ಡಿಕೆಎಸ್‍ಸಿ ಮಕ್ಕತುಲ್ ಮುಕರ್ರಮ್ ವಲಯದ ಕುಟುಠಂಬ ಸಮ್ಮಿಲನ ಕಾರ್ಯಕ್ರಮ

ಕಾಪು: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ಇದರ ಜಿದ್ದಾ ಮಕ್ಕತುಲ್ ಮುಕರ್ರಮ್ ವಲಯದ ಆಶ್ರಯದಲ್ಲಿ ಜಿದ್ದಾದ ಕ್ವೀನ್ ನೈಟ್ ಅಡಿಟೋರಿಯಂನಲ್ಲಿ ಆಯೋಜಿಸಿದ್ದ ಕುಟುಂಬ ಸಮ್ಮಿಲನ 2022 ಕಾರ್ಯಕ್ರಮವನ್ನು ಡಿಕೆಎಸ್‍ಸಿ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಸಯ್ಯದ್ ಮುಹಮ್ಮದ್ ತಂಗಳ್ ಉಚ್ಚಿಲ ಅವರು ಉದ್ಘಾಟಿಸಿದರು.
ಡಿಕೆಎಸ್‍ಸಿ ಜಿಲ್ಲಾ ಸಮಿತಿ ಮತ್ತು ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಇದರ ಕಾರ್ಯಾಧ್ಯಕ್ಷ ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ತಂಗಳ್ ಕುಂಬೋಳ್ ಅವರ ದುಆದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಗಣ್ಯರಾದ ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ತಂಗಳ್ ಕುಂಬೋಳ್ ಮತ್ತು ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಡಿಕೆಎಸ್‍ಸಿ ಸ್ಥಾಪಕ ಸದಸ್ಯ, ಜಿಲ್ಲಾ ಸಮಿತಿ ಕೋಶಾಧಿಕಾರಿ ಝೈನುದ್ದೀನ್ ಮುಕ್ವೆ, ಅಬೀರ್ ಹಾಸ್ಪಿಟಲ್ ಆಡಳಿತ ನಿರ್ದೇಶಕ ಫಹೀಂ ರಹ್ಮಾನ್, ಗಣ್ಯರಾದ ಝೈನ್ ಕುತ್ತಾರ್, ಜಿಲ್ಲಾ ಸಮಿತಿ ಕೋಶಾ„ಕಾರಿ ಝೈನುದ್ದೀನ್ ಮುಕ್ವೆ, ಬೆಳುವಾಯಿ ಮಾಸ್ಟರ್ ಗ್ರೂಫ್‍ನ ಅಬ್ದುಲ್ ರೆಹ್ಮಾನ್, ಕೇಂದ್ರ ಸಮಿತಿ ಕೋಶಾ„ಕಾರಿ ದಾವೂದ್ ಕಜೆಮಾರ್, ಕಾರ್ಯದರ್ಶಿ ಅಬೂಬಕ್ಕರ್ ಬರ್ವ, ಉಪಾಧ್ಯಕ್ಷ ಇಮ್ತಿಯಾಜ್ ಕುಂದಾಪುರ, ದಮಾಮ್ ವಲಯದ ಹಿರಿಯ ಮುಖಂಡ ಅಬ್ದುಲ್ ಖಾದರ್ ಸಕಲೇಶಪುರ, ಯಾಂಬು ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್ ಉಸ್ತಾದ್, ಮದೀನ ಮನ್ನವರ್ ಘಟಕದ ಅಧ್ಯಕ್ಷ ಶರೀಪ್ ಮರವೂರು, ಮುಕ್ಕತುಲ್ ಮುಕ್ರಮ್ ಘಟಕದ ಅಧ್ಯಕ್ಷ ಮಹಮ್ಮದ್ ಘಂಟಾಲ್‍ಕಟ್ಟೆ, ತಬೂಕ್ ಘಟಕದ ಪ್ರತಿನಿ„ ವಹಾಬ್ ವಳಚ್ಚಿಲ್, ತಾಯಿಫ್ ಘಟಕದ ಉಪಾಧ್ಯಕ್ಷ ಬಶೀರ್ ಉಸ್ತಾದ್, ಸಾಮಿರ್ ಘಟಕದ ಗೌರವಾಧ್ಯಕ್ಷ ಸಯ್ಯದ್ ಮುಹಮ್ಮದ್ ನಾಫಿ ಝಹರ್ ಅಲ್ ಸುಲ್ತಾನಿ ತಂಗಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಕ್ಕಳಿಗೆ ಮತ್ತು ಪುರುಷರಿಗೆ ರಸಪ್ರಶ್ನೆ ಸಹಿತ ಆಕರ್ಷಕ ಆಟಗಳು, ವಾಲಿಬಾಲ್, ಕ್ರಿಕೆಟ್ ಹಾಗೂ ಮಹಿಳೆಯರಿಗೆ ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ಡಿಕೆಸ್‍ಸಿ ಮಕ್ಕತುಲ್ ಮುಕರ್ರಮ್ ವಲಯ ಅಧ್ಯಕ್ಷ ಅಬ್ದುಲ್ ಮಜೀದ್ ಕಣ್ಣಂಗಾರ್ ಸ್ವಾಗತಿಸಿದರು. ಕೇಂದ್ರ ಸಮಿತಿ ಉಪಾಧ್ಯಕ್ಷ ಕೆ.ಎಚ್. ರಫೀಕ್ ಸೂರಿಂಜೆ ಪ್ರಸ್ತಾವನೆಗೈದರು. ಕಾರ್ಯಕ್ರಮ ಸಂಘಟನಾ ಸಮಿತಿ ಅಧ್ಯಕ್ಷ ಸಯ್ಯದ್ ಅಬ್ದುಲ್ ರಹ್ಮಾನ್ ತಂಗಳ್ ಉಚ್ಚಿಲ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ರದ್ವಿ ಕಾರ್ಯಕ್ರಮ ನಿರೂಪಿಸಿದರು.