Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ತಿಳಿ ವಿಜ್ಞಾನ
  5. ಕಾಡಿನ ರಸ್ತೆಗಳು ಜೀವವೈವಿಧ್ಯಕ್ಕೆ...

ಕಾಡಿನ ರಸ್ತೆಗಳು ಜೀವವೈವಿಧ್ಯಕ್ಕೆ ಮಾರಕವೇ?

ಆರ್.ಬಿ.ಗುರುಬಸವರಾಜಆರ್.ಬಿ.ಗುರುಬಸವರಾಜ1 Jan 2023 12:05 AM IST
share
ಕಾಡಿನ ರಸ್ತೆಗಳು ಜೀವವೈವಿಧ್ಯಕ್ಕೆ ಮಾರಕವೇ?

ಕಾಡಿನ ನಾಶ ಹಾಗೂ ಕಾಡಿನಲ್ಲಿ ರಸ್ತೆ ನಿರ್ಮಾಣದ ನಂತರವೇ ಬಹುತೇಕ ಕಾಡು ಪ್ರಾಣಿಗಳು ನಾಡಿನತ್ತ ಮುಖಮಾಡಿರುವುದನ್ನು ಗಮನಿಸಬಹುದು. ವನ್ಯಜೀವಿಗಳು ಆಹಾರವನ್ನರಸಿ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುವಾಗ ಪ್ರಯಾಣಿಕರ ವಾಹನಗಳಿಗೆ ಅಪಘಾತದಲ್ಲಿ ಸಿಕ್ಕ್ಕಿ ಸಾಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಕಾಡಿನ ರಸ್ತೆಯಲ್ಲೂ ವಾಹನ ದಟ್ಟಣೆಯು ಹೆಚ್ಚುತ್ತಿದೆ. ಇಂತಹ ಸ್ಥಳಗಳಲ್ಲಿ ಅರಣ್ಯ ಇಲಾಖೆಯು ಮುನ್ನೆಚ್ಚರಿಕೆಯ ಬೋರ್ಡ್ ಅಳವಡಿಸುವ ಕಾರ್ಯ ವ್ಯವಸ್ಥಿತವಾಗಿಲ್ಲ. ಇದ್ದರೂ ನಮ್ಮ ಕಣ್ಣಿಗೆ ಕಾಣದಂತೆ ಮರೆಯಾಗಿರುತ್ತದೆ. ಕಂಡರೂ ನಾವದನ್ನು ಓದುವ, ಮುನ್ಸೂಚನೆಗಳನ್ನು ಅನುಸರಿಸುವ ಗೋಜಿಗೆ ಹೋಗುವುದೇ ಇಲ್ಲ. ಯಾಕೆಂದರೆ ಆ ಕ್ಷಣದಲ್ಲಿ ನಮಗೆ ವೇಗದ ಪ್ರಯಾಣ ಮುಖ್ಯವಾಗಿರುತ್ತದೆಯೇ ಹೊರತು ಪ್ರಾಣಿಗಳ ಜೀವ ಅಲ್ಲ.


ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪದ ಅತಿರೇಕಗಳು ದಿನೇ ದಿನೇ ಹೆಚ್ಚುತ್ತಿವೆ. ಮಾನವ ಸೃಷ್ಟಿಸಿರುವ ಹಸ್ತಕ್ಷೇಪಗಳಿಂದ ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಬಹು ದೊಡ್ಡ ಸಂಘರ್ಷ ಏರ್ಪಡುತ್ತಲೇ ಇದೆ. ಕಾಡಿನ ಪ್ರಾಣಿಗಳು ನಾಡಿಗೆ ಬಂದು ಮಾನವನಿಂದ ದಾಳಿಗೊಳಗಾದಾಗ ಪ್ರಾಣಿಪರ ಕೂಗು ಏಳುತ್ತದೆ. ಅದೇ ಮಾನವ ಕಾಡಿಗೆ ಹೋಗಿ ಅಲ್ಲಿನ ಪ್ರಾಣಿಗಳಿಗೆ ತೊಂದರೆ ಮಾಡಿದಾಗ ಯಾವ ಕೂಗೂ ಏಳದಿರುವುದು ವಿಪರ್ಯಾಸವಲ್ಲವೇ? ಇತ್ತೀಚಿನ ವರ್ಷಗಳಲ್ಲಿ ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಪರಸ್ಪರ ದಾಳಿಗಳು ಹೆಚ್ಚಾಗತೊಡಗಿವೆ. ಕೆಲವು ಪೂರ್ವನಿಯೋಜಿತ ದಾಳಿಗಳಾದರೆ, ಕೆಲವು ಅನಿರೀಕ್ಷಿತ ದಾಳಿಗಳು ದಾಖಲಾಗುತ್ತವೆ. ಅಪಘಾತದಂತಹ ಕೆಲವು ಸಂದರ್ಭಗಳಲ್ಲಿ ಪ್ರಾಣಿಗಳು ಜೀವ ಕಳೆದುಕೊಳ್ಳುವುದೇ ಹೆಚ್ಚು. ಈ ಬಗ್ಗೆ ಪ್ರತಿದಿನವೂ ಮಾಧ್ಯಮಗಳಲ್ಲಿ ಸುದ್ದಿ ನೋಡುತ್ತಲೇ ಇರುತ್ತೇವೆ. ಕಾಡಿನಿಂದ ನಾಡಿಗೆ ಬಂದ ಅನೇಕ ಪ್ರಾಣಿಗಳು ಒಂದಿಲ್ಲೊಂದು ಕಾರಣದಿಂದ ಸಾಯುತ್ತಲೇ ಇವೆ. ಅಯ್ಯೋ ಪಾಪ ಹೀಗಾಗಬಾರದಿತ್ತು? ಎಂದು ಬಾಯಲ್ಲಿ ಕನಿಕರ ಹೇಳಿ, ಅದನ್ನು ಅಲ್ಲಿಗೆ ಮರೆತುಬಿಡುತ್ತೇವೆ.

ಕಾಡಿನ ಪ್ರಾಣಿಗಳು ನಾಡಿಗೆ ಬರುವ ಕಾರಣಗಳನ್ನು ಹುಡುಕುತ್ತಾ ಹೋದರೆ ಬೆರಳು ನಮ್ಮತ್ತಲೇ ತಿರುಗುತ್ತವೆ. ಅಭಿವೃದ್ಧ್ದಿಯ ಹೆಸರಿನಲ್ಲಿ ಈಗಾಗಲೇ ದೊಡ್ಡ ಪ್ರಮಾಣದ ಕಾಡಿನ ನಾಶಕ್ಕೆ ನಾವೇ ಕಾರಣರಾಗಿದ್ದೇವೆ. ಜನವಸತಿ ಹಾಗೂ ಸಂಪರ್ಕದ ಭಾಗವಾಗಿ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ಅದರಲ್ಲೂ ಮುಖ್ಯವಾಗಿ ಜನರ ಸಂಕರ್ಪದಿಂದ ದೂರ ಇದ್ದ ಕಾಡುಗಳಿಗೂ ಸಂಪರ್ಕ ಕಲ್ಪಿಸಲು ರಸ್ತೆ ನಿರ್ಮಿಸುತ್ತಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹೆಸರಿನಲ್ಲಿ ಕಿರಿದಾಗಿದ್ದ ಕಾಡಿನ ರಸ್ತೆಗಳನ್ನು ಅಗಲೀಕರಣ ಮಾಡುವ ಧಾವಂತದಲ್ಲಿ ಕಾಡಿನ ಮರಗಳನ್ನು ಹನನ ಮಾಡಿದ್ದೇವೆ. ಆ ಮೂಲಕ ಸುಲಭವಾಗಿ ಕಾಡಿನ ಪ್ರವೇಶಕ್ಕೆ ಸುಲಭ ಮಾರ್ಗ ಕಂಡುಕೊಂಡಿದ್ದೇವೆ. ರಸ್ತೆಗಳು ಸುವ್ಯವಸ್ಥಿತ ಆದಂತೆ ವಾಹನಗಳ ವೇಗವೂ ಹೆಚ್ಚಿದೆ. ವೇಗದ ಸವಾರಿಯಲ್ಲಿ ಕಾಡು ಪ್ರಾಣಿಗಳ ಜೀವ ತತ್ತರಿಸುತ್ತಿದೆ. ನಾವು ಸಂಚರಿಸುವ ಸಾಮಾನ್ಯ ರಸ್ತೆಯಲ್ಲಿಯೇ ಅನೇಕ ಚಿಕ್ಕ ಚಿಕ್ಕ ಪ್ರಾಣಿಗಳಾದ ಇಲಿ, ಅಳಿಲು, ನಾಯಿ, ಬೆಕ್ಕು, ಓತಿಕ್ಯಾತ, ಗೋಸುಂಬೆ, ಶತಪದಿ, ಜರಿ, ಹಾವು, ಚೇಳು, ಕಪ್ಪೆಇತ್ಯಾದಿಗಳು ಸತ್ತು ಬಿದ್ದಿರುವುದನ್ನು ನಿತ್ಯವೂ ನೋಡುತ್ತೇವೆ. ‘‘ಅಯ್ಯೋ ಬಿಡ್ರಿ, ಅವನ್ನೆಲ್ಲಾ ರಕ್ಷಣೆ ಮಾಡುತ್ತ ಹೋದ್ರೆ ನಮ್ಮ ಪ್ರಯಾಣ ಸಾಗುವುದೇ ಇಲ್ಲ’’ ಎಂಬ ಧೋರಣೆ ನಮ್ಮದು. ಹೌದು ಇವುಗಳನ್ನು ರಕ್ಷಿಸಲು ನಮಗೆ ಪುರಸೊತ್ತಿಲ್ಲದಿರಬಹುದು. ಅದರಂತೆ ನಮ್ಮ ಜೀವನ ಹಾಗೂ ಜೀವ ಅವಸರದಲ್ಲಿಯೇ ಕೊನೆಯಾಗಲು ಇಚ್ಛಿಸಿದ್ದೇವೆಯೇ? ಇಲ್ಲ. ನಾವು ಮಾತ್ರ ಅರಾಮವಾಗಿ ಇರಬೇಕು, ಪ್ರಾಣಿಗಳು ಸತ್ತರೂ ನಮಗೇನು ಚಿಂತೆಯಿಲ್ಲ ಎಂಬ ನಮ್ಮ ಧೋರಣೆ ಮುಂದೊಂದು ದಿನ ನಮ್ಮ ಜೀವನಕ್ಕೆ ತೊಂದರೆಯಾಗುತ್ತದೆ ಎಂಬ ಕಾಳಜಿ ಕಿಂಚಿತ್ತೂ ಇಲ್ಲದಂತಾಗಿದೆ. ಕಾಡಿನ ನಾಶ ಹಾಗೂ ಕಾಡಿನಲ್ಲಿ ರಸ್ತೆ ನಿರ್ಮಾಣದ ನಂತರವೇ ಬಹುತೇಕ ಕಾಡು ಪ್ರಾಣಿಗಳು ನಾಡಿನತ್ತ ಮುಖಮಾಡಿರುವುದನ್ನು ಗಮನಿಸಬಹುದು.

ವನ್ಯಜೀವಿಗಳು ಆಹಾರವನ್ನರಸಿ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುವಾಗ ಪ್ರಯಾಣಿಕರ ವಾಹನಗಳಿಗೆ ಅಪಘಾತದಲ್ಲಿ ಸಿಕ್ಕ್ಕಿ ಸಾಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಕಾಡಿನ ರಸ್ತೆಯಲ್ಲೂ ವಾಹನ ದಟ್ಟಣೆಯು ಹೆಚ್ಚುತ್ತಿದೆ. ಇಂತಹ ಸ್ಥಳಗಳಲ್ಲಿ ಅರಣ್ಯ ಇಲಾಖೆಯು ಮುನ್ನೆಚ್ಚರಿಕೆಯ ಬೋರ್ಡ್ ಅಳವಡಿಸುವ ಕಾರ್ಯ ವ್ಯವಸ್ಥಿತವಾಗಿಲ್ಲ. ಇದ್ದರೂ ನಮ್ಮ ಕಣ್ಣಿಗೆ ಕಾಣದಂತೆ ಮರೆಯಾಗಿರುತ್ತದೆ. ಕಂಡರೂ ನಾವದನ್ನು ಓದುವ, ಮುನ್ಸೂಚನೆಗಳನ್ನು ಅನುಸರಿಸುವ ಗೋಜಿಗೆ ಹೋಗುವುದೇ ಇಲ್ಲ. ಯಾಕೆಂದರೆ ಆ ಕ್ಷಣದಲ್ಲಿ ನಮಗೆ ವೇಗದ ಪ್ರಯಾಣ ಮುಖ್ಯವಾಗಿರುತ್ತದೆಯೇ ಹೊರತು ಪ್ರಾಣಿಗಳ ಜೀವ ಅಲ್ಲ. ಅಲ್ಲವೇ? ಅಪಘಾತಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಾಣಿಗಳು ಒಂದೆಡೆಯಾದರೆ, ಮಾನವನ ಅತಿಯಾದ ಕಾಡಿನ ಬಳಕೆಯೂ ಪ್ರಾಣಿಗಳ ಜೀವನಕ್ಕೆ ಎರವಾಗಿದೆ. ಹೆಚ್ಚು ಪ್ರಯಾಣಿಕರಿರುವ ಕಾಡಿನ ರಸ್ತೆಗಳು ಪರೋಕ್ಷವಾಗಿ ಪ್ರಾಣಿಗಳ ಜೀವನಕ್ಕೆ ಸಂಚಕಾರವನ್ನುಂಟು ಮಾಡುತ್ತವೆ. ಮಾನವನ ಹಸ್ತಕ್ಷೇಪವು ಪ್ರಾಣಿಗಳ ಸ್ವತಂತ್ರ ಬದುಕಿಗೆ ಅಡ್ಡಿಯಾಗಿದೆ. ವಾಹನಗಳ ಶಬ್ದ, ಬೆಳಕು ಕೆಲವು ಪ್ರಾಣಿಗಳಿಗೆ ಕಿರಿಕಿರಿಯೆನಿಸುತ್ತದೆ. ಇದರಿಂದ ಪ್ರಾಣಿಗಳ ಸಂಖ್ಯೆ ಮತ್ತು ಆನುವಂಶಿಕ ವೈವಿಧ್ಯ ಕಡಿಮೆಯಾಗುತ್ತದೆ. ಆ ಮೂಲಕ ಕಾಡುಗಳಲ್ಲಿನ ರಸ್ತೆಗಳು ಜೀವವೈವಿಧ್ಯಕ್ಕೆ ಅಪಾಯವನ್ನುಂಟುಮಾಡುತ್ತವೆ.

ಕಾಡಿನ ರಸ್ತೆಯಲ್ಲಿ ಪ್ರಯಾಣಿಸುವಾಗ ದೊಡ್ಡ ದೊಡ್ಡ ಪ್ರಾಣಿಗಳು ರಸ್ತೆಗೆ ಅಡ್ಡಲಾಗಿ ಬಂದಾಗ ವಾಹನಗಳನ್ನು ನಿಲ್ಲಿಸಿ, ಪ್ರಾಣಿಗಳು ರಸ್ತೆ ದಾಟಿದ ನಂತರ ಹೋಗುವುದು ಸಾಮಾನ್ಯ ಸಂಗತಿ. ಆದರೆ ಕೆಲವು ಚಿಕ್ಕ ಚಿಕ್ಕ ಪ್ರಾಣಿಗಳು, ಸರೀಸೃಪಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತವೆ. ಇದನ್ನು ತಪ್ಪಿಸಲು ಅಲ್ಲಲ್ಲಿ ಕೆಲವು ವಿಭಿನ್ನ ಪ್ರಯೋಗಗಳು ನಡೆದಿರುವುದನ್ನು ಗಮನಿಸಬಹುದು.

ಉತ್ತರ ಭಾರತದ ಉತ್ತರಾಖಂಡವು ಪರ್ವತಗಳು ಮತ್ತು ಯಾತ್ರಾ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಉತ್ತರಾಖಂಡ ರಾಜ್ಯವು ಜೀವವೈವಿಧ್ಯದಿಂದ ಸಮೃದ್ಧವಾಗಿದೆ ಮತ್ತು ವಿವಿಧ ಸರೀಸೃಪಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ರಾಜ್ಯದ ಅರಣ್ಯ ಇಲಾಖೆಯು ಕಾಡಿನಲ್ಲಿನ ಸರೀಸೃಪಗಳು ಮತ್ತು ಇತರ ಪ್ರಾಣಿಗಳಿಗೆ ಜನನಿಬಿಡ ಅರಣ್ಯ ರಸ್ತೆಯನ್ನು ದಾಟಲು ಸಂಪೂರ್ಣವಾಗಿ ಪರಿಸರ ಸ್ನೇಹಿ ವಸ್ತುಗಳಿಂದ 90 ಅಡಿ ಉದ್ದದ ಸೇತುವೆಯನ್ನು ನಿರ್ಮಿಸಿದೆ. ಈ ಸೇತುವೆಯು ರಾಜ್ಯದ ನೈನಿತಾಲ್ ಜಿಲ್ಲೆಯ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಒಂದಾಗಿದೆ. ‘‘ನಾವು ದೊಡ್ಡ ಪ್ರಾಣಿಗಳನ್ನು ಉಳಿಸುವುದರ ಮೇಲೆ ಮಾತ್ರ ಗಮನಹರಿಸುತ್ತೇವೆ. ಆದರೆ ಈ ಸರೀಸೃಪಗಳು ನಮ್ಮ ಪರಿಸರ ವ್ಯವಸ್ಥೆಗೆ ಸಮಾನವಾಗಿ ಮುಖ್ಯವಾಗಿದೆ. ಆಹಾರ ಸರಪಳಿಯಲ್ಲಿ ಸರೀಸೃಪಗಳ ಪಾತ್ರವೂ ಮುಖ್ಯವಾಗಿರುವುದರಿಂದ ಅವುಗಳನ್ನು ರಕ್ಷಿಸುವುದೂ ಅಗತ್ಯ. ಅದಕ್ಕಾಗಿ ಸರೀಸೃಪಗಳಿಗೆ ಪರ್ಯಾಯ ಮಾರ್ಗವನ್ನು ಒದಗಿಸುವ ಸಲುವಾಗಿ ಈ ಸೇತುವೆಯನ್ನು ನಿರ್ಮಿಸಿದ್ದೇವೆ’’ ಎನ್ನುತ್ತಾರೆ ಅಲ್ಲಿನ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಚಂದ್ರಶೇಖರ ಜೋಷಿ.

ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಯು ಇನ್ನೊಂದು ವಿಭಿನ್ನ ಪ್ರಯತ್ನ ಮಾಡಿದೆ. ಒಂದು ಅರಣ್ಯ ವಲಯದಿಂದ ಇನ್ನೊಂದು ಅರಣ್ಯ ವಲಯಕ್ಕೆ ಚಿಕ್ಕ ಚಿಕ್ಕ ಪ್ರಾಣಿಗಳು ರಸ್ತೆ ಬಳಸಿ ಚಲಿಸುವಾಗ ವಾಹನಗಳಿಗೆ ಡಿಕ್ಕಿ ಹೊಡೆಯುವುದನ್ನು ತಡೆಯಲು ವಿಶಿಷ್ಟವಾದ ಉಪಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಉತ್ತರ ಬಂಗಾಳದ ಕೆಲವು ಕಾಡಿನಲ್ಲಿ ವಿಶಿಷ್ಟವಾದ ಕೈಯಿಂದ ಮಾಡಿದ ತೂಗು ಸೇತುವೆಗಳನ್ನು ಅಭಿವೃದ್ಧಿಪಡಿಸಿದೆ. ವಿಶೇಷವಾಗಿ ಹಗುರವಾದ ಪ್ರಾಣಿಗಳಿಗಾಗಿ ಒಂದು ಅರಣ್ಯ ವಲಯದಿಂದ ಇನ್ನೊಂದಕ್ಕೆ ಚಲಿಸಲು ಅನುಕೂಲವಾಗುವಂತೆ ಅಲ್ಲಲ್ಲಿ ತೂಗು ಸೇತುವೆಗಳನ್ನು ನಿರ್ಮಿಸಿದೆ. ಈ ರಸ್ತೆಗಳಲ್ಲಿ ಮಂಗಗಳು, ಅಳಿಲುಗಳು, ಕೆಲವು ಸರೀಸೃಪಗಳು ಸೇರಿದಂತೆ ಹಗುರವಾದ ಪ್ರಾಣಿಗಳು ಒಂದು ಅರಣ್ಯ ವಲಯದಿಂದ ಇನ್ನೊಂದು ವಲಯಕ್ಕೆ ಚಲಿಸಲು ಈ ಸೇತುವೆ ಬಳಸುತ್ತವೆ ಎಂದು ಉನ್ನತ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸೇತುವೆಯ ಇನ್ನೊಂದು ವಿಶೇಷ ಏನೆಂದರೆ ಅತೀ ಕಡಿಮೆ ಖರ್ಚಿನಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಪ್ರತೀ ಹಗುರವಾದ ತೂಗು ಸೇತುವೆಯ ನಿರ್ಮಾಣಕ್ಕೆ ಖರ್ಚಾದ ಹಣ ಕೇವಲ 1,000 ರೂ. ಪ್ರಾಣಿ ಮತ್ತು ವಾಹನಗಳ ನಡುವಿನ ಘರ್ಷಣೆಯನ್ನು ತಪ್ಪಿಸಲು ಇತರ ಅರಣ್ಯ ವಲಯಗಳಲ್ಲಿ ಇದೇ ರೀತಿಯ ಸೇತುವೆಗಳನ್ನು ನಿರ್ಮಿಸಲು ಅಲ್ಲಿನ ರಾಜ್ಯ ಅರಣ್ಯ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಅಂತಹ ಹಗುರವಾದ ತೂಗು ಸೇತುವೆಗಳನ್ನು ನಿರ್ಮಿಸುವುದು ತುಲನಾತ್ಮಕವಾಗಿ ಸುಲಭವಾಗಿದೆ. ಸೇತುವೆಗಳ ಎರಡು ತುದಿಗಳನ್ನು ಹಾದುಹೋಗುವ ರಸ್ತೆಗಳ ಎರಡು ತುದಿಗಳಲ್ಲಿ ಮರಗಳೊಂದಿಗೆ ದೃಢವಾಗಿ ಕಟ್ಟಬೇಕಾಗುತ್ತದೆ. ಹಗುರ ಪ್ರಾಣಿಗಳಾದ ಕೋತಿ, ಮುಶಿಯ, ಅಳಿಲು, ಮುಂಗುಸಿ, ಹಾವು ಇತ್ಯಾದಿಗಳು ಈ ಸೇತುವೆಯನ್ನು ಬಳಸಿ ಯಾವುದೇ ಪ್ರಾಣಾಪಾಯ ಇಲ್ಲದೆ ಸುಲಭವಾಗಿ ಸಂಚರಿಸುತ್ತವೆ.

ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972, ಅರಣ್ಯ (ಸಂರಕ್ಷಣೆ) ಕಾಯ್ದೆ 1980 ಮತ್ತು ಪರಿಸರ (ರಕ್ಷಣೆ) ಕಾಯ್ದೆ 1995, ರಕ್ಷಿತ ಪ್ರದೇಶಗಳು ಮತ್ತು ಇತರ ಅರಣ್ಯಗಳ ಮೂಲಕ ರಸ್ತೆಗಳ ನಿರ್ಮಾಣದ ಮೇಲೆ ಸ್ಪಷ್ಟವಾಗಿ ನಿರ್ಬಂಧಗಳನ್ನು ವಿಧಿಸುತ್ತದೆ. ವನ್ಯಜೀವಿಗಳು ಅಥವಾ ಅದರ ಆವಾಸಸ್ಥಾನಕ್ಕೆ ಹಾನಿಯುಂಟು ಮಾಡುವ ಯಾವುದೇ ರಸ್ತೆಗೆ ವನ್ಯಜೀವಿ ರಾಷ್ಟ್ರೀಯ ಮಂಡಳಿಯಿಂದ ಕ್ಲಿಯರೆನ್ಸ್ ಅಗತ್ಯವಿದೆ. ಆದರೆ ನಮ್ಮಲ್ಲಿ ಬಹುತೇಕ ಕಡೆಗಳಲ್ಲಿ ಈ ನಿಯಮ ಮೀರಿ ರಸ್ತೆಗಳ ನಿರ್ಮಾಣ ಮಾಡಲಾಗಿದೆ. ಪ್ರಾಣಿಗಳಿಗೂ ಬದುಕುವ ಹಕ್ಕು ಇದೆ ಎನ್ನುವುದಾದರೆ ಅವುಗಳ ಆವಾಸ ಸ್ಥಾನಕ್ಕೆ ಮತ್ತು ದೈನಂದಿನ ಜೀವನಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕಾದುದು ನಮ್ಮ ಕರ್ತವ್ಯ. ಇದು ಕೇವಲ ಅರಣ್ಯ ಇಲಾಖೆ ಅಥವಾ ವನ್ಯಜೀವಿ ಸಂರಕ್ಷಣಾ ಇಲಾಖೆಯ ಕೆಲಸವಲ್ಲ. ಇದು ಇಡೀ ಮನುಕುಲದ ಜವಾಬ್ದಾರಿಯಾಗಿದೆ. ಏಕೆಂದರೆ ವನ್ಯ ಜೀವಿಗಳೂ ನಮ್ಮ ಆಹಾರದ ಸರಪಳಿಯ ಭಾಗವಲ್ಲವೇ? ಹಾಗಾಗಿ ಅವುಗಳನ್ನು ರಕ್ಷಿಸಿದರೆ ನಮ್ಮ ಉಳಿವು, ಇಲ್ಲದಿದ್ದರೆ ನಮ್ಮ ಅಳಿವಿಗೆ ನಾವೇ ಕಾರಣರಾಗುತ್ತೇವೆ.

ಕಾಡಿನ ರಸ್ತೆ ಮೂಲಕ ಸಂಚರಿಸುವಾಗ ನಮ್ಮಷ್ಟಕ್ಕೆ ನಾವೇ ಒಂದಿಷ್ಟು ನಿಯಮಗಳನ್ನು ಹಾಕಿಕೊಳ್ಳುವುದು ಒಳಿತು. ಅದೇನೆಂದರೆ, ಆದಷ್ಟೂ ನಿಧಾನವಾಗಿ ವಾಹನ ಚಲಾಯಿಸುವುದು, ಅನವಶ್ಯಕವಾಗಿ ಹಾರ್ನ್ ಬಳಕೆ ನಿಲ್ಲಿಸುವುದು ಅಥವಾ ಹಾರ್ನ್ ಬಳಸದೆ ಇರುವುದು, ರಾತ್ರಿ ಕಾಡಿನ ರಸ್ತೆಯ ಪ್ರಯಾಣ ತಪ್ಪಿಸುವುದು, ಕಾಡಿನ ರಸ್ತೆಯಲ್ಲಿ ಚಲಿಸುವಾಗ ತೆವಳುವ ಅಥವಾ ನಿಧಾನವಾಗಿ ಚಲಿಸುವ ಪ್ರಾಣಿಗಳು ರಸ್ತೆಯಲ್ಲಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ವಾಹನ ಚಲಾಯಿಸುವುದು, ಪ್ರಾಣಿಗಳ ಸಹಜ ಓಡಾಟಕ್ಕೆ ತೊಂದರೆಯಾಗದಂತೆ ವಾಹನಕ್ಕೆ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳುವುದು, ಉದಾಹರಣೆಗೆ ವಾಹನದ ಬಣ್ಣ ಪ್ರಾಣಿಗಳ ಕಣ್ಣಿಗೆ ತೊಂದರೆಯನ್ನುಂಟು ಮಾಡದಂತೆ ವ್ಯವಸ್ಥೆಗೊಳಿಸುವುದು, ಕಾಡು ಪ್ರಾಣಿಗಳಿಂದ ವಾಹನದಲ್ಲಿನ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಮುಂತಾದವುಗಳು. ಹೀಗೆ ಮಾಡುವ ಮೂಲಕ ಕಾಡಿನ ಪ್ರಾಣಿಗಳ ರಕ್ಷಣೆಗೆ ಮುಂದಾಗೋಣ.

share
ಆರ್.ಬಿ.ಗುರುಬಸವರಾಜ
ಆರ್.ಬಿ.ಗುರುಬಸವರಾಜ
Next Story
X