ಮೆಕ್ಸಿಕೋ: ಬಸ್ಸು ಉರುಳಿ 15 ಪ್ರವಾಸಿಗರು ಮೃತ್ಯು

ಮೆಕ್ಸಿಕೋ ಸಿಟಿ, ಡಿ.31: ಪಶ್ಚಿಮ ಮೆಕ್ಸಿಕೋದಲ್ಲಿ ಶುಕ್ರವಾರ ಬಸ್ಸು ಪಲ್ಟಿಯಾಗಿ ಕನಿಷ್ಟ 15 ಮಂದಿ ಮೃತಪಟ್ಟಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಲಿಯೋನ್ ನಗರಕ್ಕೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ಸು ಪಲ್ಟಿಯಾಗಿ ಅಪಘಾತ ಸಂಭವಿಸಿದೆ. 15 ಪ್ರವಾಸಿಗರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ . ಬಸ್ಸಿನಲ್ಲಿ 48 ಪ್ರಯಾಣಿಕರಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story