MEIF ವತಿಯಿಂದ ಉಳ್ಳಾಲದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ

ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ.ಕ, ಉಡುಪಿ ಜಿಲ್ಲೆ ವತಿಯಿಂದ ಉಳ್ಳಾಲ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿರುವ ಒಟ್ಟು 6 ವಿದ್ಯಾ ಸಂಸ್ಥೆಗಳ 277 ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರವು ಟಿಪ್ಪುಸುಲ್ತಾನ್ ಪಿ.ಯು ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಶಿವಕುಮಾರ್ ಅವರು ಭಾಗವಹಿಸಿ ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
MEIF ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಾಗಾರದ ಕನ್ವೀನರ್ ನಿಸ್ಸಾರ್ ಫಕೀರ್ ಮುಹಮ್ಮದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ, ಪರೀಕ್ಷೆ ಎದುರಿಸುವ ವಿಧಿ ವಿಧಾನಗಳು ಹಾಗೂ ವಿಶೇಷವಾಗಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಸರಳ ಕಲಿಕಾ ಕಲೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ ತರಬೇತಿದಾರ ಪ್ರೊ.ರಾಜೇಂದ್ರ ಭಟ್ ಅವರು ಕಾರ್ಯಾಗಾರ ನೆರವೇರಿಸಿದರು.
ಸೈಯದ್ ಮದನಿ ಕನ್ನಡ ಮಾಧ್ಯಮ ಶಾಲೆ ಹಳೆಕೋಟೆ ಇದರ ಪ್ರಾಂಶುಪಾಲ ಕೆ.ಮ್.ಕೆ ಮಂಜನಾಡಿ ಸ್ವಾಗತಿಸಿ, ಟಿಪ್ಪು ಸುಲ್ತಾನ್ ಕನ್ನಡ ಮಾಧ್ಯಮ ಶಾಲೆಯ ಪ್ರಾಂಶುಪಾಲ ಎಂ.ಎಚ್ ಮಲಾರ್ ವಂದಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಯು. ಕೆ ಇಬ್ರಾಹಿಮ್ ಅವರ ನೇತೃತ್ವದಲ್ಲಿ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಳ್ಳಾಲ ವಹಿಸಿತ್ತು.









