ಮಿತ್ತೂರು ರೈಲ್ವೆ ಮೇಲ್ಸೇತುವೆಯ ಸೇಫ್ ಗಾರ್ಡ್ ನಲ್ಲಿ ಸಿಲುಕಿಕೊಂಡ ಲಾರಿ: ಸಂಚಾರ ಅಸ್ತವ್ಯಸ್ತ

ವಿಟ್ಲ: ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಮಿತ್ತೂರು ರೈಲ್ವೆ ಮೇಲ್ಸೇತುವೆಯ ಸೇಫ್ ಗಾರ್ಡ್ ಗೆ ಕಂಟೈನರ್ ಲಾರಿಯೊಂದು ಸಿಲುಕಿಕೊಂಡ ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರ ಮೊಟಕುಗೊಂಡ ಘಟನೆ ಮಂಗಳವಾರ ನಡೆದಿದೆ.
ಕಂಟೈನರ್ ಲಾರಿಯು ರೈಲ್ವೆ ಮೇಲ್ಸೇತುವೆಯ ಅಡಿಯಿಂದ ಸಂಚರಿಸುವ ವೇಳೆ ಈ ಅವಘಡ ಸಂಭವಿಸಿದೆ. ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿಯು ಮಿತ್ತೂರಿನ ರೈಲ್ವೆ ಮೇಲ್ಸೇತುವೆಯ ಸೇಫ್ ಗಾರ್ಡ್ ಗೆ ಢಿಕ್ಕಿಯಾಗಿ ಸಿಲುಕಿಕೊಂಡಿದ್ದು, ವಾಹನ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ.
ರೈಲ್ವೆ ಮೇಲ್ಸೇತುವೆಯನ್ನು ಪ್ರವೇಶಿಸುವ ಮತ್ತು ನಿರ್ಗಮಿಸುವ ಎರಡೂ ಕಡೆ ಭಾರೀ ಘನ ವಾಹನಗಳು ಪ್ರವೇಶಿಸದಂತೆ ಕಬ್ಬಿಣದ ತಡೆಯನ್ನು ಅಳವಡಿಸಲಾಗಿತ್ತು. ಆದರೆ, ಕೆಲವೊಂದು ಘನ ವಾಹನಗಳು ಇದರಡಿ ಪ್ರಯಾಸದಾಯಕವಾಗಿ ಪ್ರವೇಶಿಸುತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Next Story





