ವಿಧಾನಸಭಾ ಚುನಾವಣೆ; ಸಮನ್ವಯ ಸಮಿತಿ ರಚಿಸಿದ ಕಾಂಗ್ರೆಸ್

ಬೆಂಗಳೂರು, ಜ.3:ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಪಕ್ಷ ಸಂಘಟನೆ ಚಟುವಟಿಕೆಗಳಿಗಾಗಿ ವಿಭಾಗವಾರು ಸಮನ್ವಯ ಸಮಿತಿ ರಚನೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಸಮನ್ವಯ ಸಮಿತಿಗೆ ಬಸವರಾಜ ರಾಯರೆಡ್ಡಿ ಅಧ್ಯಕ್ಷರಾಗಿದ್ದು, ವಿ.ಆರ್.ಸುದರ್ಶನ್, ಎನ್.ಎಸ್.ಬೋಸರಾಜ್, ಪ್ರಕಾಶ್ ರಾಥೋಡ್, ಆರ್.ಬಿ.ತಿಮ್ಮಾಪುರ್, ವೀರಕುಮಾರ್ ಪಾಟೀಲ್, ಅರವಿಂದ ಅರಳಿ, ಚಂದ್ರಶೇಖರ್ ಪಾಟೀಲ್, ಸುನೀಲ್ ಗೌಡ ಪಾಟೀಲ್, ಭೀಮರಾವ್ ಪಾಟೀಲ್, ಶರಣಗೌಡ ಎ.ಪಾಟೀಲ್.
ಕೆಎಸ್‍ಎಲ್ ಸ್ವಾಮಿ, ಮೋಹನ್ ಕೊಂಡಜ್ಜಿ, ಚನ್ನರಾಜ್ ಹಟ್ಟಿಹೊಳಿ, ಐ.ಜಿ.ಸನ, ಆರ್.ವೆಂಕಟಪ್ಪ ನಾಯಕ, ವಿಜಯಸಿಂಗ್, ತಿಪ್ಪಣ್ಣ ಕಮಕನೂರ್, ಶರಣಪ್ಪ ಮಟ್ಟೂರು, ಮರಿಗೌಡ ಪಾಟೀಲ್, ಶಿವಾನಂದ ಹುನಗುಂಟಿ ಸೇರಿದಂತೆ ಎಲ್ಲ ಮುಂಚೂಣಿ ಘಟಕ, ಸೆಲ್, ವಿಭಾಗಗಳ ರಾಜ್ಯಾಧ್ಯಕ್ಷರು ಸಮಿತಿಯಲ್ಲಿದ್ದಾರೆ.
ದಕ್ಷಿಣ ಕರ್ನಾಟಕ ಸಮನ್ವಯ ಸಮಿತಿಗೆ ಸಂಸದ ಜಿ.ಸಿ.ಚಂದ್ರಶೇಖರ್ ಅಧ್ಯಕ್ಷರಾಗಿದ್ದು, ಕೆ.ಗೋವಿಂದರಾಜ್, ಎಚ್.ಎಂ.ರೇವಣ್ಣ, ಎಸ್.ರವಿ, ಮಂಜುನಾಥ ಭಂಡಾರಿ, ಕೆ.ಅಬ್ದುಲ್ ಜಬ್ಬಾರ್, ಎಂ.ನಾರಾಯಣಸ್ವಾಮಿ, ಧರ್ಮಸೇನ, ಡಾ.ತಿಮ್ಮಯ್ಯ, ಬಿ.ಎನ್.ಚಂದ್ರಪ್ಪ, ಮಧು ಜಿ.ಮಾದೇಗೌಡ, ಎಂ.ಎಲ್.ಅನಿಲ್ ಕುಮಾರ್, ಆರ್.ರಾಜೇಂದ್ರ, ಎಂ.ಜಿ.ಗೂಳಿಗೌಡ.
ಪಿ.ವಿ.ಮೋಹನ್, ಬಿ.ಎಂ.ಸಂದೀಪ್, ಗಾಯತ್ರಿ ಶಾಂತೇಗೌಡ, ಆರ್.ವಿ.ವೆಂಕಟೇಶ್, ಎಂ.ಸಿ.ವೇಣುಗೋಪಾಲ್, ಜಿ.ಎ.ಬಾವಾ, ಎಸ್.ಎ.ಹುಸೇನ್, ನಿವೇದಿತಾ ಆಳ್ವಾ, ಆರ್.ಮಂಜುಳಾ ನಾಯ್ಡು, ರಾಮಕೃಷ್ಣ, ಎಚ್.ಕೆ.ಮಹೇಶ್, ಗುರುಪಾದಸ್ವಾಮಿ, ಮಲ್ಲಿಕಾರ್ಜುನ್ ಸೇರಿದಂತೆ ಎಲ್ಲ ಮುಂಚೂಣಿ ಘಟಕ, ಸೆಲ್, ವಿಭಾಗಗಳ ರಾಜ್ಯಾಧ್ಯಕ್ಷರು ಸಮಿತಿಯಲ್ಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







