ಪ್ರಧಾನಿ ಮೋದಿ ನವ ಭಾರತದ ರಾಷ್ಟ್ರಪಿತ ಎಂಬ ಅಮೃತಾ ಫಡ್ನವಿಸ್ ಹೇಳಿಕೆಗೆ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ...
![ಪ್ರಧಾನಿ ಮೋದಿ ನವ ಭಾರತದ ರಾಷ್ಟ್ರಪಿತ ಎಂಬ ಅಮೃತಾ ಫಡ್ನವಿಸ್ ಹೇಳಿಕೆಗೆ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ... ಪ್ರಧಾನಿ ಮೋದಿ ನವ ಭಾರತದ ರಾಷ್ಟ್ರಪಿತ ಎಂಬ ಅಮೃತಾ ಫಡ್ನವಿಸ್ ಹೇಳಿಕೆಗೆ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ...](https://www.varthabharati.in/sites/default/files/images/articles/2023/01/1/362094-1672562954.jpg)
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar Chief Minister Nitish Kumar) ಅವರು ಶನಿವಾರ ಅಮೃತಾ ಫಡ್ನವಿಸ್ ಅವರ 'ನವ ಭಾರತದ ರಾಷ್ಟ್ರಪಿತ' ಹೇಳಿಕೆಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ವ್ಯಂಗ್ಯವಾಡಿದರು ಹಾಗೂ 'ನವ ಭಾರತದ' 'ಹೊಸ ತಂದೆ' ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರು ಡಿಸೆಂಬರ್ 21 ರಂದು ಪ್ರಧಾನಿ ಮೋದಿಯವರನ್ನು 'ನವ ಭಾರತದ ರಾಷ್ಟ್ರಪಿತ' ಎಂದು ಕರೆದಿದ್ದರು.
ಈ ಹೊಗಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಕುಮಾರ್, "ಸ್ವಾತಂತ್ರ್ಯ ಹೋರಾಟಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ, ಆರೆಸ್ಸೆಸ್ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿಲ್ಲ... ನಾವು 'ರಾಷ್ಟ್ರದ ಹೊಸ ಪಿತಾಮಹ' ಎಂಬ ಹೊಗಳಿಕೆಯ ಮಾತನ್ನು ಓದಿದ್ದೇವೆ. .. 'ನವ ಭಾರತ'ದ 'ಹೊಸ ತಂದೆ' ರಾಷ್ಟ್ರಕ್ಕಾಗಿ ಏನು ಮಾಡಿದ್ದಾರೆ?" ಎಂದು ಕೇಳಿದ್ದಾರೆ.
"ಭಾರತವು ಇಬ್ಬರು ರಾಷ್ಟ್ರ ಪಿತಾಮಹರನ್ನು ಹೊಂದಿದೆ. ಒಬ್ಬರು ಹಿಂದಿನ ಭಾರತಕ್ಕೆ ಸೇರಿದವರು ಹಾಗೂ ಇನ್ನೊಬ್ಬರು ಹೊಸ ಭಾರತಕ್ಕೆ ಸೇರಿದವರು. ಮಹಾತ್ಮ ಗಾಂಧಿ ಅವರು ಭಾರತದ 'ರಾಷ್ಟ್ರಪಿತ' ಎಂದು ನಾನು ನಂಬುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ನವ ಭಾರತದ 'ರಾಷ್ಟ್ರಪಿತ'ನಾಗಿದ್ದಾರೆ'' ಎಂದು ಡಿಸೆಂಬರ್ 21 ರಂದು ಅಮೃತಾ ಫಡ್ನವಿಸ್ ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಮರುಪ್ರಶ್ನೆ ಮಾಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ಮಹಾತ್ಮ ಗಾಂಧಿಯವರನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ ಎಂದರಲ್ಲದೆ ಬಿಜೆಪಿಯ "ನವ ಭಾರತ" ವನ್ನು ವ್ಯಂಗ್ಯವಾಡಿದರು. ಕೆಲವೇ ಶ್ರೀಮಂತ ಉದ್ಯಮಿಗಳಿಗಾಗಿ ಮೋದಿಜಿಯನ್ನು ನವಭಾರತದ 'ರಾಷ್ಟ್ರಪಿತ'ವನ್ನಾಗಿ ಮಾಡಲು ಅವರು ಬಯಸಿದರೆ ಆಗ ಅವರು ಮಾಡಲಿ ಎಂದರು.
#WATCH | They had nothing to do with the fight for Independence. RSS didn't have any contribution towards the fight for Independence...we read about the remark of 'New father of nation'...what has the 'new father' of 'new India' done for nation?: Bihar CM Nitish Kumar
— ANI (@ANI) January 1, 2023
(31.12) pic.twitter.com/5RdJmrasIP