ಮೆಕ್ಸಿಕೋ ವಿಮಾನ ನಿಲ್ದಾಣದಲ್ಲಿ 4 ಮಾನವ ತಲೆಬುರುಡೆ ಪತ್ತೆ

ಮೆಕ್ಸಿಕೋ ಸಿಟಿ, ಡಿ.31: ಮೆಕ್ಸಿಕೋ ವಿಮಾನ ನಿಲ್ದಾಣದಲ್ಲಿ ಹಾಳೆಯಲ್ಲಿ ಸುತ್ತಿಟ್ಟಿದ್ದ 4 ಮಾನವ ತಲೆಬುರುಡೆ ಪತ್ತೆಯಾಗಿವೆ. ಇವನ್ನು ಕೊರಿಯರ್ ಮೂಲಕ ಅಮೆರಿಕಕ್ಕೆ ರವಾನಿಸಲು ಉದ್ದೇಶಿಸಲಾಗಿತ್ತು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಮಧ್ಯ ಮೆಕ್ಸಿಕೋದ ಕ್ವೆರೆಟರೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಟ್ಟಿನ ಪೆಟ್ಟಿಗೆಯೊಳಗೆ ಅಲ್ಯುಮೀನಿಯಂ ಹಾಳೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ತಲೆಬುರುಡೆ ಪತ್ತೆಯಾಗಿದೆ. ಮೆಕ್ಸಿಕೋದ ಸಂಘರ್ಷ ಪೀಡಿತ ಕರಾವಳಿ ಪ್ರದೇಶ ಮಿಚೋಕನ್ ನಗರದಿಂದ ಅಮೆರಿಕದ ಸೌತ್ಕರೊಲಿನಾ ಪ್ರಾಂತದ ಮ್ಯಾನಿಂಗ್ ನಗರದ ವಿಳಾಸಕ್ಕೆ ಇದನ್ನು ರವಾನಿಸಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story