ಅಲೋಕ್ ಶರ್ಮಗೆ ನೈಟ್ ಪದವಿ

ಲಂಡನ್, ಡಿ.31: ಭಾರತೀಯ ಮೂಲದ, ಬ್ರಿಟನ್‍ನ ಮಾಜಿ ಸಚಿವ ಅಲೋಕ್ ಶರ್ಮ ಹವಾಮಾನ ಶೃಂಗಸಭೆಯಲ್ಲಿ ತೋರಿದ ನಾಯಕತ್ವದ ಕೌಶಲ್ಯದ ಹಿನ್ನೆಲೆಯಲ್ಲಿ ಅವರನ್ನು ನೈಟ್ ಪದವಿಯ ಗೌರವಕ್ಕೆ ಬ್ರಿಟನ್ ರಾಜ ಚಾಲ್ರ್ಸ್ ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಆಗ್ರದಲ್ಲಿ ಜನಿಸಿದ 55 ವರ್ಷದ ಅಲೋಕ್ ಶರ್ಮ ಅಕ್ಟೋಬರ್‍ವರೆಗೆ ಬ್ರಿಟನ್‍ನ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು. ಬ್ರಿಟನ್ ಮತ್ತು ವಿದೇಶದಲ್ಲಿ ಅಸಾಮಾನ್ಯ ಸಾರ್ವಜನಿಕ ಸೇವೆ ಸಲ್ಲಿಸುವ ಸಾಧಕರಿಗೆ ಬ್ರಿಟನ್ ನೀಡುವ ವಾರ್ಷಿಕ ಗೌರವವಾದ ನೈಟ್ ಪದವಿಗೆ ಶರ್ಮ ಸೇರಿದಂತೆ 30 ಸಾಧಕರನ್ನು ಆಯ್ಕೆ ಮಾಡಲಾಗಿದೆ.
Next Story