ಸುರತ್ಕಲ್ ರೇಂಜ್ ಎಸ್ಕೆಎಸ್ಬಿವಿಯಿಂದ ನೌಶಾದ್ ಹಾಜಿ ಅನುಸ್ಮರಣೆ

ಸುರತ್ಕಲ್: ಸುರತ್ಕಲ್ ರೇಂಜ್ ಎಸ್ಕೆಎಸ್ಬಿವಿ ವತಿಯಿಂದ ನೌಶಾದ್ ಹಾಜಿ ಅನುಸ್ಮರಣೆ ಕಾರ್ಯಕ್ರಮವು ಬೊಳ್ಳೂರಿನ ಅರಬಿಕ್ ಮದರಸದಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುಎಸ್ಕೆಎಸ್ಬಿವಿ ಕನ್ವಿನರ್ ರಿಯಾಝ್ ಫೈಝಿ ಬೊಳ್ಳೂರು ವಹಿಸಿದ್ದರು. ಅನುಸ್ಮರಣೆ ಪ್ರಭಾಷಣೆ ಹಾಗೂ ದಿಕ್ರ್ ದುಆ ಮಜ್ಲಿಸ್ ಗೆ ಅರೀಫ್ ಬಾಖವಿ ನೇತೃತ್ವ ನೀಡಿದರು.
ಈ ಸಂದರ್ಭ ಇಮ್ರಾನ್ ಮಕ್ದೂಮಿ, ತ್ವಯ್ಯಿಬ್ ಫೈಝಿ, ಅನ್ಸಾರ್ ಅಝ್ಹರಿ, ಸೈಫುದ್ದಿನ್ ಅಝ್ಹರಿ, ಹಾಗೂ ಎಸ್ಕೆಎಸ್ಬಿವಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
Next Story





