'ಲವ್‌ಜಿಹಾದ್ ಕಡೆಗೆ ಗಮನ ನೀಡಿ' ಹೇಳಿಕೆ: ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ

ಬೆಂಗಳೂರು, ಜ.3: ರಸ್ತೆ, ಮೋರಿ, ಚರಂಡಿ ಅಂತಹ ಸಣ್ಣ ವಿಷಯಗಳ ಬಗ್ಗೆ ಮಾತನಾಡಬೇಡಿ. ನಿಮ್ಮ ಮಕ್ಕಳ ಬದುಕಿನ ಪ್ರಶ್ನೆಗಾಗಿ ಲವ್ ಜಿಹಾದ್ ನಿಲ್ಲಿಸಲು ಭಾರತೀಯ ಜನತಾ ಪಕ್ಷ ಬೇಕು ಅನ್ನೋದನ್ನು ತಿಳಿದುಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಮಾಣಿಕವಾಗಿ ಇಲ್ಲಿ ಯಾವುದೆ ಆಶ್ಚರ್ಯವಿಲ್ಲ. ಅಭಿವೃದ್ಧಿ ಅಥವಾ ಉದ್ಯೋಗದ ಬಗ್ಗೆ ಬಿಜೆಪಿಗೆ ಯಾವಾಗ ಆದ್ಯತೆ ಇತ್ತು? ಕನಿಷ್ಠ ಪಕ್ಷ ಈಗ ತನ್ನ ಆದ್ಯತೆಯನ್ನು ಪ್ರಾಮಾಣಿಕವಾಗಿ ಒಪ್ಪಿದೆ. ಚಿಂತಿಸಬೇಡಿ, ರಾಜ್ಯದ ಜನರು ಬಿಜೆಪಿಗೆ ತಾವು ಏನನ್ನು ಆಯ್ಕೆ ಮಾಡಲಿದ್ದೇವೆ ಎಂಬುದನ್ನು ಶೀಘ್ರದಲ್ಲೇ ತಿಳಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಆತ್ಮೀಯ ಕನ್ನಡಿಗರೇ, ಬಿಜೆಪಿ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿಗೆ ‘ಅಭಿವೃದ್ಧಿ’ ಬೇಕಾಗಿಲ್ಲ. ಬಿಜೆಪಿಗೆ ‘ರಸ್ತೆ’ ಬೇಡ. ಬಿಜೆಪಿಗೆ ಒಳಚರಂಡಿ ಬೇಕಿಲ್ಲ. ಬಿಜೆಪಿಗೆ ಉದ್ಯೋಗ ಬೇಕಾಗಿಲ್ಲ. ಬಿಜೆಪಿಗೆ ಬೇಕಾಗಿರುವುದು ಲವ್ ಜಿಹಾದ್ ಮಾತ್ರ. ಬಿಜೆಪಿಗೆ ಬಾಗಿಲು ತೋರಿಸುವ ಸಮಯ ಇದಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ.
ಮೋದಿಯವರ 8 ವರ್ಷ, ಬಿ.ಎಸ್.ಯಡಿಯೂರಪ್ಪ ಅವರ 2 ವರ್ಷ, ಬೊಮ್ಮಾಯಿಯವರ 1.5 ವರ್ಷದ ಆಡಳಿತದ ನಂತರವೂ ಅಭಿವೃದ್ಧಿ ವಿಚಾರಗಳ ಬದಲು ಕೋಮುಕಲಹದ ರಾಜಕಾರಣದ ಬಿಜೆಪಿಯ ಗುಪ್ತ ಕಾರ್ಯಸೂಚಿ ನಳಿನ್‍ಕುಮಾರ್ ಕಟೀಲ್ ಅವರ ಬಾಯಲ್ಲಿ ಹೊರಬಂದಿದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಮೂಲಕ ಬಿಜೆಪಿಯು ನಿರ್ಲಜ್ಜತನ ಹಾಗೂ ಅನೈತಿಕ ರಾಜಕಾರಣದ ಪರಮಾವಧಿ ತಲುಪಿದೆ. ಬಿಜೆಪಿ ಎಂದೂ ಜನಪರ, ಅಭಿವೃದ್ಧಿಪರ ರಾಜಕಾರಣ ಮಾಡಲ್ಲ ಎಂದು ಪ್ರಿಯಾಂಕ್ ಖರ್ಗೆ ಕಿಡಿಗಾರಿದ್ದಾರೆ.
''ರಸ್ತೆ, ಚರಂಡಿ, ರಸ್ತೆಗುಂಡಿಗಳು ಸಣ್ಣ ವಿಚಾರ. ರಸ್ತೆ ಗುಂಡಿಗಳಿಂದ ಜನ ಸತ್ತಿದ್ದೂ ಸಣ್ಣ ವಿಚಾರ. ಭ್ರಷ್ಟಾಚಾರ, ಕಮಿಷನ್ ಸಣ್ಣ ವಿಚಾರ. ಗುತ್ತಿಗೆದಾರರು ಸತ್ತಿದ್ದೂ ಸಣ್ಣ ವಿಚಾರ. 54 ಸಾವಿರ ಪಿಎಸ್ಸೈ ಅಭ್ಯರ್ಥಿಗಳ ಭವಿಷ್ಯ ಛಿದ್ರವಾಗಿದ್ದೂ ಸಣ್ಣ ವಿಚಾರ. ಯುವಕರ ನಿರುದ್ಯೋಗವೂ ಸಣ್ಣ ವಿಚಾರ. ರಾಜ್ಯ ಬಿಜೆಪಿಗೆ ದೊಡ್ಡ ವಿಚಾರ ಯಾವುದು?'' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
No surprises here honestly- when have BJP's priorities ever been about development or employment?
— DK Shivakumar (@DKShivakumar) January 3, 2023
Atleast the party is being honest about it now.
Don't worry people of Karnataka will tell BJP what they are going to choose soon. pic.twitter.com/qJ6On1Gd1l
ಬಿಜೆಪಿ ತನ್ನ ವೈಫಲ್ಯಗಳನ್ನು, ಭ್ರಷ್ಟಾಚಾರವನ್ನು ಮರೆಮಾಚಲು ಬಳಸುವುದು ಕೋಮು ಕಲಹವನ್ನು.
— Karnataka Congress (@INCKarnataka) January 3, 2023
ರಾಜ್ಯದ ಅಭಿವೃದ್ಧಿ, ಉದ್ಯೋಗ, ಶಿಕ್ಷಣದ ವಿಷಯಗಳು ಬಿಜೆಪಿಗೆ "ಸಣ್ಣ ವಿಷಯಗಳು"!
ಹೇಳಿಕೊಳ್ಳಲು ಅಭಿವೃದ್ಧಿಪರ ಸಾಧನೆಗಳಿಲ್ಲದ ಬಿಜೆಪಿ ಅವುಗಳ ಬಗ್ಗೆ ಮಾತೇ ಆಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ. pic.twitter.com/nwvQj9xelQ
ಮೋದಿಯವರ 8 ವರ್ಷ,
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 3, 2023
BSY ಅವರ 2 ವರ್ಷ,
ಬೊಮ್ಮಾಯಿಯವರ 1.5 ವರ್ಷದ ಆಡಳಿತದ ನಂತರವೂ ಅಭಿವೃದ್ಧಿ ವಿಚಾರಗಳ ಬದಲು ಕೋಮುಕಲಹದ ರಾಜಕಾರಣದ ಬಿಜೆಪಿಯ ಗುಪ್ತ ಕಾರ್ಯಸೂಚಿ @nalinkateel ಅವರ ಬಾಯಲ್ಲಿ ಹೊರಬಂದಿದೆ.
ಈ ಮೂಲಕ ಬಿಜೆಪಿಯು ನಿರ್ಲಜ್ಜತನ ಹಾಗೂ ಅನೈತಿಕ ರಾಜಕಾರಣದ ಪರಮಾವಧಿ ತಲುಪಿದೆ.
ಬಿಜೆಪಿ ಎಂದೂ
ಜನಪರ, ಅಭಿವೃದ್ಧಿಪರ ರಾಜಕಾರಣ ಮಾಡಲ್ಲ pic.twitter.com/Uyo5BPYY1a







