ಭಾರತದ ನಿರುದ್ಯೋಗ ದರ ಡಿಸೆಂಬರ್ನಲ್ಲಿ 16 ತಿಂಗಳಲ್ಲಿ ಗರಿಷ್ಟ ಮಟ್ಟಕ್ಕೆ: ಸಿಎಂಐಇ
ಹೊಸದಿಲ್ಲಿ: ಭಾರತದ ನಿರುದ್ಯೋಗ ದರವು ಡಿಸೆಂಬರ್ನಲ್ಲಿ ಹಿಂದಿನ ತಿಂಗಳಿನ 8 ಶೇ. ರಿಂದ 8.3ಶೇ. ಕ್ಕೆ ಏರಿದೆ. (India’s Jobless Rate Rises)ಇದು 16 ತಿಂಗಳುಗಳಲ್ಲಿ ಗರಿಷ್ಠವಾಗಿದೆ ಎನ್ನುವುದು ಭಾರತೀಯ ಆರ್ಥಿಕತೆಯನ್ನು ಮೇಲ್ವಿಚಾರಣೆ ಮಾಡುವ ಕೇಂದ್ರದ (CMIE) ಅಂಕಿಅಂಶಗಳಿಂದ ಬಹಿರಂಗವಾಗಿದೆ.
ನಗರ ನಿರುದ್ಯೋಗ ದರವು ಹಿಂದಿನ ತಿಂಗಳ ಶೇ. 8.96 ರಿಂದ ಡಿಸೆಂಬರ್ನಲ್ಲಿ ಶೇ. 10.09 ಕ್ಕೆ ಏರಿದೆ, ಆದರೆ ಗ್ರಾಮೀಣ ನಿರುದ್ಯೋಗ ದರವು 7.55 ಶೇ. ರಿಂದ 7.44 ಶೇ. ಕ್ಕೆ ಇಳಿದಿದೆ ಎಂದು ಡೇಟಾ ತೋರಿಸಿದೆ.
ನಿರುದ್ಯೋಗ ದರದ ಏರಿಕೆಯು "ಅದು ಕಾಣಿಸುವಷ್ಟು ಕೆಟ್ಟದ್ದಲ್ಲ" ಎಂದು CMIE ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಹೇಳಿದರು.
"ಅತ್ಯಂತ ಮುಖ್ಯವಾಗಿ, ಉದ್ಯೋಗ ದರವು ಡಿಸೆಂಬರ್ನಲ್ಲಿ 37.1 ಶೇ. ಕ್ಕೆ ಏರಿದೆ, ಇದು ಜನವರಿ 2022 ರಿಂದ ಅತ್ಯಧಿಕವಾಗಿದೆ" ಎಂದು ಅವರು ರಾಯಿಟರ್ಸ್ಗೆ ತಿಳಿಸಿದರು.
ಹೆಚ್ಚಿನ ಹಣದುಬ್ಬರವನ್ನು ತಡೆದುಕೊಳ್ಳುವುದು ಹಾಗೂ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ ಲಕ್ಷಾಂತರ ಯುವಜನರಿಗೆ ಉದ್ಯೋಗಗಳನ್ನು ಸೃಷ್ಟಿಸುವುದು 2024 ರ ಸಾರ್ವತ್ರಿಕ ಚುನಾವಣೆಯ ಮೊದಲು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ ದೊಡ್ಡ ಸವಾಲಾಗಿ ಉಳಿದಿದೆ.