ಎರಡು ಹೆಲಿಕಾಪ್ಟರ್ ಗಳು ಮುಖಾಮುಖಿ ಢಿಕ್ಕಿ; ನಾಲ್ವರು ಮೃತ್ಯು, ಮೂವರು ಗಂಭೀರ

ಸಿಡ್ನಿ, ಜ.2: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಪ್ರದೇಶದಲ್ಲಿ ಆಗಸದಲ್ಲಿ 2 ಹೆಲಿಕಾಪ್ಟರ್ ಗಳು ಡಿಕ್ಕಿಯಾಗಿ 4 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನಪ್ರಿಯ ಪ್ರವಾಸೀತಾಣ ಗೋಲ್ಡ್ ಕೋಸ್ಟ್ ಪ್ರದೇಶದಲ್ಲಿ ಸಂಭವಿಸಿದ ಈ ದುರಂತದಲ್ಲಿ ಇತರ 3 ಮಂದಿ ಗಾಯಗೊಂಡಿದ್ದಾರೆ. ಆಗಸದಲ್ಲಿ ಡಿಕ್ಕಿಯಾದ ಬಳಿಕ ಒಂದು ಹೆಲಿಕಾಪ್ಟರ್ ಸಮುದ್ರ ದಡಕ್ಕೆ ಪತನಗೊಂಡಿದ್ದು ದಡದ ಉಸುಕಿನಲ್ಲಿ ಹೆಲಿಕಾಪ್ಟರ್ ರೆಕ್ಕೆ ಹೂತುಹೋಗಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ.
ಮತ್ತೊಂದು ಹೆಲಿಕಾಪ್ಟರ್ ಮರೈನ್ ಥೀಮ್ಪಾರ್ಕ್ ಬಳಿ ಸಮುದ್ರದ ದಡಕ್ಕೆ ಬಿದ್ದಿದ್ದು ಇದಕ್ಕೆ ಹೆಚ್ಚಿನ ಹಾನಿಯಾಗಿಲ್ಲ. ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ತಂಡವನ್ನು ರವಾನಿಸಲಾಗಿದೆ. ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಕ್ವೀನ್ಸ್ ಲ್ಯಾಂಡ್ ಪೊಲೀಸರು ಹೇಳಿದ್ದಾರೆ.
Next Story