Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು: ಹೊಸ ವರ್ಷದ ಮೊದಲ ದಿನ ಪಣಂಬೂರು...

ಮಂಗಳೂರು: ಹೊಸ ವರ್ಷದ ಮೊದಲ ದಿನ ಪಣಂಬೂರು ಬೀಚ್‌ನಲ್ಲಿ ಜಿಲ್ಲಾಧಿಕಾರಿ ಕಾರ್ಯಾಚರಣೆ; ಅಕ್ರಮ ಡಾಬಾಗಳಿಗೆ ಬೀಗ

1 Jan 2023 5:55 PM IST
share
ಮಂಗಳೂರು: ಹೊಸ ವರ್ಷದ ಮೊದಲ ದಿನ ಪಣಂಬೂರು ಬೀಚ್‌ನಲ್ಲಿ ಜಿಲ್ಲಾಧಿಕಾರಿ ಕಾರ್ಯಾಚರಣೆ; ಅಕ್ರಮ ಡಾಬಾಗಳಿಗೆ ಬೀಗ

ಮಂಗಳೂರು: ಹೊಸ ವರ್ಷದ ಮೊದಲ ದಿನವೇ ಪಣಂಬೂರು ಬೀಚ್‌ನಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವ ಹಾಗೂ ಸ್ವಚ್ಛತಾ ನಿಯಮಗಳನ್ನು ಪಾಲಿಸದೆ ಇರುವವರ  ವಿರುದ್ಧ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್. ಅವರು ರವಿವಾರ ಕಾರ್ಯಾಚರಣೆ ನಡೆಸಿದರು.

ಪಣಂಬೂರು ಬೀಚ್‌ನಲ್ಲಿ ಸ್ವಚ್ಛ ಸುಂದರ ಬೀಚ್ - ಸ್ವಚ್ಛತಾ ಬೀಚ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿ ಅನಧಿಕೃತವಾಗಿ ಫಾಸ್ಟ್ ಪುಡ್, ಸ್ಟುಡಿಯೋ, ಸುಲಭ ಶೌಚಾಲಯ  ನಡೆಸುತ್ತಿರುವ ಮಂದಿಗೆ ಸ್ವಚ್ಛತೆಯ ಪಾಠ ಹೇಳಿದ್ದಾರೆ. ಅಲ್ಲದೆ ಅವರು ಕಾನೂನಿನ ಮೂಲಕ ಚಾಟಿ ಬೀಸಿದ್ದಾರೆ.

ಹಲವು ಸಮಯಗಳಿಂದ ಇಲ್ಲಿ ವಹಿವಾಟು ನಡೆಸುತ್ತಿರುವವರು ಯಾವುದೇ ಪರವಾನಿಗೆ ಪಡೆಯದೆ ಎಲ್ಲ   ನಿಯಮ ,ಕಾನೂನುಗಳನ್ನು ಗಾಳಿಗೆ ತೂರಿ, ಠಿಕಾಣಿ ಹೂಡಿರುವುದು ಜಿಲ್ಲಾಧಿಕಾರಿ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.

ದ.ಕ.ಜಿಲ್ಲಾ ಕಾರ್ಯನಿರತ  ಪತ್ರಕರ್ತರ ಸಂಘವು  ಜಿಲ್ಲಾಡಳಿತ, ಮನಾಪ, ಮಂಗಳೂರು ವಿವಿ ಎನ್‌ಎಸ್‌ಎಸ್ , ಕ್ರೆಡೈ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಪಣಂಬೂರ್ ಬೀಚ್‌ನಲ್ಲಿ  ವರ್ಷದ ಮೊದಲ ದಿನ  ಸ್ವಚ್ಛತಾ ಅಭಿಯಾನ ಯೋಜನೆಯನ್ನು ಕಳೆದ ವರ್ಷ ಆರಂಭಿಸಿತ್ತು.  ಆದರೆ ಈ ವರ್ಷದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಅವರು ಮಿಂಚಿನ ಕಾರ್ಯಾಚರಣೆ ನಡೆಸಿ ಇಷ್ಟರ ತನಕ ಅಲ್ಲಿ ನಡೆಯುತ್ತಿದ್ದ, ನಿಯಮಬಾಹಿರ ವಹಿವಾಟುಗಳನ್ನು ನಡೆಸುತ್ತಿರುವವರಿಗೆ ಎಚ್ಚರಿಕೆ  ನೀಡಿದರು. ಸೂಕ್ತ ಪರವಾನಿಗೆ ಹೊಂದದೆ ಇರುವವರಿಗೆ ವ್ಯಾಪಾರ ಸ್ಥಗಿತಗೊಳಿಸಲು ಸೂಚನೆ ನೀಡಿದರು.

15 ನಿಮಿಷ ಟೈಮ್ ಕೊಡುತ್ತೇನೆ: ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಜಿಲ್ಲಾಧಿಕಾರಿ ಅವರು,  ಬೀಚ್ ಪಕ್ಕದ ಫಾಸ್ಟ್ ಪುಡ್ ಅಂಗಡಿಗಳಿಗೆ ಭೇಟಿ ನೀಡಿ, ಅವರಿಗೆ ಹೊಸ ವರ್ಷದ ಶುಭಾಶಯ ಹೇಳಿದರು. ಬಳಿಕ ಸ್ವಚ್ಛತೆಯ ಕುರಿತು ಪಾಠ ಹೇಳಿಕೊಟ್ಟರು. ಫಾಸ್ಟ್ ಫುಡ್ ಮಾಲಕನಲ್ಲಿ ಕಸ ವಿಲೇವಾರಿಗೆ ಏನು ಇಟ್ಟಿದ್ದಿಯಾ?  ತರಕಾರಿ ತ್ಯಾಜ್ಯಗಳನ್ನು  ಸಂಗ್ರಹಿಸಿಡಲು  ಅಂಗಡಿ ಮುಂದೆ ಕಸದ ಬುಟ್ಟಿ ಇಡಬೇಕಪ್ಪ ಎಂದು ನಯವಾಗಿ ಹೇಳುವ ಮೂಲಕ ಮಾತು ಆರಂಭಿಸಿದರು. ಡಾಬಾದ ಮಾಲಕ ನಾವೆಲ್ಲ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಕಸ ತುಂಬಿಸಿ ಇಡುತ್ತೇವೆ. ಮಹಾನಗರ ಪಾಲಿಕೆಯವರು ವಿಲೇವಾರಿ ಮಾಡುತ್ತಾರೆ. ನೋಡಿ ಅಲ್ಲಿದೆ ಎಂದು  ಅಂಗಡಿ ಮಾಲಕ  ಸ್ವಲ್ಪ ಮುಂದೆ ಇರುವ ಕಸದ ಮೂಟೆಗಳನ್ನು ಡಿಸಿಗೆ ತೋರಿಸಿದ.   ಪಾಲಿಕೆಯವರರು  ಕೊಂಡು ಹೋಗಲು ಇವತ್ತು ಬರುವುದಿಲ್ಲ  ಎಂದಾಗ,  ನಾಳೆ ಬರುತ್ತಾರೆ ಎಂದು ಆತ ಡಿಸಿಗೆ ಉತ್ತರ ಕೊಟ್ಟ.  ನಾಳೆಯೂ ಬರುವುದಿಲ್ಲ ಏನು ಮಾಡುತ್ತಿಯಾ?  ಎಂದು ಡಿಸಿ   ಪ್ರಶ್ನಿಸಿದಾಗ ಆತ ಏನೇನೊ ಹೇಳಿ ಜಾರಿಕೊಂಡ. ಆಗ ಡಿಸಿ ಅವರು, ನಿನಗೆ 15 ನಿಮಿಷ ಟೈಮ್ ಕೊಡುತ್ತೇನೆ. ನಾನು ತಿರುಗಿ ಬರುವ ಹೊತ್ತಿಗೆ  ಇಲ್ಲಿ  ಎಲ್ಲ ಕ್ಲೀನ್ ಆಗ ಬೇಕು  ಎಂದು ಖಡಕ್ ಎಚ್ಚರಿಕೆ ನೀಡಿದರು.

ಸ್ವಚ್ಛತಾ ಅಭಿಯಾನ ಮುಂದುವರಿಸಿದ ಡಿಸಿ ಅವರಿಗೆ  ಪಣಂಬೂರು ಬೀಚ್‌ನ ಅವ್ಯವಸ್ಥೆಯ ದರ್ಶನವಾಯಿತು.

ರಾಶಿ ರಾಶಿ ಕಸ, ಕುಡಿದು ಬಿಸಾಡಿದ ಮದ್ಯದ ಬಾಟ್ಲಿ ಮತ್ತು ಪ್ಲಾಸ್ಟಿಕ್ ಪ್ಲೇಟ್ , ತ್ಯಾಜ್ಯಗಳನ್ನು ಸುಟ್ಟು ಹಾಕಿರುವುದು,   ಡಿಸಿ ಅವರ ಗಮನಕ್ಕೆ ಬಂತು. ಸ್ವತ: ಡಿಸಿ ಅವರು ಕುಪ್ಪಿ ಚೂರುಗಳನ್ನು  ಇತರರ ಜೊತೆ ಹೆಕ್ಕಿ ಪ್ಲಾಸ್ಟಿಕ್ ಚೀಲದಲ್ಲಿ  ತುಂಬಿಸಿದರು. ಕಸದ ರಾಶಿ ಕ್ಷಣಾರ್ಧದಲ್ಲಿ ಖಾಲಿಯಾಯಿತು. ಕೊಳಚೆ ನೀರು, ಬೀಚ್ ಪಕ್ಕದಲ್ಲಿ ನಾಯಿ ಸತ್ತು ಬಿದ್ದಿದ್ದರೂ, ವಿಲೇವಾರಿ ಇಲ್ಲ. ಇವೆಲ್ಲವನ್ನು ನೋಡಿ ಅವರು ಇಷ್ಟಲ್ಲಾ ಅವ್ಯವಸ್ಥೆ ಇದ್ದರೂ, ಯಾರೂ ಕೂಡಾ ನನ್ನ ಗಮನಕ್ಕೆ ಯಾಕೆ ತಂದಿಲ್ಲ ಎಂದು ಸ್ವಚ್ಛತಾ ಅಭಿಯಾನದ ಸಂಘಟಕರನ್ನು ಪ್ರಶ್ನಿಸಿದರು.

ಪರವಾನಿಗೆ ಇಲ್ಲದ ಡಾಬಾ:   ಇವರ ಹೆಸರು  ರಾಜಕುಮಾರ್.  ಈತನ ಹೆಸರಲ್ಲಿ ನಾಲ್ಕು ಫಾಸ್ಟ್‌ಫುಡ್ ಡಾಬಾಗಳಿವೆ. ಆದರೆ ಯಾವುದಕ್ಕೂ ಲೈಸೆನ್ಸ್ ಇಲ್ಲ. ಮುಂಬೈ ಮೂಲದ ಈತ,  ಕಳೆದ 20 ವರ್ಷಗಳಿಂದಲೂ ಬಾಂಬೆ ಫಲೂದಾ  ಆ್ಯಂಡ್ ಕಾಲಕಟ್ಟ, ಬಾಂಬೆ  ಪಾವ್ ಬಾಜಿ ಆ್ಯಂಡ್ ಫಾಸ್ಟ್‌ಫುಡ್,  ಡಿಲ್ಲಿ  ದರ್ಬಾರ್ ಸೇರಿದಂತೆ ನಾಲ್ಕು ಡಾಬಾಗಳಿಗೆ ಈತನೆ ಮಾಲಕ. ಕಸವನ್ನು ಸಂಗ್ರಹಿಸಡಲು ಯಾವುದೇ ವ್ಯವಸ್ಥೆ ಇಲ್ಲ.

ಡಾಬಾಗಳಲ್ಲಿ ಸ್ವಚ್ಛತೆ ಇಲ್ಲ. ಬೀಚ್‌ಗೆ ಬರುವ ಪ್ರವಾಸಿಗಳು ತಿಂಡಿ ತಿಂದು  ಪ್ಲಾಸ್ಟಿಕ್ ಪ್ಲೇಟ್ ,ಗ್ಲಾಸ್‌ಗಳನ್ನು ಪಕ್ಕದಲ್ಲೇ ಎಸೆದು ಹೋಗುತ್ತಾರೆ. ಅವುಗಳನ್ನು ಸ್ವಚ್ಛಗೊಳಿಸುವ ವ್ಯವಸ್ಥೆ ಇಲ್ಲ. ಎಲ್ಲವನ್ನು ನೋಡಿದ ಜಿಲ್ಲಾಧಿಕಾರಿ ಅವರು ಡಾಬಾ ಮಾಲಕನ್ನು ತರಾಟೆಗೆ ತೆಗೆದುಕೊಂಡು ಡಾಬಾಗಳನ್ನು ಬಂದ್ ಮಾಡಿಸಿದರು. ಪಣಂಬೂರು ಪೊಲೀಸರಿಗೆ ಮತ್ತು ಮನಪಾ  ಆಯುಕ್ತರಿಗೆ ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

ಬೀಚ್‌ಗೆ ಬರುವ ಪ್ರವಾಸಿಗರ ಪೋಟೋ ತೆಗೆದು ಕೊಡುವ ಕಾಯಕ ನಡೆಸಲು ಟೆಂಟ್  ಹಾಕಿ ಸ್ಟುಡಿಯೋ ನಿರ್ಮಿಸಿರುವ  ಫೋಟೊಗ್ರಾಫರ್‌ಗಳನ್ನು ಡಿಸಿ ಪ್ರಶ್ನಿಸಿದಾಗ ಅವರು  ಯಾವುದೇ ಪರವಾನಿಗೆ ಪಡೆಯದಿರುವುದು , ಪರವಾನಿಗೆ ಪಡೆಯಲು ಹಿಂದೇಟು ಹಾಕಿರುವುದು ಮತ್ತು  ಇವರಲ್ಲಿ ಗುರುತು ಚೀಟಿ ಇಲ್ಲದಿರುವುದು ಡಿಸಿ ಗಮನಕ್ಕೆ  ಬಂತು.  ಇವರದ್ದು  ಕ್ರಿಮಿನಲ್ ಅಫೆನ್ಸ್ ಎಂದು ಡಿಸಿ ಅಭಿಪ್ರಾಯಪಟ್ಟರು.

ಸುಲಭ ಶೌಚಾಲಯವನ್ನೇ ಬೆಡ್, ಕಿಚನ್ ಮಾಡಿಕೊಂಡಿರುವುದು: ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ನಿರ್ಮಿಸಲಾಗಿರುವ ಸುಲಭ ಶೌಚಾಲಯದ ವ್ಯವಸ್ಥೆಯನ್ನು ವೀಕ್ಷಿಸಿದ ಡಿಸಿ ಆಕ್ರೋಶಗೊಂಡರು.  ಇಲ್ಲಿ ಸ್ವಚ್ಛತೆ ಇಲ್ಲದಿರುವುದು ಒಂದು ಕಡೆಯಾದರೆ, ಮಹಿಳಾ ವಿಐಪಿಗಳ ಅನಕೂಲಕ್ಕಾಗಿ  ಎಂದು ಬೋರ್ಡ್ ನೇತಾಡಿಸಿಕೊಂಡಿರುವ ಸುಲಭ ಶೌಚಾಲಯ ಕಟ್ಟಡವನ್ನು ಇದರ ನಿರ್ವಹಣೆ ಗುತ್ತಿಗೆಯನ್ನು ವಹಿಸಿಕೊಂಡವರು  ತಮ್ಮ ವಸತಿಗೃಹವನ್ನಾಗಿ ಮಾಡಿದರು. ಟಾಯ್ಲೆಟ್‌ನ ಮೂರು ಕೊಠಡಿಗಳ ಪೈಕಿ  ಒಂದು ಕೊಠಡಿಯನ್ನು ಬೆಡ್ ರೂಂ, ಇನ್ನೊಂದನ್ನು ಕಿಚನ್ ಆಗಿ ಬದಲಾಯಿಸಿರುವುದನ್ನು ನೋಡಿದ ಡಿಸಿ ಅವರು ಗರಂ ಆಗಿ, ಎಲ್ಲವನ್ನು ಖಾಲಿ ಮಾಡಿಸಿದರು.

ಪಾಲಿಕೆ, ಪೊಲೀಸ್ ಇಲಾಖಾ ಅಧಿಕಾರಿಗಳು ಗೈರು: ಸುಮಾರು ಮೂರು ಗಂಟೆಗಳ ಕಾಲ ಏಕಾಂಗಿಯಾಗಿ ಕಾರ್ಯಾಚರಣೆ ನಡೆಸಿದ ಡಿಸಿಗೆ ಸಾಥ್ ನೀಡಲು ಮಹಾನಗರಪಾಲಿಕೆ , ಪರಿಸರ ಇಲಾಖೆಯ ಅಧಿಕಾರಿಗಳು ಇರಲಿಲ್ಲ. ಡಿಸಿಯ ಅಂಗರಕ್ಷಕ ಒಬ್ಬರನ್ನು ಬಿಟ್ಟರೆ  ಪೊಲೀಸ್ ಇಲಾಖೆಯ  ಯಾರೂ ಇರಲಿಲ್ಲ.  ವಿದೇಶಿ  ಪ್ರವಾಸಿಗರು, ದೇಶದ ನಾನಾ ರಾಜ್ಯಗಳಿಂದ ಪಣಂಬೂರು ಬೀಚ್‌ಗೆ  ಬಂದು ಹೋಗುತ್ತಿದ್ದರೂ, ಪ್ರವಾಸಿಗರಿಗೆ ಸುರಕ್ಷತೆ ಇಲ್ಲ ಎಂಬ ಆರೋಪ ಸಾರ್ವಜನಿಕವಲಯದಲ್ಲಿ ಕೇಳಿಬರುತ್ತಿದೆ. 

share
Next Story
X