
ಸಿಎ ರುಡಾಲ್ಫ್ ರೊಡ್ರಿಗಸ್ ಮಾತನಾಡಿ, ಅನಿವಾಸಿ ಭಾರತೀಯರಿಗೆ ಅನ್ವಯವಾಗುವ ಅದಾಯ ತೆರಿಗೆ ಮತ್ತು ಬಂಡವಾಳ ಲಾಭದ ಬಗ್ಗೆ ಮಾಹಿತಿಯನ್ನು ನೀಡಿ, ಗ್ರಾಹಕರಲ್ಲಿರುವ ಸಂದೇಹಗಳಿಗೆ ಸ್ಪಷ್ಟೀಕರಣ ನೀಡಿದರು.
ಎಂಸಿಸಿ ಬ್ಯಾಂಕ್‌ನ ನಾಲ್ಕು ವರ್ಷಗಳ ಪ್ರಗತಿ ಹಾಗೂ ಬ್ಯಾಂಕಿನಲ್ಲಿರುವ ಕಾರ್ಯಕ್ಷಮತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್‌ಗೆ ಎನ್‌ಆರ್‌ಐ ಸೌಲಭ್ಯ ಸಿಕ್ಕಿದ ದಿನದಿಂದ ಬ್ಯಾಂಕಿನಲ್ಲಿ ಗ್ರಾಹಕರಾಗಿ ಮುಂದುವರಿಯುತ್ತಿರುವ ಅನಿವಾಸಿ ಭಾರತಿಯರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರಾದ ಮಾರ್ಸೆಲ್ ಡಿಸೋಜ, ಡೇವಿಡ್ ಡಿಸೋಜ, ಹೆರಾಲ್ಡ್ ಮೊಂತೆ ರೊ, ಅಂಡ್ರ್ಯು ಡಿಸೋಜ, ರೋಶನ್ ಡಿಸೋಜ, ಐರಿನ್ ರೆಬೆಲ್ಲೊ, ಡಾ|ಫ್ರೀಡಾ ಡಿಸೋಜ, ಎಲ್‌ರೊಯ್ ಕಿರಣ್ ಕಾಸ್ಟೊ, ಸಿ.ಜಿ.ಪಿಂಟೊ, ಸುಶಾಂತ್ ಸಲ್ಡಾನ್ಹಾ, ಶರ್ಮಿಳಾ ಮಿನೇಜಸ್, ಆಲ್ವಿನ್ ಮೊಂತೇರೊ, ಫೆಲಿಕ್ಸ್ ಡಿಕ್ರುಝ್, ಉಪ ಮಹಾ ಪ್ರಬಂಧಕ ರಾಜ್ ಮಿನೇಜಸ್, ಹಿರಿಯ ಪ್ರಬಂಧಕರ (ಎನ್‌ಆರ್‌ಐ) ಡೆರಿಲ್ ಲಸ್ರಾದೊ ಮತ್ತಿತ್ತರು ಹಾಜರಿದ್ದರು.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅನಿಲ್ ಪತ್ರಾವೊ ಸ್ವಾಗತಿಸಿದರು. ಮಹಾ ಪ್ರಬಂಧಕ ಸುನೀಲ್ ಮಿನೇಜಸ್ ವಂದಿಸಿದರು. ರೋಶನ್ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.