Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಪದವಿಪೂರ್ವ ತುಮುಲ

ಪದವಿಪೂರ್ವ ತುಮುಲ

ರಶ್ಮಿ ಎಸ್.ರಶ್ಮಿ ಎಸ್.1 Jan 2023 12:05 AM IST
share
ಪದವಿಪೂರ್ವ ತುಮುಲ

ನಿರ್ದೇಶಕ ಯೋಗರಾಜ್ ಭಟ್ ಶಿಷ್ಯ ಹರಿಪ್ರಸಾದ್ ಜಯಣ್ಣ ನಿರ್ದೇಶನದ ‘ಪದವಿಪೂರ್ವ’ ಸಿನೆಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. ಹದಿಹರೆಯದ ಮನಸ್ಸುಗಳ ತಳಮಳ, ತುಮುಲ, ಎಲ್ಲವೂ ‘ಪದವಿ ಪೂರ್ವ’ ಸಿನೆಮಾದಲ್ಲಿದೆ. ಪದವಿಪೂರ್ವದ ವಯಸ್ಸು ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಎಷ್ಟು ಮುಖ್ಯ, ಆ ವಯಸ್ಸಿನಲ್ಲಿ ಮನಸ್ಥಿತಿ ಹೇಗಿರುತ್ತದೆ, ಆ ವಯಸ್ಸಿನಲ್ಲಿ ಪೋಷಕರ ಪಾತ್ರ ಏನು ಅನ್ನುವುದನ್ನು ಈ ಸಿನೆಮಾದ ಮೂಲಕ ತೋರಿಸಿದ್ದಾರೆ ನಿರ್ದೇಶಕ ಹರಿಪ್ರಸಾದ್.

ಹದಿಹರೆಯದ ವಯಸ್ಸಿನ ಸುತ್ತ ಈಗಾಗಲೇ ಹಲವಾರು ಸಿನೆಮಾಗಳು ಬಂದು ಹೋಗಿವೆ. ಆದರೂ ಈ ಸಿನೆಮಾ ಪ್ರೇಕ್ಷಕರಿಗೆ ಎಮೋಷನಲಿ ಕನೆಕ್ಟ್ ಆಗ್ತಿದೆ. ಪದವಿಪೂರ್ವ ವಯಸ್ಸಿನ ಪ್ರೇಮ, ಸ್ನೇಹ ಎಲ್ಲವನ್ನೂ ಈ ಸಿನೆಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಸ್ನೇಹ ಸಂಬಂಧದ ಬಗ್ಗೆ ಕಾಳಜಿವಹಿಸುವ ನಾಯಕ ನವೀನ್, ಮತ್ತೊಂದು ಗುಂಪಿನ ವಿರೋಧ ಕಟ್ಟಿಕೊಳ್ಳುತ್ತಾನೆ.

ಮತ್ತೊಂದು ಗುಂಪಿನ ನಾಯಕ ಪ್ರದೀಪ್ ಮತ್ತು ನವೀನ್ ಗುಂಪಿನ ಮಧ್ಯೆ ಸಣ್ಣ ಪುಟ್ಟ ಜಗಳಗಳಿದ್ದರೂ, ಆ ಜಗಳ ವಿಪರೀತಕ್ಕೆ ಹೋಗುವುದು ನಾಯಕಿ ಎಂಟ್ರಿ ಆದಾಗಲೇ. ಹಾಗಂತ ನಾಯಕಿ ಇಲ್ಲಿ ಸ್ನೇಹಿತರನ್ನು ದೂರ ಮಾಡುವುದಿಲ್ಲ, ಬದಲಾಗಿ ಎಲ್ಲರನ್ನೂ ಒಟ್ಟಿಗೆ ಸ್ನೇಹದಿಂದ ಜೊತೆಯಲ್ಲಿ ಕರೆದುಕೊಂಡುಹೋಗುವ ಪ್ರಯತ್ನ ಮಾಡುತ್ತಾಳೆ. ಆದರೂ ಹುಡುಗಿಗಾಗಿ ಮತ್ತೆ ಜಗಳ, ಮುನಿಸು ಇದ್ದೇ ಇರುತ್ತದೆ. ಮತ್ತೊಬ್ಬ ಸ್ನೇಹಿತನ ಪ್ರೀತಿಗಾಗಿ ಹೋರಾಡಲು ಹೋಗಿ, ಸ್ನೇಹಿತರೆಲ್ಲರೂ ಬೇರೆ ಬೇರೆಯಾಗುವ ಕಥೆಯೇ ಪದವಿಪೂರ್ವ ಸಿನೆಮಾ.

ಹುಡುಗಿಗಾಗಿ ಶುರುವಾಗುವ ವೈಮನಸ್ಸು, ಸ್ನೇಹಿತನಿಗೆ ಕಷ್ಟ ಬಂದಾಗ ಕರಗಿ ಹೋಗುತ್ತದೆ. ಎಲ್ಲರೂ ಸ್ನೇಹ ಮನೋಭಾವದಿಂದ ತಮ್ಮ ಶಿಕ್ಷಣ ಮುಗಿಸುತ್ತಾರೆ. ಆದರೆ ನಿಜವಾದ ತಿರುವು ಇರುವುದು ಇಲ್ಲಿಯೇ. ಅಷ್ಟಕ್ಕೂ ನಾಯಕ ಮತ್ತು ಅವನ ವಿರೋಧಿ ಪ್ರದೀಪ್ ಮಧ್ಯೆ ವೈಮನಸ್ಸು ಹಾಗೆಯೇ ಉಳಿಯುತ್ತದೆಯೇ? ನಾಯಕಿ ಅವರನ್ನು ಒಂದು ಮಾಡುತ್ತಾಳೆಯೇ? ಸಿನೆಮಾದ ಕ್ಲೈಮ್ಯಾಕ್ಸ್ ಏನು ಅನ್ನುವುದು ಗೊತ್ತಾಗಬೇಕಾದರೆ ಸಿನೆಮಾ ನೋಡಲೇಬೇಕು. ಯಾಕೆಂದರೆ ಸಿನೆಮಾದ ನಿಜವಾದ ಟರ್ನಿಂಗ್ ಪಾಯಿಂಟ್ ಇರೋದು ಕ್ಲೈಮ್ಯಾಕ್ಸ್‌ನಲ್ಲೇ.

ಯೋಗರಾಜ್ ಭಟ್ಟರ ಶಿಷ್ಯ ಹರಿಪ್ರಸಾದ್ ಮೊದಲ ನಿರ್ದೇಶನದಲ್ಲೇ ಸಕ್ಸಸ್ ಆಗಿದ್ದಾರೆ. ಕಥೆ ಅಲ್ಲಲ್ಲಿ ಪೇಲವ ಅನಿಸಿದರೂ, ಮೊದಲ ನಿರ್ದೇಶನ ಅನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಸಿನೆಮಾ ನೋಡಿದರೆ ಮನ್ನಿಸಬಹುದು. ಇನ್ನು ಈ ಚಿತ್ರದಲ್ಲಿ ನಟಿಸಿರುವ ಕಲಾವಿದರೂ ಅಷ್ಟೇ. ಹೊಸ ಪ್ರತಿಭೆಗಳಾದರೂ ಪಾತ್ರವನ್ನು ಅರ್ಥ ಮಾಡಿಕೊಂಡು ಅಭಿನಯಿಸಿದ್ದಾರೆ. ನಾಯಕನಾಗಿ ನಟಿಸಿರುವ ಪೃಥ್ವಿ ಶ್ಯಾಮನೂರ್, ನಾಯಕಿಯರಾದ ಅಂಜಲಿ, ಯಶಾ ತಮ್ಮ ಪಾತ್ರಕ್ಕೆ ಜೀವತುಂಬಿದ್ದಾರೆ.

ಪದವಿ ಪೂರ್ವದ ಗೋಲ್ಡನ್ ಲೈಫ್, ಜೊತೆಗೊಂದಿಷ್ಟು ಭಾವನಾತ್ಮಕ ನಿರೂಪಣೆ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ. ನವ ನಿರ್ದೇಶಕನ ಸಿನೆಮಾ ಅನ್ನುವುದು ಗೊತ್ತಾಗುತ್ತಾದರೂ, ಕೊಟ್ಟ ದುಡ್ಡಿಗೆ ಸಿನೆಮಾ ಮೋಸ ಮಾಡುವುದಿಲ್ಲ. ಜೊತೆಗೆ ಒಂದಿಷ್ಟು ಸಂದೇಶ ಕೂಡ ಇರುವುದರಿಂದ, ಯುವ ಪೀಳಿಗೆಗೆ ಇಂತಹ ಸಬ್ಜೆಕ್ಟ್‌ಗಳು ಬೇಕು ಅನ್ನಿಸುವಂತಾಗುತ್ತದೆ. ಅರ್ಜುನ್ ಜನ್ಯಾ ಸಂಗೀತ ಕೂಡ ಸಿನೆಮಾದ ತೂಕವನ್ನು ಹೆಚ್ಚಿಸಿದೆ. ಜೊತೆಗೆ ಹಾಡುಗಳು ಕೂಡ ಅರ್ಥಪೂರ್ಣವಾಗಿದ್ದು, ಸ್ನೇಹ, ಪ್ರೀತಿ, ದ್ವೇಷ, ಜೀವನ ಇತ್ಯಾದಿ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡಿದೆ ಚಿತ್ರತಂಡ.


ಚಿತ್ರ: ಪದವಿಪೂರ್ವ
ನಿರ್ದೇಶಕ: ಹರಿಪ್ರಸಾದ್ ಜಯಣ್ಣ
ತಾರಾಗಣ: ಪೃಥ್ವಿ ಶ್ಯಾಮನೂರು, ಅಂಜಲಿ ಅನೀಶ್, ಯಶಾ ಶಿವಕುಮಾರ್
ಸಂಗೀತ ನಿರ್ದೇಶಕ: ಅರ್ಜುನ್ ಜನ್ಯ

share
ರಶ್ಮಿ ಎಸ್.
ರಶ್ಮಿ ಎಸ್.
Next Story
X