ನಾಸಿಕ್ ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರ ಸಾವು; ಹಲವು ಕಾರ್ಮಿಕರು ಸಿಲುಕಿರುವ ಭೀತಿ
![ನಾಸಿಕ್ ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರ ಸಾವು; ಹಲವು ಕಾರ್ಮಿಕರು ಸಿಲುಕಿರುವ ಭೀತಿ ನಾಸಿಕ್ ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರ ಸಾವು; ಹಲವು ಕಾರ್ಮಿಕರು ಸಿಲುಕಿರುವ ಭೀತಿ](https://www.varthabharati.in/sites/default/files/images/articles/2023/01/1/362099-1672591098.jpg)
ನಾಸಿಕ್( ಮಹಾರಾಷ್ಟ್ರ): ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಕಾರ್ಖಾನೆಯೊಂದರಲ್ಲಿ ರವಿವಾರ ಸ್ಫೋಟದ ನಂತರ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವು ಕಾರ್ಮಿಕರು ಸಿಲುಕಿರುವ ಭೀತಿ ಇದೆ ಎಂದು NDTV ವರದಿ ಮಾಡಿದೆ.
ನಾಸಿಕ್ನ ಮುಂಡೆಗಾಂವ್ ಗ್ರಾಮದ ಕಾರ್ಖಾನೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಭಾರೀ ಬಾಯ್ಲರ್ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿರುವ ಹಲವಾರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಪ್ರಯತ್ನಿಸುತ್ತಿವೆ.
ಬೆಂಕಿ ಅನಾಹುತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story