ಹೊಸ ವರ್ಷದ ಪಾರ್ಟಿಯಲ್ಲಿ ಸೆಲ್ಫಿ ವಿಚಾರದಲ್ಲಿ ಹೊಡೆದಾಟ, ಹಲವರಿಗೆ ಗಾಯ
![ಹೊಸ ವರ್ಷದ ಪಾರ್ಟಿಯಲ್ಲಿ ಸೆಲ್ಫಿ ವಿಚಾರದಲ್ಲಿ ಹೊಡೆದಾಟ, ಹಲವರಿಗೆ ಗಾಯ ಹೊಸ ವರ್ಷದ ಪಾರ್ಟಿಯಲ್ಲಿ ಸೆಲ್ಫಿ ವಿಚಾರದಲ್ಲಿ ಹೊಡೆದಾಟ, ಹಲವರಿಗೆ ಗಾಯ](https://www.varthabharati.in/sites/default/files/images/articles/2023/01/1/362091-1672556292.jpg)
ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಹೌಸಿಂಗ್ ಸೊಸೈಟಿಯೊಂದರಲ್ಲಿ ಹೊಸ ವರ್ಷದ ಪಾರ್ಟಿಯಲ್ಲಿ ಕೆಲವು ಪುರುಷರು ಮಹಿಳೆಯರಿಂದ ಸೆಲ್ಫಿಗಾಗಿ ಬಲವಂತಪಡಿಸಿದ ಕಾರಣಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ.
ನಿನ್ನೆ ರಾತ್ರಿ ಗೌರ್ ಸಿಟಿ ಫಸ್ಟ್ ಅವೆನ್ಯೂ ಸೊಸೈಟಿಯಲ್ಲಿ ನಡೆದ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪುರುಷರ ಗುಂಪೊಂದು ಇಬ್ಬರು ಮಹಿಳೆಯರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿತು. ಇದು ಮಹಿಳೆಯರ ಪತಿಯಂದಿರು ಹಾಗೂ ಆರೋಪಿಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಆರೋಪಿಗಳು ಇಬ್ಬರು ಪುರುಷರನ್ನು ಎಳೆದೊಯ್ದು ಥಳಿಸಿದರು. ಹೊಡೆದಾಟ ತಪ್ಪಿಸಲು ಹೋದ ಇತರ ಕೆಲವು ನಿವಾಸಿಗಳು ಹಾಗೂ ಭದ್ರತಾ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ಪುರುಷರು ತನ್ನ ಪತ್ನಿ ಹಾಗೂ ತನ್ನ ಸ್ನೇಹಿತನ ಪತ್ನಿಯೊಂದಿಗೆ ಬಲವಂತವಾಗಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದರು. ಇದನ್ನು ನಾನು ವಿರೋಧಿಸಿದ ನಂತರ ಆ ವ್ಯಕ್ತಿಗಳು ನನಗೆ ಹಾಗೂ ಸ್ನೇಹಿತ ರಿತೇಶ್ಗೆ ಹೊಡೆದಿದ್ದಾರೆ. ನಮ್ಮನ್ನು ರಕ್ಷಿಸಲು ಬಂದ ಇತರರಿಗೆ ಗಾಯವಾಗಿದೆ" ಎಂದು ಸೊಸೈಟಿ ನಿವಾಸಿ ಅಜಿತ್ ಕುಮಾರ್ ಹೇಳಿದರು.
Clash between two groups during #NewYear celebration at Gaur City 1st Avenue, Greater Noida. pic.twitter.com/BRmKqcXZ3y
— Nikhil Choudhary (@NikhilCh_) January 1, 2023